ನವದೆಹಲಿ: ಐಶಾರಾಮಿ ಬೈಕು ತಯಾರಿಕಾ ಸಂಸ್ಥೆ ಹಾರ್ಲೆ ಡೇವಿಡ್ಸನ್ ವಿಶ್ವಾದ್ಯಂತ ತನ್ನ 2.38 ಲಕ್ಷ ಬೈಕ್‍ಗಳನ್ನು ಗ್ರಾಹಕರಿಂದ ಹಿಂದಕ್ಕೆ ಪಡೆದುಕೊಳ್ಳುತ್ತಿದೆ.
ಹಾರ್ಲೆ ಡೇವಿಡ್ಸನ್ ತನ್ನ 2017-18ರಲ್ಲಿ ತಯಾರಿಸಿದ್ದ 2,38,300 ಬೈಕುಗಳನ್ನು ವಿಶ್ವಾದ್ಯಂತ ಹಿಂಪಡೆದುಕೊಳ್ಳುತ್ತಿದೆ. ಬೈಕ್‍ಗಳಲ್ಲಿರುವ ಕ್ಲಚ್ ನಲ್ಲಿರುವ ತಾಂತ್ರಿಕ ದೋಷವನ್ನು ಸರಿಪಡಿಸಲು ವಾಪಸ್ಸು ಪಡೆದಿದೆ. ಸತತ ನಾಲ್ಕನೇ ಬಾರಿಗೆ ಕ್ಲಚ್ ಸಮಸ್ಯೆಯಿಂದ ಬೈಕುಗಳನ್ನು ಹಾರ್ಲೆ ಡೇವಿಡ್ಸನ್ ಹಿಂಪಡೆದುಕೊಳ್ಳುತ್ತಿದೆ. 2017-18ರ ಟೂರಿಂಗ್, ಟ್ರೈಕ್ ಹಾಗೂ ಸಿವಿಓ ಟೂರಿಂಗ್ ಮಾದರಿಯ ಬೈಕ್‍ಗಳನ್ನು ಹಿಂಪಡೆದುಕೊಂಡಿದ್ದರೆ, 2017ರ ಸಾಫ್ಟೇಲ್ ಮಾದರಿಯನ್ನು ಹಿಂದಕ್ಕೆ ಪಡೆದಿದೆ.
Advertisement
Advertisement
ಈ ಕುರಿತು ಹಾರ್ಲೆ ಡೇವಿಡ್ಸನ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಜಾನ್ ಓಲಿನ್, ನಮ್ಮ ಸವಾರರ ಸುರಕ್ಷತೆಯ ದೃಷ್ಟಿಯಿಂದ, ಬೈಕ್‍ಗಳಲ್ಲಿನ ಕ್ಲಚ್‍ಗೆ ಸಂಬಂಧಿಸಿದ ತಾಂತ್ರಿಕ ದೋಷವನ್ನು ಸರಿಪಡಿಸಲು ಬೈಕ್‍ಗಳನ್ನು ಹಿಂಪಡೆದುಕೊಳ್ಳುತ್ತಿದ್ದೇವೆ. ವಾಹನ ವಿತರಕ ಸಂಸ್ಥೆಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
Advertisement
ಈ ಹಿಂದೆಯೂ ಸಹ ಹಲವು ಬಾರಿ ಹಾರ್ಲೆ ಡೇವಿಡ್ಸನ್ ಬೈಕ್‍ಗಳನ್ನು ಹಿಂಪಡೆದುಕೊಂಡಿತ್ತು. 2013ರಲ್ಲಿಯೂ ಕ್ಲಚ್ ಸಂಬಂಧಿಸಿದ ಸಮಸ್ಯೆಯಿಂದ 29,046 ಬೈಕ್‍ಗಳನ್ನು ಹಿಂಪಡೆದುಕೊಂಡಿದ್ದರೆ, 2015ರಲ್ಲಿ 45,901 ಬೈಕ್‍ಗಳನ್ನು ಹಿಂಪಡೆದುಕೊಂಡಿತ್ತು. ಇದಲ್ಲದೇ 2016ರಲ್ಲಿಯೂ ಸಹ ಕ್ಲಚ್ ಸಮಸ್ಯೆಯಿಂದ ತನ್ನ 14 ಮಾದರಿಯ 27,232 ಬೈಕ್‍ಗಳನ್ನು ಹಿಂಪಡೆದು ಸರಿಪಡಿಸಿ ಕೊಟ್ಟಿತ್ತು.
Advertisement
2013ರಿಂದಲೂ ಕ್ಲಚ್‍ಗೆ ಸಂಬಂಧಿಸಿದಂತೆ ಹಾರ್ಲೆ ಡೇವಿಡ್ಸನ್ ಬೈಕ್‍ಗಳಲ್ಲಿ ಸಮಸ್ಯೆ ಕಂಡುಬರುತ್ತಿದೆ. ಇದಕ್ಕಾಗಿ ಹಲವು ರೀತಿಯ ತಾಂತ್ರಿಕ ಬದಲಾವಣೆಗಳನ್ನು ಸಂಸ್ಥೆ ಮಾಡುತ್ತಲೇ ಬಂದಿದೆ. ಮಾಸ್ಟರ್ ಸಿಲಿಂಡರ್ ಗೆ ಕ್ಲಚ್‍ಗಳು ಸರಿಯಾದ ಸ್ಪಂದನೆ ನೀಡದೇ ಇರುವುದರಿಂದ ತಾಂತ್ರಿಕ ದೋಷ ಎದುರಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv