LatestMain PostNational

ಗಾಂಧಿ ಕುಟುಂಬದ ವಿರುದ್ಧ ಸಿಡಿದ ಉತ್ತರಾಖಂಡ ಮಾಜಿ ಸಿಎಂ ರಾವತ್‌

ನವದೆಹಲಿ: ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಎಂದೇ ಹೆಸರಾಗಿರುವ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಈಗ ಮತ್ತೊಂದು ಹೇಳಿಕೆ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಹೆಸರನ್ನು ಉಲ್ಲೇಖಿಸದೇ ಕಾಂಗ್ರೆಸ್‌ನ ಗಾಂಧಿ ಕುಟುಂಬದ ವಿರುದ್ಧ ಬಂಡಾಯ ಏಳುವ ಸುಳಿವು ನೀಡಿದ್ದಾರೆ.

ಗಾಂಧಿಗೆ ಆಪ್ತರಾಗಿದ್ದರೂ ಹೆಸರನ್ನು ಉಲ್ಲೇಖಿಸದೇ, ಕಾಂಗ್ರೆಸ್‌ ನಾಯಕತ್ವ ನನ್ನನ್ನು ಕಡೆಗಣಿಸಿದೆ ಎಂದು ರಾವತ್‌ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಬಂಧ ಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನದಂತೆ: ಎಚ್‍ಡಿಕೆ

ಈ ಕುರಿತು ಟ್ವೀಟ್‌ ಮಾಡಿರುವ ರಾವತ್‌, ಇದು ವಿಚಿತ್ರವೇನಲ್ಲ? ಬರುವ ಚುನಾವಣೆಯ ಸಮುದ್ರದಲ್ಲಿ ಈಜಬೇಕು. ಆದರೆ ನನ್ನನ್ನು ಬೆಂಬಲಿಸುವ ಬದಲು ಸಂಘಟನೆ ನನ್ನ ವಿರುದ್ಧವೇ ತಿರುಗಿ ನಿಂತಿದೆ. ನನ್ನ ವಿರುದ್ಧ ನಕಾರಾತ್ಮಕವಾಗಿ ನಡೆದುಕೊಳ್ಳುತ್ತಿದೆ ಎಂದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾವು ಈಜುವಾಗ ಅನೇಕ ಶಕ್ತಿಗಳನ್ನು ಸಮುದ್ರದಲ್ಲಿ ಬಿಟ್ಟಿದ್ದಾರೆ. ಆ ಶಕ್ತಿಗಳು ನನ್ನ ಕೈ-ಕಾಲುಗಳನ್ನು ಕಟ್ಟಿ ಹಾಕಿವೆ. ನೀವು ತುಂಬ ದೂರ ಹೋಗಿದ್ದೀರಿ. ಸಾಕಷ್ಟು ಕೆಲಸಗಳನ್ನೂ ಮಾಡಿದ್ದೀರಿ. ಇದು ವಿಶ್ರಾಂತಿ ಸಮಯ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ನಾನು ದುರ್ಬಲಗೊಂಡಿಲ್ಲ, ಹೆದರಿ ಓಡಿ ಹೋಗುವುದಿಲ್ಲ. ಸದ್ಯ ಗೊಂದಲದಲ್ಲಿದ್ದೇನೆ. ಹೊಸ ವರ್ಷ ನನಗೆ ದಾರಿ ತೋರಲಿದೆ. ಭಗವಂತ ಕೇದಾರನಾಥ ನನಗೆ ದಾರಿ ತೋರುತ್ತಾನೆ ಎಂಬ ವಿಶ್ವಾಸವಿದೆ ಎಂದು ತಮ್ಮ ಮುಂದಿನ ನಿಲುವಿನ ಬಗೆಗೆ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2023ರ ವರೆಗೂ ಬೊಮ್ಮಾಯಿ ಸಿಎಂ ಆಗಿ ಮುಂದುವರಿಯಲಿದ್ದಾರೆ: ಪ್ರಹ್ಲಾದ್ ಜೋಶಿ

ಮುಂದಿನ ವರ್ಷದಲ್ಲಿ ನಡೆಯಲಿರುವ ಉತ್ತರಾಖಂಡ ಚುನಾವಣೆಗೂ ಮುನ್ನ ರಾವತ್‌ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಸದ್ಯ ಹರೀಶ್‌ ರಾವತ್‌ ಅವರು ಪಕ್ಷದ ನಾಯಕರಿಂದ ಪ್ರತ್ಯೇಕವಾಗಿದ್ದಾರೆ.

Leave a Reply

Your email address will not be published.

Back to top button