ಉಡುಪಿ: ಕ್ಯಾನ್ಸರ್‌ನಿಂದ ನಿಧನರಾದ ಚಿತ್ರನಟ ಹರೀಶ್ ರಾಯ್ (Harish Rai) ಅವರ ಅಂತ್ಯಕ್ರಿಯೆಯು ಉಡುಪಿಯಲ್ಲಿ ಬ್ರಾಹ್ಮಣ ಸಂಪ್ರದಾಯದ ವಿಧಿವಿಧಾನದಲ್ಲಿ ನೆರವೇರಿತು.
ಅಂಬಲಪಾಡಿಯಲ್ಲಿರುವ ಮೂಲ ಮನೆಯಲ್ಲಿ ತುಳು ಶಿವಳ್ಳಿ ಮಹತ್ವ ಬ್ರಾಹ್ಮಣ ಸಂಪ್ರದಾಯದ ಮೂಲಕ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು. ತುಳಸಿ ಕಟ್ಟೆ ಸಮೀಪ ಹರೀಶ್ ಆಚಾರ್ಯ ಪಾರ್ಥಿವ ಶರೀರವನ್ನು ಶುಚಿಗೊಳಿಸುವ ಕೆಲಸ ನಡೆಸಿದ ಕುಟುಂಬಸ್ಥರು, ತೀರ್ಥವನ್ನು ನೀಡಿ ಅಗಲಿದ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸಿದರು. ಇದನ್ನೂ ಓದಿ: KGF ಚಾಚಾ ಖ್ಯಾತಿಯ ಹರೀಶ್ ರಾಯ್ ಇನ್ನಿಲ್ಲ
ಉಡುಪಿಯ ಬೀಡಿನಗುಡ್ಡೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಸಹೋದರ ಸತೀಶ್, ಪುತ್ರರಾದ ರೋನೆತ್ ರಾಯ್, ರೋಷನ್ ರಾಯ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪತ್ನಿ, ಸಹೋದರ ಸಹೋದರಿಯರು ಅಂತಿಮ ನಮನ ಸಲ್ಲಿಸಿದರು. ರಾಯ್ ಅವರ ಪ್ರೀತಿಯ ನಾಯಿ ಕೂಡ ಅಂತಿಮ ದರ್ಶನ ಪಡೆಯಿತು.
ಉಡುಪಿಯ ಪ್ರತಿಷ್ಠಿತ ನೊವೆಲ್ಟಿ ಕುಟುಂಬಕ್ಕೆ ಸೇರಿದವರು ಹರೀಶ್ ಆಚಾರ್ಯ. ‘ಓಂ’ ಚಿತ್ರದ ನಂತರ ಹರೀಶ್ ಆಚಾರ್ಯ ಹೆಸರು ಹರೀಶ್ ರಾಯ್ ಎಂದು ಬದಲಾಗಿತ್ತು.


