– ಜೈಲು ಸೇರಿದ್ದವನಿಗೆ ಅಧ್ಯಕ್ಷ ಪಟ್ಟಕ್ಕೆ ಶಿಫಾರಸು ಮಾಡಿದ್ದ ದಿನೇಶ್ ಗುಂಡೂರಾವ್
ಮಂಗಳೂರು: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ (Kukke Subrahmanya Temple) ಅಧ್ಯಕ್ಷನಾಗಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ರೌಡಿಶೀಟರ್‌ವೊಬ್ಬನನ್ನು ಆಯ್ಕೆ ಮಾಡಲಾಗಿದೆ. ಭಾರಿ ವಿರೋಧದ ನಡುವೆಯೂ ಮಾಜಿ ರೌಡಿಶೀಟರ್‌ನನ್ನು ಸರ್ಕಾರ ಆಯ್ಕೆ ಮಾಡಿದೆ.
ಗ್ರಾಪಂ ಸದಸ್ಯನೂ ಆಗಿರುವ ಹರೀಶ್ ಇಂಜಾಡಿಗೆ ಅಧ್ಯಕ್ಷ ಪಟ್ಟ ಸಿಕ್ಕಿದೆ. ಈತ ದೇವಸ್ಥಾನದ ಆಡಳಿತ ಮಂಡಳಿಗೆ ದೋಖಾ ಮಾಡಿ ಜೈಲುಪಾಲಾಗಿದ್ದ. ಈತನಿಗೆ ಅಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಶಿಫಾರಸು ಮಾಡಿದ್ದರು. ಅದರಂತೆ ಹರೀಶ್‌ಗೆ, ಕುಕ್ಕೆ ವ್ಯವಸ್ಥಾಪನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ ಒಲಿದಿದೆ. ಆಡಳಿತ ಮಂಡಳಿ ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧ ಇದ್ದವರು ಸದಸ್ಯರಾಗಬಾರದು ಎಂಬ ನಿಯಮ ಮೀರಿ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ʻಬಿಬಿಎಂಪಿʼ ಹೆಸರು ಇತಿಹಾಸ ಪುಟಕ್ಕೆ – ಮೇ 15ರಿಂದ ʻಗ್ರೇಟರ್ ಬೆಂಗಳೂರುʼ ಆಡಳಿತ ಜಾರಿ
ನಕಲಿ ಚೆಕ್ ನೀಡಿ ಹಣ್ಣು-ಕಾಯಿ ಟೆಂಡರ್ ಮಾಡಿ ದೇವಸ್ಥಾನಕ್ಕೆ ವಂಚನೆ ಮಾಡಿದ್ದ ಆರೋಪವನ್ನು ಹರೀಶ್ ಇಂಜಾಡಿ ಎದುರಿಸುತ್ತಿದ್ದಾನೆ. ಈ ಪ್ರಕರಣದಲ್ಲಿ ಬಂಧನವೂ ಆಗಿತ್ತು. ಹರೀಶ್‌ಗೆ ಸದಸ್ಯ ಸ್ಥಾನ ನೀಡಲು ಸುಬ್ರಹ್ಮಣ್ಯ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಧಾರ್ಮಿಕದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಗೆ ಸ್ಥಳೀಯರು ಪತ್ರ ಬರೆದಿದ್ದರು. ರೌಡಿಶೀಟರ್ ಆಗಿದ್ದ ಹರೀಶ್ ಇಂಜಾಡಿಯನ್ನು ಅಧ್ಯಕ್ಷನನ್ನಾಗಿ ಮಾಡಬೇಡಿ ಅಂತಾ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಮರಳು ಮಾಫಿಯಾ ಮತ್ತು ಮರ ಕಳ್ಳ ಸಾಗಣೆ ಆರೋಪ ಈತ ಮೇಲಿದೆ ಎಂದು ಗಮನ ಸೆಳೆದಿದ್ದಾನೆ.
ಕುಕ್ಕೆ ಸುಬ್ರಹ್ಮಣ್ಯ ಅಧ್ಯಕ್ಷಗಾದಿಗೆ ಹರೀಶ್ ಇಂಜಾಡಿ ಆಯ್ಕೆ ಬೆನ್ನಲ್ಲೇ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ತಾಣಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ರೌಡಿಶೀಟರ್ ಎಂದಿದ್ದ ಕಾಂಗ್ರೆಸ್ ಆತನ ಮನೆಗೆ ಭೇಟಿ ನೀಡಿರಲಿಲ್ಲ. ಇದೀಗ ದಿನೇಶ್ ಗುಂಡೂರಾವ್ ಅವರ ಶಿಫಾರಸಿನಂತೆ ಮಾಜಿ ರೌಡಿಶೀಟರ್‌ಗೆ ಕುಕ್ಕೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ. ಇದನ್ನೂ ಓದಿ: ಕರ್ನಲ್ ಸೋಫಿಯಾ ಪತಿ ಮನೆ ಮೇಲೆ RSS ದಾಳಿ ವದಂತಿ – ಸುಳ್ಳು ಸುದ್ದಿ ನಂಬದಂತೆ ಬೆಳಗಾವಿ ಎಸ್ಪಿ ಮನವಿ