ದುಬೈ: ಭಾರತ ಮತ್ತು ಪಾಕ್ (Ind vs Pak) ನಡುವಿನ ಸೂಪರ್-4 ಪಂದ್ಯ ರಣಾಂಗಣದಂತೆ ಮಾರ್ಪಟ್ಟಿತ್ತು. ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರೀ ಹೈಡ್ರಾಮಾಗಳು ನಡೆಯಿತು. ಸ್ಲೆಡ್ಜಿಂಗ್, ಮಾತಿನ ಚಕಮಕಿ, ಗನ್ ಸೆಲೆಬ್ರೇಷನ್, ಕ್ಯಾಚ್ ವಿವಾದ ಸೇರಿ ಹಲವು ವಿವಾದಗಳಿಗೆ ಈ ಪಂದ್ಯ ಸಾಕ್ಷಿಯಾಯಿತು.
ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (Abhishek Sharma) ಪಾಕ್‌ನಲ್ಲಿ ಫೇಮಸ್ ಎನಿಸಿಕೊಂಡ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಇದು ಪಾಕ್ ಬೌಲರ್‌ಗಳನ್ನ ಕೆರಳಿಸಿತು. ಅದಕ್ಕಾಗಿ ಅಭಿ ಜೊತೆಗೆ ಸ್ಲೆಡ್ಜಿಂಗ್ ನಡೆಸುತ್ತ ಕಿರಿಕ್ ತೆಗೆದ ಹ್ಯಾರಿಸ್ ರೌಫ್‌ಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟರು.
Bhag rauf bhag 😡 #indvspak #Harisrauf pic.twitter.com/N4jX0f9tLO
— Piyush Arora (@cric11forecast) September 21, 2025
ನೇರಾ ನೇರ ನಿಂತ ರೌಫ್-ಅಭಿ
ಚೇಸಿಂಗ್ ವೇಳೆ ಶಾಹೀನ್ ಶಾ ಅಫ್ರಿದಿ ಎಸೆತಕ್ಕೆ ಮೊದಲ ಎಸೆತದಲ್ಲೇ ಅಭಿಶೇಕ್ ಶರ್ಮಾ ಸಿಕ್ಸರ್ ಸಿಡಿಸಿ ಪಾಕಿಸ್ತಾನ ಬೌಲರ್‌ಗಳನ್ನ ಕೆರಳಿಸಿದರು.ಬ ಳಿಕ ಸ್ಫೋಟಕ ಇನ್ನಿಂಗ್ಸ್ ಮೂಲಕ ಅಭಿಶೇಕ್ ಶರ್ಮಾ (Shaheen Shah Afridi) ಅರ್ಧಶತಕ ಸಿಡಿಸಿದರು. ಇದರ ನಡುವೆ ಶಾಹೀನ್ ಶಾ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ (Haris Rauf) ಅವರ ಪ್ರತಿ ಎಸತದಲ್ಲೂ ಅಬ್ಬರಿಸಿದ್ದರು. ಇದರಿಂದ ಕೆರಳಿದ ಬೌಲರ್ಸ್ ಶರ್ಮಾ ವಿರುದ್ಧ ಸ್ಲೆಡ್ಜಿಂಗ್ ನಡೆಸಿದರು. ಇದಕ್ಕೂ ಜಗ್ಗದ ಅಭಿ, ಮಾತಿನ ಮೂಲಕ ತಿರುಗೇಟು ನೀಡಿದರು. ನೇರಾ ನೇರ ನಿಂತ ಅಭಿಶೇಕ್ ಶರ್ಮಾ ಅಷ್ಟೇ ಖಾರವಾಗಿ ಉತ್ತರಿಸಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಅಂಪೈರ್ ಇಬ್ಬರ ಜಗಳ ಬಿಡಿಸಿದರು.
THE MOMENT HARIS RAUF GOT RATTLED…!!!!
– Abhishek Sharma 🥶🔥 pic.twitter.com/cLDWudae81
— Johns. (@CricCrazyJohns) September 21, 2025
ಬಾಲ್ ತಗೊಂಡ್ ಬಾ
ಇನ್ನೂ ಅಭಿ ಜೊತೆಗೆ ನಿಂತ ಶುಭಮನ್ ಗಿಲ್ ಕೂಡ ಮಾತಿನ ಮೂಲಕ ತಿರುಗೇಟು ನೀಡಿದರು. ಸ್ಲೆಡ್ಜಿಂಗ್ ಮಾಡುತ್ತಿದ್ದ ಹ್ಯಾರಿಸ್ ರೌಫ್ ಎಸತದಲ್ಲಿ ಬೌಂಡರಿ ಸಿಡಿಸಿ ನೇರವಾಗಿ ರೌಫ್ ಬಳಿ ಬಂದು ಹೋಗಿ ಬಾಲ್ ತಗೊಂಡ್ ಬಾ ಅಂತ ವ್ಯಂಗ್ಯ ಮಾಡಿದರು. ಒಟ್ಟಿನಲ್ಲಿ ಟೀಂ ಇಂಡಿಯಾ ಅಬ್ಬರಕ್ಕೆ ಪಾಕ್ ಸುಸ್ತಾಗಿತ್ತು.
ಭಾರತಕ್ಕೆ ಭರ್ಜರಿ ಜಯ
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಗೆಲುವಿಗೆ 172 ರನ್‌ಗಳ ಗುರಿ ಪಡೆದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಜಯ ಸಾಧಿಸಿತು.
ಅಭಿ, ಗಿಲ್ ಶತಕದ ಜೊತೆಯಾಟಕ್ಕೆ ಪತರುಗುಟ್ಟಿದ ಪಾಕ್
ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಜೊಡಿ ಮೊದಲ ಎಸೆತದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಕೇವಲ 8.4 ಓವರ್‌ಗಳಲ್ಲೇ 100 ರನ್ ಪೂರೈಸಿದ್ದ ಈ ಜೋಡಿ, ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 105 ರನ್‌ಗಳ ಜೊತೆಯಾಟ ನೀಡಿತ್ತು. ಈ ವೇಳೆ ಅಬ್ಬರಿಸುತ್ತಿದ್ದ ಗಿಲ್ 47 ರನ್ (28 ಎಸೆತ, 8 ಬೌಂಡರಿ) ಚಚ್ಚಿ ಫಹೀಮ್ ಅಶ್ರಫ್‌ಗೆ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾದರು.
ಇವರಿಬ್ಬರ ವಿಕೆಟ್ ಬಳಿಕವೂ ಅಭಿಷೇಕ್ ಶರ್ಮಾ ತನ್ನ ಬ್ಯಾಟಿಂಗ್ ಆರ್ಭಟ ಮುಂದುವರಿಸಿದರು. ಪಾಕಿಸ್ತಾನದ ಟಾಪ್ ಬೌಲರ್‌ಗಳೇ ಪತರುಗುಟ್ಟುವಂತೆ ಮಾಡಿದರು. ಕ್ರೀಸ್‌ನಲ್ಲಿ ಅಬ್ಬರಿಸುತ್ತಿದ್ದ ಅಭಿ 13ನೇ ಓವರ್‌ನಲ್ಲಿ ಅಬ್ರಾರ್ ಅಹ್ಮದ್‌ಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಲು ಯತ್ನಿಸಿ ಔಟಾದರು. ಸ್ಪೋಟಕ ಪ್ರದರ್ಶನ ನೀಡಿದ ಶರ್ಮಾ 39 ಎಸೆತಗಳಲ್ಲಿ 74 ರನ್ (5 ಸಿಕ್ಸರ್, 6 ಬೌಂಡರಿ) ಚಚ್ಚಿದರು.
ಬಳಿಕ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮಾ ಗೆಲುವಿನ ದಡ ಸೇರಿಸಿದರು. ತಿಲಕ್ ಅಯೇಯ 30 ರನ್ (19 ಎಸೆತ, 2 ಸಿಕ್ಸರ್, 2 ಬೌಂಡರಿ), ಸಂಜು ಸ್ಯಾಮ್ಸನ್ 13 ರನ್, ಗಳಿಸಿದ್ರೆ, ಹಾರ್ದಿಕ್ ಪಾಂಡ್ಯ ಅಜೇಯ 7 ರನ್ ಗಳಿಸಿದರು.