ನವೆಂಬರ್ ನಲ್ಲಿ ‘ಕನ್ನಡ್ ಗೊತ್ತಿಲ್ಲ’ ತೆರೆಗೆ

Public TV
1 Min Read
kannad gottila b

ಬೆಂಗಳೂರು: ರಾಮರತ್ನ ಪ್ರೊಡಕ್ಷನ್ಸ್ ಮೂಲಕ ಕುಮಾರ ಕಂಠೀರವ ಅವರು ನಿರ್ಮಿಸಿರುವ ‘ಕನ್ನಡ್ ಗೊತ್ತಿಲ್ಲ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ನವೆಂಬರ್‍ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಆರ್ ಜೆ ಮಯೂರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಕನ್ನಡ್ ಗೊತ್ತಿಲ್ಲ’ ಕನ್ನಡ ಭಾಷಾ ಪ್ರೇಮವನ್ನು ಸಾರುವ ಚಿತ್ರವಾಗಿದೆ. ಈ ಚಿತ್ರ ನವೆಂಬರ್ ನಲ್ಲೇ ತೆರೆಗೆ ಬರುತ್ತಿರುವುದು ವಿಶೇಷ.

kannad gottila
ಹೊರ ರಾಜ್ಯಗಳಿಂದ ಬರುವ ಅನ್ಯಭಾಷಿಗರು ಹಲವಾರು ವರ್ಷಗಳಿಂದಲೂ ಕರ್ನಾಟಕದಲ್ಲೇ ನೆಲೆಸಿದ್ದರೂ ಕನ್ನಡ ಭಾಷೆಯನ್ನು ಕಲಿತಿರುವುದಿಲ್ಲ. ಅವರನ್ನು ಕನ್ನಡದಲ್ಲಿ ಮಾತನಾಡಿಸಲು ಪ್ರಯತ್ನಿಸಿದರೂ ಕೂಡ ಸಾರಿ, ನಮಗೆ ಕನ್ನಡ್ ಗೊತ್ತಿಲ್ಲ ಎಂದು ಬಹಳ ಸುಲಭವಾಗಿ ಹೇಳಿಬಿಡುತ್ತಾರೆ. ಇಂಥದೇ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ನಿರ್ಮಿಸಿರುವ ‘ಕನ್ನಡ್ ಗೊತ್ತಿಲ್ಲ’ ಒಂದು ಥ್ರಿಲ್ಲರ್ ಚಿತ್ರವಾಗಿದೆ.

ಈ ಚಿತ್ರದಲ್ಲಿ ಬೆಡಗಿ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಧಾರಾಣಿ, ಪವನ್ ಕುಮಾರ್, ಧರ್ಮಣ್ಣ, ಸಂತೋಷ್ ಕರ್ಕಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರ ಛಾಯಾಗ್ರಹಣ ಹಾಗೂ ಸಂಕಲನವಿದೆ. ನಕುಲ್ ಅಭಯಂಕರ ಅವರ ಸಂಗೀತ ಸಂಯೋಜನೆಯಿದೆ.

Share This Article
Leave a Comment

Leave a Reply

Your email address will not be published. Required fields are marked *