ಹಾಸನಾಂಬೆ ದರ್ಶನ ಪಡೆದ ಹರಿಪ್ರಿಯಾ-ವಸಿಷ್ಠ ಜೋಡಿ

Public TV
1 Min Read
haripriya 1

ನ್ನಡ ಸಿನಿಮಾ ರಂಗದ ಹೆಸರಾಂತ ನಟ ವಸಿಷ್ಠ ಸಿಂಹ (Vasishtha Simha) ಹಾಗೂ ನಟಿ ಹರಿಪ್ರಿಯಾ (Haripriya) ಇಂದು ಹಾಸನಕ್ಕೆ ತೆರಳಿ ಹಾಸನಾಂಬೆ (Hassanambe) ದೇವಿ ದರ್ಶನ ಪಡೆದರು. ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂದ ಹಿನ್ನಲೆಯಲ್ಲಿ, ಕಳೆದ ಮೂರು ಗಂಟೆಯಿಂದ ಪ್ರವಾಸಿ ಮಂದಿರದಲ್ಲಿದ್ದ ವಶಿಷ್ಠ ಸಿಂಹ ದಂಪತಿ ಕಾಯ್ದರು. ಮಧ್ಯಾಹ್ನ 2.30 ರಿಂದ ನೈವೇದ್ಯ ಕಾರಣ ಗರ್ಭಗುಡಿ ಬಂದ್ ಮಾಡಿದ್ದರು ಅರ್ಚಕರು. ಗರ್ಭಗುಡಿ ಬಾಗಿಲು ತೆರೆಯುತ್ತಲೆ ಪ್ರವಾಸಿ ಮಂದಿರದಿಂದ ದೇವಿ ದರ್ಶನಕ್ಕೆ ಪತ್ನಿಯೊಂದಿಗೆ ಬಂದು ಹಾಸನಾಂಬೆಯ ದರ್ಶನ ಪಡೆದರು ವಸಿಷ್ಠ ಸಿಂಹ.

haripriya and vasishta 2

ಮೊದಲನೆ ಸರಿ ಬಂದಿರುವುದು ತುಂಬಾ ಖುಷಿಯಾಗಿದೆ. ಮದುವೆಯಾದ ಮೇಲೆ ಇವರ ಜೊತೆ ಬಂದಿದ್ದೇನೆ. ಎರಡು ವರ್ಷದ ಹಿಂದೆ ಇರುವ ಬಂದಾಗ ಹೇಗಾಯ್ತ ದೇವಿ ದರ್ಶನ ಅಂಥ ಕೇಳಿದ್ದೆ. ಈಗ ಒಟ್ಟಿಗೆ ಬಂದಿದ್ದೇವೆ, ತುಂಬಾ ಖುಷಿಯಾಯ್ತು. ಪುನಃ ಪುನಃ ದರ್ಶನ ಭಾಗ್ಯ ಕೊಡಮ್ಮ ಅಂತ ದೇವರ ಬಳಿ ಬೇಡ್ಕಂಡೆ. ಪ್ರತಿವರ್ಷ ಬರೋಣ ಅಂತ ಅಂದುಕೊಂಡಿದ್ದೇವೆ. ತಾಯಿ ಕರೆಸಿಕೊಳ್ಳಬೇಕು ಅಷ್ಟೇ ಎಂದರು ಹರಿಪ್ರಿಯಾ.

haripriya 2

ಹಾಸನಾಂಬೆ ದರ್ಶನಕ್ಕೆ ಪ್ರತಿ ವರ್ಷ ಬರುವುದು ನನಗೆ ಪ್ರತೀತಿ. ಇಷ್ಟು ವರ್ಷ ಒಬ್ಬನೇ ಬರ್ತಿದ್ದೆ, ಈ ವರ್ಷ ಹೆಂಡತಿ ಜೊತೆ ಬರುವಂತಹ ಸೌಭಾಗ್ಯ ಸಿಕ್ಕಿದೆ. ಪ್ರೀತ್ಸೋ ದಿನಗಳಲ್ಲಿ ಬೇಡಿಕೆ, ಹರಿಕೆ ಎಲ್ಲಾ ಇರುತ್ತಲ್ಲ, ಎಲ್ಲಾ ಸುಗಮವಾಗಿ ಆಗಲಿ, ಬೇಗ ಮದುವೆಯಾಗಲಿ ಎಂದು ತಾಯಿಯಲ್ಲಿ ಬೇಡಿಕೊಂಡಿದ್ದೆ. ಆ ಬೇಡಿಕೆ ಈಡೇರಿದೆ ಈಗ ಜೊತೆಯಲ್ಲಿ ಬಂದಿದ್ದೀವಿ. ಆ ತಾಯಿಯ ದರ್ಶನ ಪಡೆದಿದ್ದೆ ಒಂದು ಪುಣ್ಯ. ದರ್ಶನ ಸಿಗಲಿ ಎನ್ನುವುದೇ ನನ್ನ ಪ್ರಾರ್ಥನೆ. ಈ‌ ಬಾರಿ ಒಟ್ಟಿಗೆ ದರ್ಶನ ಮಾಡಿದ್ದೇವೆ ಎಂದಿದ್ದಾರೆ ವಸಿಷ್ಠ.

ಹರಿಪ್ರಿಯಾ ಮತ್ತು ವಸಿಷ್ಠ ಇತ್ತೀಚಿನ ದಿನಗಳಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಕೇವಲ ಕರ್ನಾಟಕದ ದೇವಸ್ಥಾನಗಳಿಗೆ ಮಾತ್ರವಲ್ಲ, ನೆರೆ ರಾಜ್ಯಗಳ ದೇವಸ್ಥಾನಕ್ಕೂ ಈ ಜೋಡಿ ಭೇಟಿ ನೀಡಿದೆ. ಮದುವೆ ನಂತರ ಸಾಕಷ್ಟು ದೇವಸ್ಥಾನಗಳಿಗೆ ಹರಿಪ್ರಿಯಾ ಮತ್ತು ವಸಿಷ್ಠ ಹೋಗಿದ್ದಾರೆ. ಇದೀಗ ಹಾಸನಕ್ಕೆ ತೆರಳಿದ್ದಾರೆ.

Share This Article