ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ವಸಿಷ್ಠ ಸಿಂಹ- ಹರಿಪ್ರಿಯಾ (Haripriya) ಅವರು ಶೂಟಿಂಗ್‌ಗೆ ಬ್ರೇಕ್ ಹಾಕಿ ಹನಿಮೂನ್‌ಗಾಗಿ ವಿದೇಶಕ್ಕೆ ಹಾರಿದ್ದಾರೆ. ಮಾರಿಷಸ್‌ಗೆ ವಸಿಷ್ಠ, ಹರಿಪ್ರಿಯಾ ತೆರಳಿದ್ದಾರೆ.
ಈ ವರ್ಷ ಜನವರಿ 26ಕ್ಕೆ ವಸಿಷ್ಠ ಸಿಂಹ(Vasita Simha) -ಹರಿಪ್ರಿಯಾ ಜೋಡಿ ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ನಟಿ ವಿದಿಶಾ ಶ್ರೀವಾಸ್ತವ
View this post on Instagram
ಮದುವೆಯ ಬಳಿಕ ಮಡಿಕೇರಿಗೆ ಹೋಗಿದ್ದ ಜೋಡಿ ನಂತರದ ದಿನಗಳಲ್ಲಿ ಇಬ್ಬರು ಸಿನಿಮಾಗಳಲ್ಲಿ ಬ್ಯುಸಿಯಾದರು. ಸಿನಿಮಾದ ಕೆಲಸದ ನಡುವೆಯೂ ಒಬ್ಬರಿಗೊಬ್ಬರು ಸಮಯ ನೀಡುತ್ತಿದ್ದರು. ಇದೀಗ ಮತ್ತೆ ಹನಿಮೂನ್‌ಗೆ ಸಿಂಹಪ್ರಿಯಾ ಜೋಡಿ ಈಸ್ಟ್ ಆಫ್ರಿಕಾದ ಮಾರಿಷಸ್‌ಗೆ ಹಾರಿದ್ದಾರೆ.
View this post on Instagram
ಮಾರಿಷಸ್‌ನ ಸುಂದರ ಸ್ಥಳಗಳಿಗೆ ಭೇಟಿ ನೀಡುತ್ತಾ, ವಸಿಷ್ಠ- ಹರಿಪ್ರಿಯಾ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಈ ಕುರಿತ ಫೋಟೋ, ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.