ಬೆಂಗಳೂರು: ಸಿಎಂ ವಿರುದ್ಧದ ಹರಿಪ್ರಸಾದ್ (Hariprasad) ಹೇಳಿಕೆಯಿಂದ ಪಕ್ಷಕ್ಕೆ ಇರಿಸು ಮುರಿಸು ಉಂಟಾಗಿದೆ ಎಂದು ಕಾಂಗ್ರೆಸ್‍ನ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ (T.B Jayachandra) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹರಿಪ್ರಸಾದ್ ಅವರಿಗೆ ಹೈಕಮಾಂಡ್ ನೋಟಿಸ್ ನೀಡಿರುವ ವಿಚಾರವಾಗಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ, ಹರಿಪ್ರಸಾದ್ ಕಾಂಗ್ರೆಸ್‍ನ (Congress) ಹಿರಿಯ ನಾಯಕರಾಗಿದ್ದಾರೆ. ನಾವೆಲ್ಲ ಒಂದೇ ಬಾರಿ ರಾಜಕೀಯಕ್ಕೆ ಬಂದವರು. ಅವರು ಎಐಸಿಸಿಯಲ್ಲಿ ಉನ್ನತ ಹುದ್ದೆಯಲ್ಲಿ ಇದ್ದರು. ಆದರೆ ಅವರು ಮಾತನಾಡುವಾಗ ಯೋಚನೆ ಮಾಡಬಹುದಿತ್ತು. ಇದು ಒಂದು ರೀತಿಯಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದಂತಾಗಿದೆ. ಅವರ ಹೇಳಿಕೆ ವಿಚಾರವಾಗಿ ಹೈಕಮಾಂಡ್ ನೋಟಿಸ್ ನೀಡಿದೆ. ಅದಕ್ಕೆ ಉತ್ತರ ಕೊಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: DCM ಹುದ್ದೆಗೆ ಹೆಚ್ಚು ಮಹತ್ವ ಕೊಡಬಾರದು, ಅದು ಸಾಂವಿಧಾನಿಕ ಹುದ್ದೆಯಲ್ಲ: ಟಿ.ಬಿ ಜಯಚಂದ್ರ
ಬಿಜೆಪಿ, ಜೆಡಿಎಸ್ ದೋಸ್ತಿ ವಿಚಾರವಾಗಿ, ಇತ್ತೀಚೆಗೆ ಯಾವುದೇ ತತ್ವ ಆಧಾರಗಳಿಲ್ಲದೆ ಹೊಂದಾಣಿಕೆ ನಡೆಯುತ್ತಿದೆ. ಜಾತ್ಯತೀತ ಎಂದು ಹೆಸರಿಟ್ಟುಕೊಂಡವರು ಬಿಜೆಪಿ ಜೊತೆ ಹೋಗುವುದು ಎಷ್ಟು ಸರಿ ಎನಿಸುತ್ತದೆ? ಜನ ಅದನ್ನು ಹೇಗೆ ಒಪ್ಪುತ್ತಾರೆ ಎನ್ನುವುದು ಚರ್ಚೆ ಆಗಬೇಕು ಎಂದಿದ್ದಾರೆ.
ಕೇವಲ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಮೈತ್ರಿ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಮೈತ್ರಿಯಿಂದ ಕಾಂಗ್ರೆಸ್‍ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬರಗಾಲ ಘೋಷಣೆಗೆ ಒತ್ತಾಯ – ಶಾಸಕರ ಕಾರ್ಯಕ್ರಮಗಳ ಘೇರಾವ್‍ಗೆ ರೈತ ಸಂಘ ನಿರ್ಧಾರ
Web Stories