ದಶಕಗಳ ಬಳಿಕ ದಾವಣಗೆರೆಯ ಗ್ರಾಮಕ್ಕೆ ಸಿಕ್ತು ಸಾರಿಗೆ ವ್ಯವಸ್ಥೆ

Public TV
1 Min Read
DVG BUS

ದಾವಣಗೆರೆ: ದಶಕಗಳಿಂದ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ಹರಿಹರ ತಾಲೂಕಿನ ನಾಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಈಗ ಸಾರಿಗೆ ವ್ಯವಸ್ಥೆಯಾಗಿದೆ.

ದಾವಣಗೆರೆಯ ಹರಿಹರದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಕೆಎಸ್ಆರ್‌ಟಿಸಿ ಬಸ್ ಓಡಿಸಿದ್ದಾರೆ. ಹಲವು ದಶಕಗಳಿಂದ ಬಸ್ ಬಾರದ ಹಳ್ಳಿಗಳಿಗೆ ಸರ್ಕಾರಿ ಬಸ್ ಸೌಲಭ್ಯವನ್ನು ಒದಗಿಸಿದ್ದು, ಬಸ್ ಓಡಿಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ.

bus

ಹರಿಹರ ತಾಲೂಕಿನ ನಾಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಬಸ್ ಸೌಕರ್ಯ ಇಲ್ಲದೆ ಪರದಾಡುತ್ತಿದ್ದರು. ಮಕ್ಕಳು ಶಾಲೆಗೆ ಹೋಗುವುದಕ್ಕೆ ಆಟೋವನ್ನು ಅವಲಂಬಿಸಿದ್ದರು. ಇಲ್ಲಿಗೆ ಅನೇಕ ಶಾಸಕರ ಬಂದಿದ್ದರು. ಅವರಿಗೆಲ್ಲಾ ಬಸ್ ವ್ಯವಸ್ಥೆ ಮಾಡಿಸುವಂತೆ ಮನವಿ ಮಾಡಿದ್ದೇವು. ಆದರೆ ಯಾರು ಕೂಡ ಸಾರಿಗೆ ವ್ಯವಸ್ಥೆ ಮಾಡಿಕೊಡಲಿಲ್ಲ. ಆದರೆ ಈ ಶಾಸಕ ರಾಮಪ್ಪ ಅವರು ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಶಾಸಕರ ಕಾರ್ಯವನ್ನು ಹೊಗಳಿದರು.

ಈ ವೇಳೆ ಸ್ವತಃ ಶಾಸಕರೇ ಹಸಿರು ಬಾವುಟ ತೋರಿಸಿ ಬಳಿಕ ಬಸ್ ಓಡಿಸಿದ್ದಾರೆ. ಆಗ ಮಕ್ಕಳು ಗ್ರಾಮಸ್ಥರು ರಾಮಪ್ಪ ಅವರಿಗೆ ಜೈಕಾರ ಹಾಕಿದ್ದು, ಬಸ್ ವ್ಯವಸ್ಥೆಯಿಂದ ಶಾಲೆ ಮಕ್ಕಳು ಹಾಗೂ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

https://www.youtube.com/watch?v=cpM4iRKL9o8

Share This Article
Leave a Comment

Leave a Reply

Your email address will not be published. Required fields are marked *