ಬೆಂಗಳೂರು: ಬಳೆಪೇಟೆಯಲ್ಲಿರುವ ಅತೀ ಪುರಾತನ ದೇವಾಲಯ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಹರಿದ್ವಾರದಿಂದ ತಂದ ಗಂಗಾಜಲವನ್ನು 2 ಸಾವಿರ ಶಿವ ದೇವಾಲಯ ಅಭಿಷೇಕಕ್ಕೆ ಮತ್ತು ಲಕ್ಷಾಂತರ ಭಕ್ತರಿಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Advertisement
ಗಂಗಾಜಲ ವಿತರಣಾ ಉದ್ಘಾಟನೆಯನ್ನು ಮಹರ್ಷಿ ಆನಂದ್ ಗುರೂಜಿಯವರು, ಮಾಜಿ ಸಚಿವರಾದ ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿರವರು ನೆರವೇರಿಸಿದರು. ಮಾಜಿ ಶಾಸಕ ಪ್ರಕಾಶ್ ಮತ್ತು ಬಿ.ಜೆ.ಪಿ.ಮುಖಂಡರು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು – ಅಮೆರಿಕ ಆಫರ್ ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷ
Advertisement
Advertisement
ಇದೇ ವೇಳೆ ಮಹರ್ಷಿ ಆನಂದ್ ಗುರೂಜಿಯವರು ಮಾತನಾಡಿ, ಸಕಲ ಸಂಕಷ್ಟಗಳ ನಿವಾರಣೆ ಶಿವಾನುಗ್ರಹ ಮುಖ್ಯ. ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಹರಿದ್ವಾರದಿಂದ ಗಂಗಾಜಲ ತರಿಸಿ, ಭಕ್ತರಿಗೆ ನೀಡಲಾಗುತ್ತಿದೆ. ಗಂಗಾ ಸ್ನಾನ ತುಂಗಾಪಾನ ಎನ್ನುವಂತೆ ಜನರು ಕಾಶಿಗೆ ಭೇಟಿ ನೀಡಬೇಕು. ರಾಜ್ಯದಲ್ಲಿ ಜಲಕ್ಷಾಮ ಬರದಿರಲಿ ಎಂದು ಗಂಗಾಪೂಜೆ, ಗಂಗಾರತಿ ಪೂಜೆ ನೆರವೆರಿಸಲಾಗಿದೆ. ಸರ್ವೇ ಜನಃ ಸುಖಿನೋ ಭವಂತು ಮಹಾಶಿವರಾತ್ರಿ ದಿನ ಶಿವನ ಧ್ಯಾನ ಮಾಡಿ ನಿಮ್ಮ ಸಂಕಷ್ಟಗಳು ನಿವಾರಣೆಯಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಶಾಂತಿಯುತವಾಗಿ ಬಿಕ್ಕಟ್ಟು ಪರಿಹರಿಸಿಕೊಳ್ಳಿ: ಉಕ್ರೇನ್, ರಷ್ಯಾಗೆ ತಾಲಿಬಾನ್ ಸಲಹೆ
Advertisement
ಮಾಲೂರು ಕೃಷ್ಣಯ್ಯ ಶೆಟ್ಟಿರವರು ಮಾತನಾಡಿ, ನಾನು ಮುಜರಾಯಿ ಸಚಿವನಾಗಿದ್ದಾಗ 2008ರಿಂದ ರಾಜ್ಯದ ಜನತೆಗೆ ಕೊಟ್ಟ ಮಾತಿನ ಪ್ರಕಾರ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೂಡ ಹರಿದ್ವಾರದಿಂದ ಪವಿತ್ರ ಗಂಗಾಜಲವನ್ನು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಗಂಗಾಜಲ ನೀಡಲಾಗುತ್ತದೆ. ಮುಜರಾಯಿ ಇಲಾಖೆಯವರು ಜಿಲ್ಲಾಧಿಕಾರಿಗಳಿಂದ ಗಂಗಾಜಲವನ್ನು ಸ್ವೀಕರಿಸಿ ಜಿಲ್ಲೆಯ ದೇವಾಲಯಗಳಿಗೆ ತಲುಪಿಸುತ್ತಾರೆ. ರಾಜ್ಯದ ಪುರಾತನ ಶಿವನ ದೇವಾಲಯಗಳಿಗೆ ಸರಿ ಸುಮಾರು 3,000 ದೇವಾಲಯಗಳಲ್ಲಿ ಶಿವನ ಮೂರ್ತಿಗೆ ಅಭಿಷೇಕ ಮತ್ತು ತೀರ್ಥ ವಿನಿಯೋಗಕ್ಕಾಗಿ ಎಲ್ಲಾ ಭಕ್ತಾದಿಗಳಿಗೆ ಪವಿತ್ರ ಗಂಗಾಜಲ ತಲುಪಿಸುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಿಗೆ ಸುಮಾರು 28 ವಾಹನಗಳಲ್ಲಿ ಸರಬರಾಜು ಮಾಡಲಾಗುತ್ತದೆ. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಶಿವಾಲಯಗಳಿಗೆ ಹಾಗೂ ಖಾಸಗಿ ಒಡೆತನದಲ್ಲಿರುವ ಶಿವನ ದೇವಸ್ಥಾನಗಳಿಗೆ ಸರಬರಾಜು ಮಾಡಲಾಗುತ್ತಿದೆ. ಹಿಂದೂವಾಗಿ ಹುಟ್ಟಿ, ಹಿಂದೂಗಳ ಸೇವೆ ಮಾಡುವ ಪುಣ್ಯ ನನ್ನದು ಎಂದರು.