ಗಾಂಧಿನಗರ: ಗುಜರಾತ್‍ನಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು ತಮ್ಮ ಟ್ವಿಟ್ಟರ್ ಬಯೋದಿಂದ ಪಕ್ಷದ ಹೆಸರನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಅವರು ಪಕ್ಷದಿಂದ ನಿರ್ಗಮಿಸುವ ಸುಳಿವು ನೀಡಿದ್ದಾರೆ.
Advertisement
ಕಳೆದ ಕೆಲವು ವರ್ಷಗಳಿಂದ ಪಕ್ಷದಿಂದ ನಿರ್ಗಮಿಸಿದ ಕಾಂಗ್ರೆಸ್ ನಾಯಕರು ಸಾಮಾನ್ಯವಾಗಿ ತಮ್ಮ ಟ್ವಿಟ್ಟರ್ ಬಯೋವನ್ನು ಬದಲಾಯಿಸುವ ಮೂಲಕ ಪಕ್ಷ ಬಿಡುವ ಮೊದಲ ಸುಳಿವು ಬಿಟ್ಟುಕೊಡುತ್ತಾರೆ. ಅದೇ ರೀತಿ ಹಾರ್ದಿಕ್ ಅವರು ರಾಜ್ಯದಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ಇದ್ದು, ಈಗ ಟ್ವೀಟ್ ಬಯೋದಿಂದ ಹೆಸರು ತೆಗೆದಿರುವುದು ಎಲ್ಲರಲ್ಲಿ ಅನುಮಾನ ಮೂಡಿಸಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಬೊಮ್ಮಾಯಿ ನೇತ್ರತ್ವದಲ್ಲಿ ಚುನಾವಣೆ: ನಳಿನ್
Advertisement
Advertisement
2019ರಿಂದಲೂ ಪಕ್ಷಕ್ಕಾಗಿ ದುಡಿಯುತ್ತಿರುವ 28 ವರ್ಷದ ಪಟೇಲ್ ಅವರನ್ನು ಗುಜರಾತ್‍ನಲ್ಲಿ ಕಾಂಗ್ರೆಸ್ ನಾಯಕರು ನಿರ್ಲಕ್ಷಿಸಿದ್ದಾರೆ. ಅದಕ್ಕೆ ಅವರು ಕೈ ಪಕ್ಷ ಬಿಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
Advertisement
ಅಲ್ಲದೇ ಕಳೆದ ತಿಂಗಳ ಹಿಂದೆ ಹಾರ್ದಿಕ್ ಪಟೇಲ್ ಅವರು, ಬಿಜೆಪಿಯಲ್ಲಿ ಕೆಲವು ವಿಷಯಗಳು ಒಳ್ಳೆಯದು ಇವೆ. ನಾವು ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಲೆ ಬಿಸಿಮಾಡಿಸಿದ್ದರು.
ರಾಜಕೀಯವಾಗಿ ಬಿಜೆಪಿ ತೆಗೆದುಕೊಂಡ ಇತ್ತೀಚಿನ ನಿರ್ಧಾರಗಳು ಚೆನ್ನಾಗಿವೆ. ಒಳ್ಳೆಯ ಕ್ರಮಗಳನ್ನು ತೆಗೆದುಕೊಳ್ಳುವ ಶಕ್ತಿ ಅವರಿಗಿದೆ ಎಂದು ನಾವು ಒಪ್ಪಿಕೊಳ್ಳಬೇಕು. ಅವರ ಪರವಾಗಿ ನಿಲ್ಲದೆ ಅಥವಾ ಅವರನ್ನು ಹೊಗಳದೆ, ನಾವು ಕನಿಷ್ಠ ಸತ್ಯವನ್ನು ಒಪ್ಪಿಕೊಳ್ಳಬಹುದು ಎಂದು ನಾನು ನಂಬುತ್ತೇನೆ ಎಂದು ಏಪ್ರಿಲ್ 22 ರಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದರು.
ಬಿಜೆಪಿ ಜೊತೆ ಪಕ್ಷ ಬದಲಾಯಿಸುವ ಕುರಿತು ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ, ನಾನು ಯಾವುದೇ ಮಾತುಕತೆ ಮಾಡಿಲ್ಲ. ನಾನು ಬಿಜೆಪಿಯ ಬಗ್ಗೆ ಯೋಚಿಸುವುದಿಲ್ಲ. ನಾನು ಬಿಜೆಪಿಯೊಂದಿಗೆ ಮಾತನಾಡುವುದಿಲ್ಲ. ಚರ್ಚೆಯು ಗುಜರಾತ್ ಜನರ ಬಗ್ಗೆ ಮತ್ತು ಜನರ ಹಿತಾಸಕ್ತಿಗಳ ಬಗ್ಗೆ ಮಾತ್ರ. ನಾನು ಅವರಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಪೊಲೀಸರೊಂದಿಗೆ ಹಾಡಿ ಕುಣಿದ ಹ್ಯಾಟ್ರಿಕ್ ಹೀರೋ : ‘ಟಗರು-2’ ಸುಳಿವು ಕೊಟ್ಟ ಶಿವಣ್ಣ
ಕೆಲವು ವರದಿಗಳ ಪ್ರಕಾರ ಅವರು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ(ಎಎಪಿ)ಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಸೂಚಿಸಲಾಗುತ್ತಿದೆ. ಇದು ಕಾಂಗ್ರೆಸ್‍ಗೆ ಹೋಲಿಸಿದರೆ ಗುಜರಾತ್‍ನಲ್ಲಿ ಉತ್ತಮ ಪ್ರತಿಪಕ್ಷವಾಗಿದೆ.