ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೃನಾಲ್ ಪಾಂಡ್ಯ ಅವರ ಮಲಸಹೋದರ ವೈಭವ್ ಪಾಂಡ್ಯ ಅವರನ್ನ ಮುಂಬೈ ಪೊಲೀಸರು (Mumbai Police) ಬಂಧಿಸಿರುವ ಘಟನೆ ನಡೆದಿದೆ. 4.3 ಕೋಟಿ ರೂ. ವಂಚಿಸಿರುವುದಾಗಿ (Cheating Case) ಹಾರ್ದಿಕ್ ಪಾಂಡ್ಯ ನೀಡಿದ ದೂರಿನ ಮೇರೆಗೆ ಅವರನ್ನ ಬಂಧಿಸಲಾಗಿದೆ.
ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಹಾಗೂ ವೈಭವ್ ಪಾಂಡ್ಯ (Vaibhav Pandya) ಮೂವರು ಸೇರಿ ನಡೆಸುತ್ತಿದ್ದ ಪಾಲುದಾರಿಕೆ ಸಂಸ್ಥೆಯಿಂದ ಪಾಂಡ್ಯ ಬ್ರದರ್ಸ್‌ಗೆ ವೈಭವ್ ನಷ್ಟವುಂಟು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಿಂಚಿ ಮಾಯವಾದ ಮಯಾಂಕ್ – ಗಾಯದ ಸಮಸ್ಯೆ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಕೃನಾಲ್ ಪಾಂಡ್ಯ!
Advertisement
Advertisement
ಹಾರ್ದಿಕ್, ಕೃನಾಲ್ (Krunal Pandya) ಮತ್ತು ವೈಭವ್ 2021ರಲ್ಲಿ ವ್ಯವಹಾರವೊಂದನ್ನ ಆರಂಭಿಸಿದ್ದರು. ಪಾಲುದಾರಿಕೆ ಸಂಸ್ಥೆ ಒಪ್ಪಂದದ ಪ್ರಕಾರ, ಬಂದ ಲಾಭದಿಂದ ಪಾಂಡ್ಯ ಬ್ರದರ್ಸ್‌ಗೆ ತಲಾ 40%, ವೈಭವ್‌ಗೆ 20% ಹಂಚಿಕೊಳ್ಳಬೇಕಿತ್ತು. ಆದ್ರೆ ವೈಭವ್ ಪ್ರತ್ಯೇಕ ಕಂಪನಿಯೊಂದನ್ನ ಸ್ಥಾಪಿಸಿ, ಪಾಂಡ್ಯ ಬ್ರದರ್ಸ್ ಸ್ಥಾಪಿಸಿದ್ದ ಸಂಸ್ಥೆ ಹಣವನ್ನ ಅದಕ್ಕೆ ಬಳಸಿಕೊಳ್ಳುತ್ತಿದ್ದರು. ಈ ಕುರಿತು ಹಾರ್ದಿಕ್ ಪಾಂಡ್ಯ ಅವರು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗಕ್ಕೆ (EOW) ದೂರು ನೀಡಿದ ಬಳಿಕ, ಪ್ರಕರಣ ದಾಖಲಿಸಿಕೊಂಡು ವೈಭವ್ ಪಾಂಡ್ಯ ಅವರನ್ನ ಬಂಧಿಸಲಾಗಿದೆ.
Advertisement
Advertisement
ಸದ್ಯ 2024 ಐಪಿಎಲ್ ಋತುವಿನ ಆರಂಭದಿಂದಲೂ ಸುದ್ದಿಯಲ್ಲಿದ್ದಾರೆ. 2022ರಲ್ಲಿ ಪದಾದರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡವನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಪಾಂಡ್ಯ 2024ರ ಆವೃತ್ತಿಯಲ್ಲಿ ಮತ್ತೆ ತವರು ಮುಂಬೈ ತಂಡಕ್ಕೆ ನಾಯಕನಾಗಿ ಮರಳಿದರು. ಆದ್ರೆ ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿಸಿದ ನಂತರ ಅವರ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಮೈದಾನದಲ್ಲೇ ಹಾರ್ದಿಕ್ ಪಾಂಡ್ಯ ಅವರ ಕಾಲೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನೂ ಓದಿ: ಫಿಫ್ಟಿ ಬಳಿಕ ಕೊಹ್ಲಿ ಸ್ಟ್ರೈಕ್‌ರೇಟ್ ಹೆಚ್ಚಾಗ್ಬೇಕಿತ್ತು – ಮ್ಯಾಕ್ಸಿ ತರ ಆದ್ರೆ ಏನ್ ಮಾಡೋಕಾಗುತ್ತೆ: ಸೆಹ್ವಾಗ್
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಂಡ್ಯ, ತಂಡದಲ್ಲಿ ನಮ್ಮ ಯೋಜನೆಗಳು ಸರಿಯಾಗಿವೆ, ಉದ್ದೇಶವೂ ಸರಿಯಾಗಿದೆ. ಎಲ್ಲವೂ ಕ್ಲಿಕ್ ಆಗುವ ದಿನಗಳು ಹತ್ತಿರ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸತತ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವಿನ ಖಾತೆ ತೆರೆಯಿತು. ಏಪ್ರಿಲ್ 11ರಂದು ಆರ್‌ಸಿಬಿ ವಿರುದ್ಧ ತವರು ಕ್ರೀಡಾಂಗಣ ವಾಂಖೆಡೆಯಲ್ಲಿ ಸೆಣಸಲಿದೆ.