-ನಾಯಕನ ಸ್ಥಾನಕ್ಕೆ ಪಾಂಡ್ಯ ಅರ್ಹನಲ್ಲ, ಮಹಿ ಸ್ಥಾನ ತುಂಬೋಕಾಗಲ್ಲ ಅಂತಾ ಟ್ರೋಲ್
ಜಾರ್ಜ್ಟೌನ್ (ಗಯಾನ): ವೆಸ್ಟ್ ಇಂಡೀಸ್ (West Indies) ವಿರುದ್ಧ ನಡೆದ T20 ಸರಣಿಯ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಆದ್ರೆ ಕೊನೆಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮಾಡಿದ ಎಡವಟ್ಟಿನಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
You deserve the world Tilak Varma. You did all the hard yards but the snake stole you spotlight.
1 like= 1 slap for Hardik Pandya.
1 retweet= 10 slaps for Hardik Pandya.
1 reply = 15 slaps for Hardik Pandya.#INDvsWI | #HardikPandya | #TilakVarma | Chapripic.twitter.com/KLno6CtQEM
— Bala⁴⁵Rohit (@bala45_rohit) August 8, 2023
Advertisement
ಬ್ಯಾಟಿಂಗ್ ವೈಫಲ್ಯ ಕಾರಣ ಸತತ ಸೋಲುಂಡಿದ್ದ ಟೀಂ ಇಂಡಿಯಾ (Team India), ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಸರಣಿ ಜಯದ ಕನಸು ಜೀವಂತವಾಗಿರಿಸಿಕೊಂಡಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ಭರ್ಜರಿ ಬ್ಯಾಟಿಂಗ್‌ನೊಂದಿಗೆ 83 ರನ್ ಗಳಿಸಿದರು. ಇನ್ನೂ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಯುವ ಬ್ಯಾಟರ್ ತಿಲಕ್ ವರ್ಮಾ 37 ಎಸೆತಗಳಲ್ಲಿ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಆದ್ರೆ ಕೊನೆಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅರ್ಧಶತಕ ತಪ್ಪಿಸಿದ್ದು ಟ್ರೋಲ್‌ಗೆ ಗುರಿಯಾಗಿದ್ದಾರೆ.
Advertisement
#HardikPandya selfish ???? pic.twitter.com/MyIODaQgqZ
— Avi Raaz (@AviRaaz20) August 8, 2023
Advertisement
ಕೊನೆಯ 14 ಎಸೆತಗಳಲ್ಲಿ ಟೀಂ ಇಂಡಿಯಾ ಗೆಲುವಿಗೆ 2 ರನ್‌ಗಳ ಅಗತ್ಯವಿತ್ತು. ಈ ವೇಳೆ 49 ರನ್‌ಗಳಿಸಿದ್ದ ತಿಲಕ್ ವರ್ಮಾ ನಾನ್ ಸ್ಟ್ರೈಕ್‌ನಲ್ಲಿದ್ದರು. 14 ಎಸೆತಗಳಲ್ಲಿ 14 ರನ್‌ಗಳಿಸಿ ಸ್ಟ್ರೈಕ್‌ನಲ್ಲಿದ್ದ ಪಾಂಡ್ಯ ತಿಲಕ್ ವರ್ಮಾಗೆ ಫಿಫ್ಟಿ ಮಾಡುವ ಅವಕಾಶ ಮಾಡಿಕೊಡ್ತಾರೆ ಎಂದು ಭಾವಿಸಲಾಗಿತ್ತು. ಆದ್ರೆ ಪಾಂಡ್ಯ, ರೋವ್ಮನ್ ಪೋವೆಲ್ ಬೌಲಿಂಗ್‌ಗೆ ಸಿಕ್ಸರ್ ಬಾರಿಸುವುದರೊಂದಿಗೆ ವಿನ್ನಿಂಗ್ ಶಾಟ್ ಬಾರಿಸಿದ್ರು. ಇದರಿಂದ ಅಭಿಮಾನಿಗಳು ಪಾಂಡ್ಯ ವಿರುದ್ಧ ಕೆಂಡ ಕಾರಿದ್ದಾರೆ.
Advertisement
ಎಂ.ಎಸ್ ಧೋನಿ, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನ ಉದಾಹರಣೆ ನೀಡಿ ಪಾಂಡ್ಯ ಅವ್ರನ್ನ ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ: ಸೂರ್ಯನ ಆರ್ಭಟಕ್ಕೆ ವಿಂಡೀಸ್ ಕಂಗಾಲು, ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ – ಸರಣಿ ಜಯದ ಕನಸು ಜೀವಂತ
There are certain things which can’t be taught. #SanjuSamson #HardikPandya #selfish #pandyaselfish pic.twitter.com/63ufvvNrNM
— Achyuth Vimal (@achyuthvimal) August 8, 2023
ರೋಹಿತ್ ನೋಡಿ ಕಲಿಯಿರಿ ಪಾಂಡ್ಯ:
ವರ್ಷಾರಂಭದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಲಂಕಾ ತಂಡದ ನಾಯಕ ದಸುನ್ ಶನಕ ಶತಕ ಪೂರೈಸಲಿ ಎಂದು ಮೊಹಮ್ಮದ್ ಶಮಿ ಅವರ ಮಂಕಡಿಂಗ್ ಮನವಿಯನ್ನು ಕ್ಯಾಪ್ಟನ್ ರೋಹಿತ್ ಶರ್ಮಾ ಹಿಂಪಡೆದಿದ್ದರು. ರೋಹಿತ್ ಮೆರೆದ ಔದಾರ್ಯದಿಂದ ದಸುನ್ ಶನಕಗೆ ಶತಕ ಲಭ್ಯವಾಯಿತು. ಭಾರತ ಪಂದ್ಯ ಗೆದ್ದಿತ್ತು. ಈಗ ಹಾರ್ದಿಕ್ ಪಾಂಡ್ಯ ತಮ್ಮದೇ ತಂಡದ ಆಟಗಾರನ ಜೊತೆಗೆ ನಡೆದುಕೊಂಡ ರೀತಿ ಗಮನಿಸಿದರೆ ಭಯವಾಗುತ್ತದೆ. ಪಾಂಡ್ಯ ಎಷ್ಟು ಕೆಟ್ಟ ವ್ಯಕ್ತಿ ಎಂಬುದನ್ನು ಅಂದಾಜಿಸಿ ಎಂದು ಅಭಿಮಾನಿಯೊಬ್ಬ ತನ್ನ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.
ಕೊಹ್ಲಿಗಾಗಿ ಡಿಫೆನ್ಸ್ ಮಾಡಿದ್ದ ಮಹಿ:
ಹಿಂದೆ ವಿರಾಟ್ ಕೊಹ್ಲಿ ಅವರನ್ನ ಎಂ.ಎಸ್ ಧೋನಿ ನಡೆಸಿಕೊಂಡ ರೀತಿಯ ವಿಡಿಯೋ ಹಂಚಿಕೊಂಡಿರುವ ಅಭಿಮಾನಿಯೊಬ್ಬ, ಅಂದು ವಿರಾಟ್ ಶತಕ ಸಲುವಾಗಿ ಎಂ.ಎಸ್ ಧೋನಿ ಓವರ್‌ನ ಅಂತಿಮ ಎಸೆತದಲ್ಲಿ ಮ್ಯಾಚ್ ಮುಗಿಸುವ ಅವಕಾಶ ಇದ್ದರೂ ಡಿಫೆನ್ಸ್ ಮಾಡಿದ್ದರು. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ: ನಮ್ಮ ಬ್ಯಾಟಿಂಗ್ ಕಳಪೆಯಾಗಿತ್ತು – ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಪಾಂಡ್ಯ ಬೇಸರ
ಅಲ್ಲದೇ 2023ರ ಐಪಿಎಲ್‌ನಲ್ಲಿ ಯಶಸ್ವಿ ಜೈಸ್ವಾಲ್ ಶತಕ ಪೂರೈಸಲು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವಕಾಶ ಮಾಡಿಕೊಟ್ಟಿದ್ದರು. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ದಾಖಲಿಸಲು ಸೂರ್ಯಕುಮಾರ್ ಯಾದವ್ ಒಂದು ರನ್ ತೆಗೆದುಕೊಂಡು ಅವಕಾಶ ಮಾಡಿಕೊಂಡಿದ್ದರು. ಆದ್ರೆ ಈಗ ಪಾಂಡ್ಯ ನಡೆದುಕೊಂಡ ರೀತಿ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Web Stories