ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ಯುವ ಆಟಗಾರ ಹಾರ್ದಿಕ್ ಪಾಂಡ್ಯ (24) ಸಂದರ್ಶನವೊಂದರಲ್ಲಿ ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ್ದಾರೆ.
ವಿಶ್ರಾಂತಿ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವತಃ ನಾನೇ ಬಿಸಿಸಿಐಗೆ ಶ್ರೀಲಂಕಾ ವಿರುದ್ಧ ಸರಣಿಯಿಂದ ವಿಶ್ರಾಂತಿಯನ್ನು ನೀಡುವಂತೆ ಮನವಿ ಮಾಡಿದ್ದೆ. ಕಳೆದ ಒಂದು ವರ್ಷದಿಂದ ನಿರಂತರ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿರುವುದರಿಂದ ಈ ವಿರಾಮವನ್ನು ಬಯಸಿದ್ದೇನೆ. ನಾನು ಸಂಪೂರ್ಣವಾಗಿ ಫಿಟ್ ಆಗಿರುವಾಗ ಮಾತ್ರ ಆಡಲು ಬಯಸುತ್ತೇನೆ. ವಿರಾಮದ ಅವಧಿಯಲ್ಲಿ ಜಿಮ್ ನಲ್ಲಿ ಮತ್ತಷ್ಟು ಬೆವರಿಳಿಸಿ ಫಿಟ್‍ನೆಸ್ ಕಾಯ್ದುಕೊಳ್ಳಬೇಕಿದೆ ಎಂದು ಹೇಳಿದರು.
Advertisement
Advertisement
ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯು ನನಗೆ ಅತ್ಯಂತ ಮಹತ್ವದಾಗಿದ್ದು, ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿರಾಮ ಸಮಯವನ್ನು ಉಪಯೋಗಿಸಿಕೊಳ್ಳುತ್ತೇನೆ. ಕಳೆದ ಒಂದು ವರ್ಷದ ಅವಧಿಯಲ್ಲಿ 30 ಏಕದಿನ ಪಂದ್ಯಗಳು, 25 ಟಿ-20 ಹಾಗೂ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ. ಈ ಅವಧಿಯಲ್ಲಿ ನಾನು ಕಡಿಮೆ ಪಂದ್ಯವನ್ನು ಆಡಿದ್ದೇನೆ ಎಂದು ಹೇಳಿದ್ದರೆ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂಬುದಾಗಿ ಹೇಳುತ್ತೇನೆ. ಆಲ್ ರೌಂಡರ್ ಆಟಗಾರನಾಗಿ ಇದು ಅತ್ಯಂತ ಕಠಿಣ ಎಂದು ತಿಳಿಸಿದರು.
Advertisement
ಇದನ್ನೂ ಓದಿ: 76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
Advertisement
ಜೂನ್ ತಿಂಗಳಿನಿಂದ ನಡೆದ ಚಾಪಿಂಯನ್ಸ್ ಟ್ರೋಫಿ ಸರಣಿಯಿಂದಲೂ ಪಾಂಡ್ಯ ನಿರಂತರವಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಆಲ್ ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ 6 ವಿಕೆಟ್ ಮತ್ತು 222 ರನ್ ಸಿಡಿಸುವ ಮೂಲಕ `ಮ್ಯಾನ್ ಆಫ್ ದಿ ಸೀರೀಸ್’ ಪ್ರಶಸ್ತಿಯನ್ನು ಪಡೆದಿದ್ದರು.
NEWS – #TeamIndia all-rounder Hardik Pandya has been rested from the upcoming Test series against Sri Lanka. More updates here – https://t.co/GjxJxyGqhv pic.twitter.com/FLxQo8wKvl
— BCCI (@BCCI) November 10, 2017