ಅಹಮದಾಬಾದ್: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ 5ನೇ ಟಿ20 ಕ್ರಿಕೆಟ್ (T20 Cricket) ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಭಾರತದ (India) ಪರ ಎರಡನೇ ವೇಗದ ಅರ್ಧಶತಕವನ್ನು ಹೊಡೆದರು.
ಸಿಕ್ಸರ್, ಬೌಂಡರಿಗಳ ಮಳೆ ಸುರಿಸಿದ ಪಾಂಡ್ಯ 16 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. 12.1 ಓವರ್‌ಗಳಲ್ಲಿ ಸೂರ್ಯಕುಮಾರ್ ಯಾದವ್ ಔಟಾದಾಗ ಭಾರತದ ಮೊತ್ತ 3 ವಿಕೆಟ್ ನಷ್ಟಕ್ಕೆ 115 ಆಗಿತ್ತು.
ಭಾರತದ ಪರ ಅತಿ ವೇಗದ ಅರ್ಧಶತಕ ಹೊಡೆದ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿದೆ. 2007 ರ ಟಿ20 ವಿಶ್ವಕಪ್‌ನಲ್ಲಿ (T20 World Cup) ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ 6 ಎಸೆತಗಳಿಗೆ 6 ಸಿಕ್ಸ್ ಸಿಡಿಸಿ 12 ಎಸೆತಗಳಲ್ಲಿ ಅರ್ಧಶತಕ ಹೊಡೆದಿದ್ದರು. ಇದನ್ನೂ ಓದಿ: ಅನ್‌ಕ್ಯಾಪ್ ಪ್ಲೇಯರ್ ಮಂಗೇಶ್ ಯಾದವ್‌ಗೆ 5.20 ಕೋಟಿ – ಆರ್‌ಸಿಬಿ ಖರೀದಿಸಿದ ಆಟಗಾರರು ಯಾರು?
ಸ್ಕೈ ಔಟಾದ ನಂತರ ಜೊತೆಯಾದ ತಿಲಕ್ ವರ್ಮಾ ಮತ್ತು ಪಾಂಡ್ಯ ನಾಲ್ಕನೇ ವಿಕೆಟಿಗೆ 44 ಎಸೆತಗಳಲ್ಲಿ 105 ರನ್ ಜೊತೆಯಾಟವಾಡಿದರು.
ಪಾಂಡ್ಯ 63 ರನ್(25 ಎಸೆತ, 5 ಬೌಂಡರಿ, 5 ಸಿಕ್ಸ್) ಹೊಡೆದರೆ ತಿಲಕ್ ವರ್ಮಾ 73 ರನ್(42 ಎಸೆತ, 10 ಬೌಂಡರಿ, 1 ಸಿಕ್ಸ್) ಚಚ್ಚಿ ಔಟಾದರು.
ಸಂಜು ಸಾಮ್ಸನ್ 37 ರನ್(22 ಎಸೆತ, 4 ಬೌಂಡರಿ, 2 ಸಿಕ್ಸ್), ಅಭಿಷೇಕ್ ಶರ್ಮಾ 34 ರನ್(21 ಎಸೆತ, 6 ಬೌಂಡರಿ, 1 ಸಿಕ್ಸ್) ಅವರ ಆಟದಿಂದ ಭಾರತ 5 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತು.
ಭಾರತದ ರನ್ ಏರಿದ್ದು ಹೇಗೆ?
50 ರನ್ – 28 ಎಸೆತ
100 ರನ್ – 59 ಎಸೆತ
150 ರನ್ – 83 ಎಸೆತ
200 ರನ್ – 106 ಎಸೆತ
231 ರನ್ – 120 ಎಸೆತ

