ಮೆಲ್ಬರ್ನ್: ಟಿ20 ವಿಶ್ವಕಪ್ (T20 WorldCup) ಆರಂಭಿಕ ಪಂದ್ಯದಲ್ಲೇ ಬದ್ಧವೈರಿಗಳ ಹುಟ್ಟಡಗಿಸಿದ ಟೀಂ ಇಂಡಿಯಾ (Team India) ಭಾರತೀಯರಿಗೆ ದೀಪಾವಳಿ (Diwali) ಉಡುಗೊರೆ ನೀಡಿದೆ.
Hardik Pandya my men! u really played well today….Your father is happy in heaven!???????? #INDvPAK #INDvsPAK2022 #HardikPandya #ViratKohli???? pic.twitter.com/8zogKPaqZm
— Info Chachaji (@ChachajiInfo) October 23, 2022
Advertisement
ಸಾಂಪ್ರದಾಯಿಕ ಎದುರಾಳಿಯೊಂದಿಗಿನ ಕಾಳಗದಲ್ಲಿ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಅವರಿಗೆ ಸಾಥ್ ನೀಡಿದ ಪಾಂಡ್ಯ (Hardik Pandya) 37 ಎಸೆತಗಳಲ್ಲಿ 2 ಸಿಕ್ಸರ್, 1 ಬೌಂಡರಿಯೊಂದಿಗೆ 108.10 ಸ್ಟ್ರೈಕ್‌ರೇಟ್‌ನಲ್ಲಿ 40 ರನ್ ಸಿಡಿಸಿದರು. ಅಲ್ಲದೇ ಬೌಲಿಂಗ್‌ನಲ್ಲೂ ಪರಾಕ್ರಮ ತೋರಿದ ಪಾಂಡ್ಯ 4 ಓವರ್‌ಗಳಲ್ಲಿ 30 ರನ್ ನೀಡಿ 3 ವಿಕೆಟ್ ಕಬಳಿಸಿದರು. ಪಾಂಡ್ಯ ಆಲ್‌ರೌಂಡರ್ ಆಟಕ್ಕೆ ನಾಯಕ ರೋಹಿತ್ ಶರ್ಮಾ (RohitSharma) ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಾಕ್ ವಿರುದ್ಧ ರೋಚಕ ಜಯ – ಇದು ಕೊಹ್ಲಿ ಕೆರಿಯರ್‌ನ ಬೆಸ್ಟ್ ಇನ್ನಿಂಗ್ಸ್
Advertisement
Advertisement
ಬಳಿಕ ಮಾತನಾಡಿದ ಪಾಂಡ್ಯ, ತನ್ನ ತಂದೆಯನ್ನು ನೆನೆದು ಕಣ್ಣೀರಿಟ್ಟರು. ನಾನು ನನ್ನ ತಂದೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ನಾನು ಅಳುತ್ತಿರುವುದು ತಂದೆ ಇಲ್ಲ ಎಂಬ ಕಾರಣಕ್ಕೆ ಅಲ್ಲ. ನಾನು ನನ್ನ ಮಗನನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನನಗೆ ನನ್ನ ತಂದೆ ಏನೆಲ್ಲ ಮಾಡಿದ್ರೋ ಅದನ್ನು ನಾನು ನನ್ನ ಮಗನಿಗೆ ಮಾಡುತ್ತೇನೋ ಇಲ್ಲವೋ ಎಂದು ಗೊತ್ತಿಲ್ಲ. ಆರೂವರೆ ವರ್ಷದ ಹುಡುಗನ ಕನಸಿಗೋಸ್ಕರ ನನ್ನ ತಂದೆ ಅಂದು ನಗರವನ್ನೇ ಬಿಟ್ಟುಹೋದರು. ಆದರೆ ನಾನು ಇಂದು ಏನು ಮಾಡುತ್ತಿದ್ದೇನೆ ಎಂಬುದೂ ಅವರಿಗೆ ತಿಳಿದಿಲ್ಲ. ಇಂದಿನ ಈ ಆಟ, ಗೆಲುವು ನನ್ನ ತಂದೆಗೆ ಅರ್ಪಿಸುತ್ತೇನೆ ಎಂದು ಭಾವುಕರಾದರು. ಇದನ್ನೂ ಓದಿ: Love You SO Much – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ
Advertisement
ಹಾರ್ದಿಕ್ ಪಾಂಡ್ಯ ದಾಖಲೆ:
ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವಿಶೇಷ ದಾಖಲೆ ಕೂಡ ಮಾಡಿದ್ದಾರೆ. ಅತ್ಯುತ್ತಮ ಆಲ್‌ರೌಂಡರ್ ಪ್ರದರ್ಶನ ನೀಡಿದ ಹಾರ್ದಿಕ್ ಇದೀಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) ಭಾರತ ಪರ 1,000 ರನ್ ಗಳಿಸಿದ ಹಾಗೂ 50 ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ 7ನೇ ಆಟಗಾರನಾಗಿದ್ದಾರೆ.