ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) ಮುಂಬೈ ತಂಡದ ನಾಯಕ ಸ್ಥಾನ ಬದಲಾದ ಬಳಿಕ ಮೊದಲ ಬಾರಿಗೆ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಮುಖಾಮುಖಿ ಎದುರಾಗಿದ್ದಾರೆ.
ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ ತಂಡದ ಅಭ್ಯಾಸದ ಅವಧಿಯಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಅಪ್ಪಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: RCB Unbox: ‘ಕೆಜಿಎಫ್’ ಹಾಡು ರಿಮಿಕ್ಸ್ ಮಾಡಿದ ಡಿಜೆ ಅಲೆನ್
Advertisement
View this post on Instagram
Advertisement
ಮುಂಬೈ ಇಂಡಿಯನ್ಸ್ ತಂಡದ ನಾಯಕ ಬದಲಾದಾಗ ಪಾಂಡ್ಯ ಮತ್ತು ರೋಹಿತ್ ವಿಚಾರವಾಗಿ ಹಲವು ರೀತಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಕುರಿತು ಮಾತನಾಡಿದ ಪಾಂಡ್ಯ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿದ್ದಾರೆ. ಅದು ನನಗೆ ಸಹಾಯ ಮಾಡುತ್ತದೆ. ಅವರ ನಾಯಕತ್ವದಲ್ಲಿ ಈ ತಂಡ ಸಾಧಿಸಿರುವುದನ್ನು ನಾನು ಮುಂದುವರಿಸುತ್ತೇನೆ. ನಾನು ರೋಹಿತ್ ಅವರ ನಾಯಕತ್ವದಲ್ಲಿ ಇಡೀ ವೃತ್ತಿಜೀವನವನ್ನು ಆಡಿದ್ದೇನೆ. ಅವರು ಯಾವಾಗಲೂ ನನ್ನ ಭುಜದ ಮೇಲೆ ಕೈ ಇಡುತ್ತಾರೆ ಎಂದು ತಿಳಿಸಿದರು.
Advertisement
ಐಪಿಎಲ್ ಸಮಯದಲ್ಲಿ ರೋಹಿತ್ ಅವರು ನನಗೆ ಮಾರ್ಗದರ್ಶಿಯಾಗಿ ಮುಂದುವರಿಯುತ್ತಾರೆ ಎಂದು ಪಾಂಡ್ಯ ತಿಳಿಸಿದ್ದಾರೆ. ಇದು ಯಾವುದೇ ಭಿನ್ನವಾಗಿರುವುದಿಲ್ಲ. ಅವರು ಯಾವಾಗಲೂ ನನಗೆ ಸಹಾಯ ಮಾಡಲು ಜೊತೆಗಿರುತ್ತಾರೆ ಎಂದರು. ಇದನ್ನೂ ಓದಿ: ಪಾಕಿಸ್ತಾನ ಸೂಪರ್ ಲೀಗ್‌ಗಿಂತಲೂ ನಮ್ಮ ಹೆಣ್ಮಕ್ಕಳ ಟೂರ್ನಿಯೇ ಹೆಚ್ಚು ಶ್ರೀಮಂತ
Advertisement
ನಾಯಕತ್ವದಿಂದ ರೋಹಿತ್ ಅವರನ್ನು ತೆಗೆದಿದ್ದಕ್ಕೆ ಅಭಿಮಾನಿಗಳ ಆಕ್ರೋಶದ ಬಗ್ಗೆ ಕೇಳಿದಾಗ, ನಾವು ಅಭಿಮಾನಿಗಳನ್ನು ಗೌರವಿಸುತ್ತೇವೆ. ಜೊತೆಗೆ ಕ್ರೀಡೆಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತೇವೆ. ಮಾತನಾಡಲು ಅಭಿಮಾನಿಗಳಿಗೆ ಹಕ್ಕಿದೆ ಎಂದು ಉತ್ತರಿಸಿದರು.