ಬಾಲಿವುಡ್ ಬೆಡಗಿ ನತಾಶಾ (Actress Natasa) ಇದೀಗ ವೈಯಕ್ತಿಕ ಬದುಕಿನ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಹಾರ್ದಿಕ್ ಪಾಂಡ್ಯಾ (Hardik Pandya) ಜೊತೆಗಿನ ಡಿವೋರ್ಸ್ ಖಚಿತಪಡಿಸಿದ ಬಳಿಕ ನಟಿ ಸೋಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಮಾಜಿ ಪತ್ನಿ ನತಾಶಾಗೆ ಹಾರ್ದಿಕ್ ಮತ್ತೆ ಪ್ರೀತಿ ತೋರಿದ್ದಾರೆ.
ಸದ್ಯ ತವರು ಮನೆ ಸೆರ್ಬಿಯಾದಲ್ಲಿ ಮಗನ ಜೊತೆ ನಟಿ ನತಾಶಾ ಕಾಲ ಕಳೆಯುತ್ತಿದ್ದಾರೆ. ಮೃಗಾಲಯಕ್ಕೆ ಹೋಗಿರುವ ಕೆಲವು ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಜಿ ಪತ್ನಿಯ ಪೋಸ್ಟ್‌ಗೆ ಹಾರ್ದಿಕ್, ಲೈಕ್ ಮತ್ತು ಹಾರ್ಟ್ ಸಿಂಬಲ್ ಕೊಟ್ಟು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಅತ್ತಿಗೆಯಿಂದಲೇ ದರ್ಶನ್ ಅಣ್ಣನಿಗೆ ಬಲ: ವಿಜಯಲಕ್ಷ್ಮಿ ಆಪ್ತೆ ಲತಾ ಜೈಪ್ರಕಾಶ್
ನತಾಶಾಗೆ ಹಾರ್ದಿಕ್ ಮಾಡಿರುವ ಕಾಮೆಂಟ್ ನೋಡಿ ಮಾಜಿ ಪತ್ನಿ ಮೇಲೆ ಇನ್ನೂ ಪ್ರೀತಿ ಇದೆ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಜೋಡಿ ಮತ್ತೆ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.
ಅಂದಹಾಗೆ, ಜುಲೈ 18ರಂದು ನಟಿ ಡಿವೋರ್ಸ್ ಬಗ್ಗೆ ಅನೌನ್ಸ್ ಮಾಡಿದ್ದರು. 4 ವರ್ಷಗಳ ಕಾಲ ಜೊತೆಯಾಗಿ ಇದ್ದ ಹಾರ್ದಿಕ್ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಜೊತೆಯಾಗಿ ಇರಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕೊನೆಗೆ ಭಿನ್ನಾಭಿಪ್ರಾಯ ಮಿತಿ ಮೀರಿದಾಗ ನಮ್ಮ ಒಳ್ಳೆಯದಕ್ಕೆ ಬೇರೆ ಆಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದೇವೆ. ಇದು ನಮಗೆ ಕಠಿಣ ನಿರ್ಧಾರ ಎಂದು ನತಾಶಾ ಹೇಳಿಕೆಯಲ್ಲಿ ತಿಳಿಸಿದ್ದರು.
ನಮ್ಮಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿದ್ದು ಅಗಸ್ತ್ಯ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ. ಅವನಿಗೆ ಎಲ್ಲಾ ರೀತಿಯಲ್ಲೂ ಬೆಂಬಲವಾಗಿ ನಾವು ನಿಲ್ಲುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಾವು ಕಳಕಳಿಯಿಂದ ವಿನಂತಿಸುತ್ತೇವೆ ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದರು.
ಇನ್ನೂ ನತಾಶಾ ಮತ್ತು ಹಾರ್ದಿಕ್ ಪಾಂಡ್ಯ 2020ರಲ್ಲಿ ಮೇ 31ರಂದು ವಿವಾಹವಾದರು. ಜುಲೈ 2020ರಲ್ಲಿ ತಮ್ಮ ಮೊದಲ ಮಗು ಅಗಸ್ತ್ಯನನ್ನು ಸ್ವಾಗತಿಸಿದರು. 2023ರ ಫೆಬ್ರವರಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿ ಪ್ರಕಾರ ಮತ್ತೊಮ್ಮೆ ಮದುವೆಯಾದರು.