ಪುಣೆ: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಮ್ಮತ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಶುಕ್ರವಾರ ತಿಳಿಸಿದರು.
ಇಂಧನದ ಮೇಲಿನ ಜಿಎಸ್‌ಟಿ ಜಾರಿಯಲ್ಲಿನ ಪ್ರಮುಖ ಅಡಚಣೆಯನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಎತ್ತಿ ತೋರಿಸಿದ್ದಾರೆ. ಪುಣೆ ಇಂಟರ್‌ನ್ಯಾಶನಲ್ ಸೆಂಟರ್‌ನ (PIC) 14ನೇ ಸಂಸ್ಥಾಪನಾ ದಿನದ ಉಪನ್ಯಾಸದಲ್ಲಿ ಮಾತನಾಡಿದ ಅವರು, ಮುಂಬರುವ ದಶಕದಲ್ಲಿ ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸುವ ತಂತ್ರ ಮತ್ತು ಕ್ರಮಗಳು ಕುರಿತು ಉಪನ್ಯಾಸ ನೀಡಿದರು. ಇದನ್ನೂ ಓದಿ: Madhya Pradesh | ಅತ್ಯಾಚಾರವೆಸಗಿ ಕಾಡಲ್ಲಿ ತಲೆಮರೆಸಿಕೊಂಡಿದ್ದವನ ಪತ್ತೆಗೆ ನೈಟ್ ವಿಷನ್ ಡ್ರೋನ್ ಬಳಕೆ
Advertisement
Advertisement
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ನಾನು ಸಲಹೆ ಕೇಳಿದ್ದೇನೆ. ಈಗ ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ಅನ್ನು (Petrol, Diesel) ತರಬೇಕು ಎಂದು ನಾನು ಬಹಳ ಸಮಯದಿಂದ ಪ್ರತಿಪಾದಿಸುತ್ತಾ ಬಂದಿದ್ದೇನೆ. ಈಗ ನನ್ನ ಹಿರಿಯ ಸಹೋದ್ಯೋಗಿ, ಹಣಕಾಸು ಸಚಿವರು ಕೂಡ ಹಲವಾರು ಸಂದರ್ಭಗಳಲ್ಲಿ ಇಂಧನವನ್ನು ಜಿಎಸ್‌ಟಿ ಅಡಿಯಲ್ಲಿ ತರುವ ಬಗ್ಗೆ ಮಾತನಾಡಿದ್ದಾರೆ ಎಂದು ನನಗೆ ಖಚಿತವಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ಇಂಧನದ ಮೇಲಿನ ಜಿಎಸ್‌ಟಿಯನ್ನು ಪ್ರತಿಪಾದಿಸುವ ವೇಳೆ ಅದರ ಅನುಷ್ಠಾನದಲ್ಲಿನ ಪ್ರಮುಖ ಅಡಚಣೆಯನ್ನು ಸಹ ಸಚಿವರು ಎತ್ತಿ ತೋರಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಅವರಿಗೆ ಗಮನಾರ್ಹ ಆದಾಯವನ್ನು ಉತ್ಪಾದಿಸುವ ಕಾರಣ ಇದು ತುಂಬಾ ಸವಾಲಿನ ಸಂಗತಿಯಾಗಿದೆ. ಆದ್ದರಿಂದ ಇದಕ್ಕೆ ಎಲ್ಲಾ ರಾಜ್ಯಗಳ ಅನುಮೋದನೆಯ ಅಗತ್ಯವಿದೆ ಎಂದರು. ಇದನ್ನೂ ಓದಿ: ಪೇಜರ್ ಸ್ಫೋಟ ಬೆನ್ನಲ್ಲೇ ಚೀನಿ ಸಿಸಿಟಿವಿ ಬಳಕೆ ನಿಯಂತ್ರಿಸಲು ಮುಂದಾದ ಕೇಂದ್ರ
ಮದ್ಯ ಮತ್ತು ಇಂಧನವು ಪ್ರಮುಖ ಆದಾಯದ ಮೂಲಗಳಾಗಿರುವುದರಿಂದ ರಾಜ್ಯಗಳು ಈ ಕ್ರಮವನ್ನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ಜಿಎಸ್‌ಟಿ ಮಂಡಳಿಯಲ್ಲಿ ಈ ವಿಷಯ ಚರ್ಚಿಸಲು ಕೇರಳ ಹೈಕೋರ್ಟ್ ಸೂಚಿಸಿದೆ. ಆದರೆ ಕೇರಳದ ಹಣಕಾಸು ಸಚಿವರು ಒಪ್ಪಲಿಲ್ಲ ಎಂದು ಅವರು ಹೇಳಿದ್ದಾರೆ. ಹೆಚ್ಚುವರಿ ವ್ಯಾಟ್‌ಅನ್ನು ಬಿಟ್ಟುಕೊಡಲು ಬಿಜೆಪಿಯೇತರ ರಾಜ್ಯಗಳು ಸಿದ್ಧರಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕಾಶ್ಮೀರವನ್ನ ಪ್ಯಾಲೆಸ್ತೀನ್‌ಗೆ ಹೋಲಿಸಿದ ಪಾಕ್ ಪ್ರಧಾನಿಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು