ವಾಷಿಂಗ್ಟನ್: ತಿಂಗಳ ಹಿಂದಷ್ಟೇ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಅನ್ನು ಖರೀದಿಸಿದ ಎಲೋನ್ ಮಸ್ಕ್ (Elon Musk) ಅದರ ಉದ್ಯೋಗಿಗಳನ್ನು (Employees) ಕಂಪನಿಯಲ್ಲಿ (Company) ಕಠಿಣವಾಗಿ ದುಡಿಸಿಕೊಳ್ಳುತ್ತಿದ್ದಾರೆ. ವಾರಕ್ಕೆ 80 ಗಂಟೆ ಕೆಲಸ ಮಾಡಿ, ಇಲ್ಲವೇ ಕಂಪನಿಯನ್ನು ತೊರೆಯಿರಿ ಎಂದು ಮಸ್ಕ್ ಕಟ್ಟುನಿಟ್ಟಾಗಿ ಹೇಳಿದ ಬಳಿಕ ನೂರಾರು ಉದ್ಯೋಗಿಗಳು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
Advertisement
Advertisement
ಇದೀಗ ಮಸ್ಕ್‌ನ ಉದ್ಯೋಗಿಗಳು ಕಂಪನಿಯಲ್ಲಿ ಉಳಿದುಕೊಳ್ಳಬೇಕಿದ್ದರೆ ಹಾರ್ಡ್‌ಕೋರ್ ನೀತಿಗೆ ಬದ್ಧರಾಗಬೇಕಿರುವುದು ಅಗತ್ಯವಾಗಿದೆ. ಇದರಿಂದ ಹಲವು ಉದ್ಯೋಗಿಗಳು ತಮ್ಮ ಕಚೇರಿಯಲ್ಲೇ ಉಳಿದುಕೊಳ್ಳುವಂತಹ ಸನ್ನಿವೇಶಗಳೂ ನಿರ್ಮಾಣವಾಗಿದೆ. ಈ ಹಿನ್ನೆಲೆ ಮಸ್ಕ್ ಉದ್ಯೋಗಿಗಳಿಗಾಗಿ ಕೆಲ ಕಚೇರಿಗಳಲ್ಲೇ ಮಲಗುವ ಕೋಣೆಗಳನ್ನು (Bedroom) ನಿರ್ಮಿಸಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಭಾರೀ ಏರಿಕೆ!
Advertisement
ವರದಿಗಳ ಪ್ರಕಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್‌ನ ಪ್ರಧಾನ ಕಚೇರಿಯಲ್ಲಿ ಉದ್ಯೋಗಿಗಳಿಗೆ ಬೆಡ್‌ರೂಂನ ವ್ಯವಸ್ಥೆಯನ್ನು ಮಾಡಲಾಗಿದೆ. ವಾರಾಂತ್ಯದ ರಜೆ ಮುಗಿಸಿ, ಸೋಮವಾರ ಕಚೇರಿಗೆ ಮರಳಿದ ಉದ್ಯೋಗಿಗಳಿಗೆ ಅಚ್ಚರಿ ಉಂಟಾಗಿದೆ. ಕಚೇರಿಯಲ್ಲಿಯೇ ಮಲಗುವ ಕೋಣೆ, ಹಾಸಿಗೆ, ಕರ್ಟನ್ ಸೇರಿದಂತೆ ವಿಶ್ರಾಂತಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನೂ ವ್ಯವಸ್ಥೆ ಮಾಡಿರುವುದಾಗಿ ಕೆಲ ಉದ್ಯೋಗಿಗಳು ತಿಳಿಸಿದ್ದಾರೆ.
Advertisement
ಮೇಲ್ನೋಟಕ್ಕೆ ಈ ಎಲ್ಲಾ ವ್ಯವಸ್ಥೆಗಳನ್ನೂ ಹಾರ್ಡ್ಕೋರ್ ಉದ್ಯೋಗಿಗಳಿಗೆ ಮಾಡಲಾಗಿಗೆ ಎಂದು ಭಾವಿಸಲಾಗಿದೆ. ಆದರೆ ಕಂಪನಿಯ ಈ ನಿರ್ಧಾರದ ಬಗ್ಗೆ ಮೊದಲೇ ಏನನ್ನೂ ತಿಳಿಸಿಲ್ಲ ಎಂದು ಉದ್ಯೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಿಟ್‍ಮ್ಯಾನ್ ಬ್ಯಾಟ್‍ನಲ್ಲಿ ಸೂರ್ಯ