ಹರ್ಭಜನ್ ಟ್ಟೀಟ್‍ಗೆ ಅಭಿಮಾನಿಗಳು ತಿರುಗೇಟು!

Public TV
2 Min Read
harbhajan

ನವದೆಹಲಿ: ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಸದ್ಯ ಭಾರತದ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್ ತಂಡದ ಕುರಿತು ಮಾಡಿರುವ ಸರಣಿ ಟ್ವೀಟ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಹಲವರು ಮರುಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.

2 ಟೆಸ್ಟ್ ಪಂದ್ಯಗಳ ಸರಣಿಯ ಭಾಗವಾಗಿ ವೆಸ್ಟ್ ಇಂಡೀಸ್ ತಂಡ ರಾಜ್‍ಕೋಟ್ ನ ಸೌರಾಷ್ಟ್ರ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಆದರೆ ಪಂದ್ಯದಲ್ಲಿ ತೀರ ಕಳಪೆ ಪ್ರದರ್ಶನ ನೀಡಿರುವ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 181 ರನ್ ಗಳಿಗೆ ಅಲೌಟ್ ಆಗುವ ಮೂಲಕ ಫಾಲೋ ಆನ್ ಎದುರಿಸಿದೆ. ಇದೇ ವೇಳೆ ಹರ್ಭಜನ್ ಈ ಹಿಂದಿನ ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಟಗಾರರನ್ನು ನೆನೆದು ಸದ್ಯದ ತಂಡ ರಣಜಿ ಪಂದ್ಯಗಳಲ್ಲಿ ಆಡಿದರೆ ಫೈನಲ್ ಪ್ರವೇಶ ಮಾಡುತ್ತಾ ಎಂದು ತಮ್ಮ ಟ್ವೀಟಿನಲ್ಲಿ ಪ್ರಶ್ನಿಸಿದ್ದಾರೆ.

ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಮಾಡಿರುವ ಟ್ವೀಟನ್ನು ಮರುಟ್ವೀಟ್ ಮಾಡಿ ಹರ್ಭಜನ್ ಸಿಂಗ್, ವೆಸ್ಟ್ ಇಂಡೀಸ್ ತಂಡದ ಪರಿಸ್ಥಿತಿ ನೋಡಲು ದುಃಖವಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಂಡ ಉತ್ತಮ ಆಟಗಾರರನ್ನು ಪಡೆದು ವಿಶ್ವ ಕ್ರಿಕೆಟಿನಲ್ಲಿ ಸ್ಪರ್ಧಾತ್ಮಕ ಪ್ರದರ್ಶನ ನೀಡಲಿ ಎಂದು ತಿಳಿಸಿದ್ದಾರೆ.

ಈ ಟ್ವೀಟ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲ ಅಭಿಮಾನಿಗಳು ಬಜ್ಜಿ ಟ್ವೀಟ್‍ಗೆ ಮರುಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. ಅಶುಲ್ ಗುಪ್ತಾ ಎಂಬವರು ಟ್ವೀಟ್ ಮಾಡಿ, ಟೀಂ ಇಂಡಿಯಾ ಕೂಡ ಇಂಗ್ಲೆಂಡ್ ಪ್ರವಾಸದಲ್ಲಿ ಇಂತಹದ್ದೇ ಸನ್ನಿವೇಶ ಎದುರಿಸಿದ್ದು, ನೀವು ಒಬ್ಬ ಕ್ರೀಡಾಪಟು ಎಂಬುವುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

ರಾಜ್ ಕೋಟ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ 181 ರನ್ ಗಳಿಗೆ ಅಲೌಟ್ ಆಗಿ ಫಾಲೋ ಆನ್ ಎದುರಿಸಿರುವ ವೆಸ್ಟ್ ಇಂಡೀಸ್ 2ನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದೆ. ಭಾರತದ ಪರ ಮೊದಲ ಇನ್ನಿಂಗ್ಸ್ ನಲ್ಲಿ ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರೆ, 2ನೇ ಇನ್ನಿಂಗ್ಸ್ ನಲ್ಲಿ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದಿದು ಆಟ ಮುಂದುವರೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/ImMMukherjee/status/1048157533960003584?

Share This Article
Leave a Comment

Leave a Reply

Your email address will not be published. Required fields are marked *