ನವದೆಹಲಿ: ವಾರ್ನರ್ 50 ಎಸೆತಗಳನ್ನು ಆಡಿದ್ದರೆ 50 ರನ್‍ಗಳಿಂದ ಡೆಲ್ಲಿ (Delhi Capitals) ಸೋಲುತ್ತಿತ್ತು ಎಂದು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಗುಡುಗಿದ್ದಾರೆ.
16ನೇ ಆವೃತ್ತಿಯ 8 ಐಪಿಎಲ್ (IPL) ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳೊಂದಿಗೆ ಡೇವಿಡ್ ವಾರ್ನರ್ (David Warner)ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ ಹೋಗುವ ಸಾಧ್ಯತೆ ಕ್ಷೀಣಿಸಿದೆ. ತಂಡದ ಕಳಪೆ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ ಹರ್ಭಜನ್ ಇದರ ಸಂಪೂರ್ಣ ಹೊಣೆಯನ್ನು ವಾರ್ನರ್ ಮೇಲೆ ಹಾಕಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಶರ್ಮಾ, ಕ್ಲಾಸೆನ್ ಕ್ಲಾಸಿಕ್ ಆಟ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 9 ರನ್ ಜಯ
ವಾರ್ನರ್ ತಂಡವನ್ನು ಮುನ್ನೆಡೆಸಲು ವಿಫಲರಾಗಿದ್ದಾರೆ. ಇದು ತುಂಬಾ ನಿರಾಶಾದಾಯಕವಾಗಿದೆ. ಈಗಲೂ ವಾರ್ನರ್, ಇತರ ಆಟಗಾರರ ತಪ್ಪುಗಳ ಬಗ್ಗೆ ಹೇಳುತ್ತಾರೆ. ಆದರೆ ನೀವು ಏನು ಮಾಡಿದ್ದೀರಿ? ನೀವು ಯಾವುದೇ ಉತ್ತಮ ಪ್ರದರ್ಶನ ತೋರಿಸಲಿಲ್ಲ. ದೆಹಲಿ ಕುಸಿಯಲು ಕಾರಣವನ್ನು ಹುಡುಕಲು ವಾರ್ನರ್ ಕನ್ನಡಿಯಲ್ಲಿ ನೋಡಬೇಕು ಎಂದು ಹರ್ಭಜನ್ ಗರಂ ಆಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಅಕ್ಷರ್ ಪಟೇಲ್‍ಗೆ (Axar Patel) ತಂಡದ ನಾಯಕತ್ವವನ್ನು ನೀಡಬೇಕೆಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್‍ನ ಉಳಿದ ಲೀಗ್ ಹಂತದಲ್ಲಿ ಕೇವಲ 6 ಪಂದ್ಯಗಳು ಬಾಕಿಯಿದ್ದು, ಪ್ಲೇಆಫ್‍ಗಳ ಬೇಟೆಯಲ್ಲಿ ಉಳಿಯಬೇಕಾದರೆ ಡೆಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಈ ಋತುವಿನಲ್ಲಿ ವಾರ್ನರ್ 8 ಪಂದ್ಯಗಳಲ್ಲಿ 38.5 ರ ಸರಾಸರಿಯಲ್ಲಿ 306 ರನ್ ಗಳಿಸಿದ್ದಾರೆ. ಶನಿವಾರದ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ರನ್‍ಗಳಿಂದ ಗೆದ್ದುಕೊಂಡಿದೆ. ಇದನ್ನೂ ಓದಿ: IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB