ಇಸ್ಲಾಮಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರನ್ನ ಸದಾ ಹೊಗಳುತ್ತಲೇ ಬಂದಿರುವ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ಇದೀಗ ತಮ್ಮ ದೇಶದ ಕ್ರಿಕೆಟ್ ತಂಡದ ನಾಯಕನಿಗಿಂತ ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ ಎಂದು ಹೊಗಳಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಜೊತೆಗಿನ ಮಾತುಕತೆ ವೇಳೆ ಅಖ್ತರ್ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಹರ್ಭಜನ್ ಸಿಂಗ್, ಕೊಹ್ಲಿ ಅಥವಾ ಬಾಬರ್ ಇಬ್ಬರಲ್ಲಿ ಯಾರು ಶ್ರೇಷ್ಠ ಎಂಬ ಪ್ರಶ್ನೆ ಕೇಳಿದಾಗ, ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟರ್, ಬಾಬರ್ ಆಜಂ (Babar Azam) ಕ್ರಿಕೆಟ್ ಜಗತ್ತಿನಲ್ಲಿ ಮುಂಬರುವ ಶ್ರೇಷ್ಠ ಬ್ಯಾಟರ್ ಎಂದು ಅಖ್ತರ್ ಶ್ಲಾಘಿಸಿದ್ದಾರೆ. ಈ ಕುರಿತ ವೀಡಿಯೋವನ್ನ ಹರ್ಭಜನ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿ T20 ಕ್ರಿಕೆಟ್ ಆಡೋದನ್ನ ನಿಲ್ಲಿಸಬೇಕು – ಶೋಯೆಬ್ ಅಖ್ತರ್ ಶಾಕಿಂಗ್ ಹೇಳಿಕೆ
Advertisement
Advertisement
ಕ್ರಿಕೆಟ್ ಜರ್ನಿಯ ಕುರಿತು ಸುದೀರ್ಘ ಮಾತುಕತೆ ನಡೆಸಿದ ಮಾಜಿ ಕ್ರಿಕೆಟರ್‌ಗಳು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಬಾಬರ್ ಆಜಂ ಶ್ರೇಷ್ಠ ಬ್ಯಾಟ್ಸ್‌ಮ್ಯಾನ್ ಆಗಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಖ್ತರ್ ಹೇಳಿದ್ದಾರೆ. ಇದನ್ನೂ ಓದಿ: T20 Blast: ವಿಶ್ವಕಪ್‌ಗೂ ಮುನ್ನ ವಿಶ್ವದಾಖಲೆ ಬರೆದ ಅಫ್ರಿದಿ, ಭಾರತಕ್ಕೆ ಎಚ್ಚರಿಕೆ ಗಂಟೆ ಎಂದ ನೆಟ್ಟಿಗರು
Advertisement
Advertisement
ಇದಕ್ಕೆ ದನಿಗೂಡಿಸಿದ ಭಜ್ಜಿ, ವಿರಾಟ್ ಕೊಹ್ಲಿ ತನ್ನನ್ನು ಶ್ರೇಷ್ಠ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. ಬಾಬರ್ ಆ ಸ್ಥಾನಕ್ಕೆ ಬರಲು ಇನ್ನೂ ಸಾಕಷ್ಟು ಸಾಧಿಸಬೇಕು. ಆದ್ರೆ ಒಂದಲ್ಲ ಒಂದು ದಿನ ಅವರೂ ಕೊಹ್ಲಿಯಂತೆ ಶ್ರೇಷ್ಠ ಆಟಗಾರನ ಸ್ಥಾನಕ್ಕೆ ತಲುಪುತ್ತಾರೆ. ಬಾಬರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ಲೇಯರ್ ಬಹುಶಃ ಟಿ20 ಕ್ರಿಕೆಟ್‌ನಲ್ಲಿ ಸರಿಹೊಂದುವುದಿಲ್ಲ ಎಂದು ತಿಳಿಸಿದ್ದಾರೆ.
ಅಂಕಿ-ಅಂಶಗಳ ಪ್ರಕಾರ ಕೊಹ್ಲಿ, ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದ್ರೆ ಬಾಬರ್ ಆಜಂ ವೃತ್ತಿ ಜೀವನದಲ್ಲಿ ಈವರೆಗೆ 12 ಸಾವಿರಕ್ಕೂ ಹೆಚ್ಚು ರನ್ ಪೂರೈಸಿದ್ದಾರೆ.
Web Stories