ನವದೆಹಲಿ: ಭಾರತದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯ ಎಂದು ಉಂಟಾಗುತ್ತಿರುವ ವಿವಾದಗಳ ಕುರಿತು ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದು, ಫಿಫಾ ಫುಟ್ಬಾಲ್ ಫೈನಲ್ ಪ್ರವೇಶಿಸಿರುವ ಕ್ರೊವೇಷಿಯಾ ದೇಶವನ್ನು ಉದಾಹರಣೆಯಾಗಿ ನೀಡಿ ಚಿಂತನೆ ಬದಲಾಯಿಲು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ಕೇವಲ 50 ಲಕ್ಷ ಜನಸಂಖ್ಯೆ ಹೊಂದಿರುವ ಕ್ರೊವೇಷಿಯಾ ಫಿಫಾ ಫುಟ್ಬಾಲ್ ಫೈನಲ್ ಆಡುತ್ತಿದ್ದು, 135 ಕೋಟಿ ಜನಸಂಖ್ಯೆ ಹೊಂದಿರುವ ನಾವು ಹಿಂದೂ, ಮುಸ್ಲಿಂ ಎಂದು ಆಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹರ್ಭಜನ್ ತಮ್ಮ ಟ್ವೀಟ್ ನಲ್ಲಿ ನಿಮ್ಮ ಯೋಚನೆಯನ್ನು ಬದಲಾಯಿಸಿ, ದೇಶ ಬದಲಾಗುತ್ತದೆ ಎಂಬ ಹ್ಯಾಷ್ ಟ್ಯಾಗನ್ನು ಬಳಸಿದ್ದಾರೆ.
लगभग 50 लाख की आबादी वाला देश क्रोएशिया फ़ुटबॉल वर्ल्ड कप का फाइनल खेलेगा
और हम 135 करोड़ लोग हिंदू मुसलमान खेल रहे है।#soch bdlo desh bdlega
— Harbhajan Turbanator (@harbhajan_singh) July 15, 2018
ಸದ್ಯ ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ನಲ್ಲಿ ಫ್ರಾನ್ಸ್ ಹಾಗೂ ಕ್ರೊವೇಷಿಯಾ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಸೆಣಸಲಿದೆ. ಇನ್ನು ಫಾನ್ಸ್ ಎರಡನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ಪುನರಾವರ್ತನೆ ಮಾಡಲು ಸಿದ್ಧವಾಗಿದ್ದರೆ, ಕ್ರೊವೇಷಿಯಾ ತಂಡ ಮೊದಲ ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.
ಅಂದಹಾಗೇ 1998 ರ ಫಿಫಾ ವಿಶ್ವಕಪ್ ಫೈನಲ್ ನಲ್ಲೂ ಫ್ರಾನ್ಸ್, ಬ್ರೆಜಿಲ್ ತಂಡವನ್ನು ಮಣಿಸಿ ವಿಶ್ವಕಪ್ ಗೆದ್ದಿತ್ತು, ಈ ವೇಳೆ ಪ್ರಾನ್ಸ್ ತಂಡದ ನಾಯಕರಾಗಿದ್ದ ಡೈಡಿಯರ್ ದೆಶ್ಚಾಂಪ್ಸ್ ಇಂದು ತಂಡದ ಕೋಚ್ ಆಗಿದ್ದರೆ.