ಮಡಿಕೇರಿ: ಕೊಟ್ಟಿರುವ ಸಾಲ ವಸೂಲಾತಿಗೆ ಜನರಿಗೆ ಕಿರುಕುಳ ನೀಡಿದ್ರೆ ಅಂತಹ ಫೈನಾನ್ಸ್ ಕಂಪನಿಗೆಗಳ (finance Company) ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಫೈನಾನ್ಸ್ ಕಂಪನಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳ (Microfinance Company) ಕಿರುಕುಳಕ್ಕೆ ಸಂಬಂಧಿಸಿದಂತೆ ಬಡವರ್ಗದ ಮಹಿಳೆಯರು ಊರು ಬಿಟ್ಟು ದಟ್ಟ ಅರಣ್ಯಕ್ಕೆ ತೆರಳಿ ಮರ ಹತ್ತಿ ಕೂರುತ್ತಿದ್ದಾರೆ. ಸಂಜೆಯಾಗುತ್ತಲೇ ಮನೆಗೆ ಸೇರುತ್ತಿರುವ ಕುರಿತು ನಿರಂತರವಾಗಿ ವರದಿ ಮಾಡಿದ ಪ್ರಸಾರ ಮಾಡುವ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತುಕೊಂಡು ಜಿಲ್ಲಾಡಳಿತ ಕೊಡಗಿನಲ್ಲಿ ಕೆಲಸ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿ ಸಭೆ ನಡೆಸಿದರು. ಇದನ್ನೂ ಓದಿ: ಮಕ್ಕಳ ಕಳ್ಳಿ ಟ್ರೋಲ್ – ಮುಗ್ದಿರೋ ವಿಚಾರ ಮತ್ತೆ ಕೆದಕೋದಿಲ್ಲ ಎಂದ ಮೋಕ್ಷಿತ!
ಸಭೆಯಲ್ಲಿ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ ಜಿಲ್ಲಾಧಿಕಾರಿ ಕಿರುಕುಳ ನೀಡಿದ್ರೆ ಅಂತಹ ಫೈನಾನ್ಸ್ ಕಂಪನಿಗಳ ವಿರುದ್ಧ ಆರ್‌ಬಿಐಗೆ ವರದಿ ನೀಡಲಾಗುವುದು. ಜೊತೆಗೆ ಆ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲು ವರದಿ ಸಲ್ಲಿಸಲಾಗುವುದು. ಬೆದರಿಕೆ ಒಡ್ಡಿ ಕಿರುಕುಳ ನೀಡಿ ವಸೂಲಿ ಮಾಡಿದ್ರೆ ಸ್ವಯಂಪ್ರೇರಿತ ಕೇಸ್ ಹಾಕಿಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಭೆಯಲ್ಲಿ ಖಡಕ್ ಸೂಚನೆ ನೀಡಿದರು. ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ ಗೆದ್ದ ಬಿಜೆಪಿ; ಎಎಪಿ-ಕಾಂಗ್ರೆಸ್ ಮೈತ್ರಿಗೆ ಮುಖಭಂಗ
ಆರ್‌ಬಿಐ ನಿಯಮಗಳ ಪ್ರಕಾರ ಕಾನೂನು ರೀತಿಯಲ್ಲಿ ಸಾಲ ವಸೂಲಿ ಮಾಡಿಕೊಳ್ಳಿ. ಅದು ಬಿಟ್ಟು ದಬ್ಬಾಳಿಕೆ ಮಾಡಿ ವಸೂಲಿ ಮಾಡುವುದನ್ನು ಒಪ್ಪುವುದಿಲ್ಲ, ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಇದು ಅರ್ಥವಾಗದಿದ್ದರೆ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು. ಸಾಲ ಮರುಪಾವತಿ ಮಾಡುವ ಶಕ್ತಿ ಇಲ್ಲದಿದ್ದರೂ ಸಾಲ ನೀಡಿರುವುದು ಗೊತ್ತಾಗಿದೆ. ಈ ರೀತಿ ಯಾವ ಆಧಾರದಲ್ಲಿ ನೀವು ಸಾಲ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ, ಮುಂದೆ ಪೊಲೀಸ್ ಕೇಸ್ ಆದಲ್ಲಿ ಸಾಲ ಮತ್ತು ಅದರ ಮರುಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಜನರಿಗೆ ನೀಡಿರಬೇಕು. ಇಲ್ಲದಿದ್ದರೆ ಅದರಿಂದಾಗುವ ನಷ್ಟಕ್ಕೆ ಫೈನಾನ್ಸ್ ಕಂಪೆನಿಗಳೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ರು.
ನಿಯಮಗಳ ಪ್ರಕಾರವೇ ಸಾಲ ಮರುಪಾವತಿಗೆ ಕೇಳುತ್ತಿದ್ದೇವೆ. ನಮಗೆ ಹಣ ಸೆಟಲ್ ಮಾಡುವವರೆಗೆ ಅಲ್ಲಿಯೇ ಕುಳಿತುಕೊಳ್ಳುತ್ತೇವೆ ಎಂದು ಫೈನಾನ್ಸ್ ಕಂಪನಿಯೊಂದರ ಸಿಬ್ಬಂದಿ ಹೇಳಿದರು. ಇದನ್ನೂ ಓದಿ: ಫಿಲ್ಮಿ ಸ್ಟೈಲ್ ರೌಡಿಗಳಂತೆ ಯುವತಿಯರಿದ್ದ ಕಾರನ್ನ ಬೆನ್ನಟ್ಟಿದ್ದ ಯುವಕರು – ವಿಡಿಯೋ ವೈರಲ್
ಫೈನಾನ್ಸ್ ಕಂಪನಿ ಸಿಬ್ಬಂದಿಯ ಆ ಮಾತಿಗೆ ಗರಂ ಆದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಾಲ ಕಟ್ಟುವವರೆಗೆ ಯಾಕೆ ಅಲ್ಲಿ ಕುಳಿತುಕೊಳ್ಳಬೇಕು. ಹಣ ಕಟ್ಟಿಲ್ಲ ಎಂದರೆ ಮುಂದಿನ ವಾರ ಬರುವುದಾಗಿ ಸಮಯ ಕೊಟ್ಟು ಬರಬಹುದಲ್ಲವೇ ಎಂದು ಗರಂ ಆಗಿ ಚಳಿ ಬಿಡಿಸಿದರು.