ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ (BMTC Bus) ವಿದ್ಯಾರ್ಥಿನಿಯ ಮೇಲೆ ಹಾಡಹಗಲೇ ಕಂಡೆಕ್ಟರ್ ಹಾಗೂ ಇಬ್ಬರು ಪುರುಷ ಪ್ರಯಾಣಿಕರು ಕಿರುಕುಳ ನೀಡಿರುವ ಘಟನೆ ನಡೆದಿದೆ. ಈ ಘಟನೆಯಿಂದ ಬೆಚ್ಚಿ ಬಿದ್ದಿರೋ ಕುಟುಂಬ, ಅದೃಷ್ಟವಶಾತ್ ವಿದ್ಯಾರ್ಥಿನಿಯ ಪ್ರಾಣ, ಮಾನ ಸೇವ್ ಆಗಿದೆ. ವಿದ್ಯಾರ್ಥಿನಿಯ ಮೇಲೆ ಅಮಾನವೀಯ ವರ್ತನೆ ತೋರಿದ ಕಂಡೆಕ್ಟರ್, ಪ್ರಯಾಣಿಕರ ವಿರುದ್ಧ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
9 ನೇ ತರಗತಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ದೊಮ್ಮಲೂರಿನಿಂದ ರಿಚ್ಮಂಡ್ ಸರ್ಕಲ್‍ಗೆ ಪ್ರಯಾಣ ಮಾಡುತ್ತಿದಳು. ಗುಂಜೂರು ಡಿಪೋ, 41, KA 57- F2695 ನ ಕಂಡೆಕ್ಟರ್ ಅಮಾನವೀಯ ವರ್ತನೆ ತೋರಿದ್ದಾರೆ. ಶಕ್ತಿ ಯೋಜನೆಯಡಿ ಫ್ರೀ ಟಿಕೆಟ್ ಗೆ ಅಂತ ಆಧಾರ್ ಕಾರ್ಡ್ (Adhar Card) ತೋರಿಸಿದ್ದಾಳೆ. ಆದರೆ ಆಧಾರ್ ಕಾರ್ಡ್ ನಲ್ಲಿ ಹಿಂದಿ ಬರಹ ಇದ್ದಿದ್ದಕ್ಕೆ ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡುವಂತೆ ಕಂಡೆಕ್ಟರ್ ಹೇಳಿದ್ದಾರೆ. ಇದನ್ನೂ ಓದಿ: ನಾಗಾ ಸಾಧುಗಳ ಸೋಗಿನಲ್ಲಿ ಬಂದು ಸ್ಟುಡಿಯೋ ಮಾಲೀಕನ ಉಂಗುರ ಎಗರಿಸಿದ ಕಳ್ಳರು
Advertisement
Advertisement
ವಿದ್ಯಾರ್ಥಿನಿ ದುಡ್ಡು ಕೊಟ್ಟು ಟಿಕೆಟ್ ಪಡೆದ್ರೂ, ವಿದ್ಯಾರ್ಥಿನಿಯ ಆಧಾರ್ ತೊಗೊಂಡು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರ ಮುಂದೆ ನಿಂದಿಸಿದ್ದಾನೆ. ಈ ವೇಳೆ ಬಸ್ಸಿನಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡ ಕಂಡೆಕ್ಟರ್‍ಗೆ ಸಾಥ್ ನೀಡಿ, ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ. ಏನ್ ನಿಮ್ ಅಪ್ಪಂಗೆ ಹೇಳ್ತೀಯಾ..?. ನಿಮ್ಮಪ್ಪ ಏನ್ ಸಿಎಂ ಆ..? ಪಿಎಂ ಆ..? ನಿನ್ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹಾಕ್ತೀನಿ ಅಂತ, ಕತ್ತು ಹಿಡಿದು ಬಸ್ ನಿಂದ ಹೊರದಬ್ಬಲು ಪ್ರಯತ್ನಿಸಿದ್ದಾನೆ ಎಂದು ವಿದ್ಯಾರ್ಥಿನಿ ಹಾಗೂ ತಾಯಿ ಆರೋಪಿಸಿದ್ದಾರೆ.
Advertisement
Advertisement
ರಿಚ್ಮಂಡ್ ಸರ್ಕಲ್ ನಲ್ಲಿ ಇಳಿಸದೇ, ಕಾರ್ಪೋರೇಶನ್ ಸರ್ಕಲ್ ಬಳಿ ವಿದ್ಯಾರ್ಥಿನಿಯನ್ನ ಇಳಿಸಿ ಹೋಗಿದ್ದಾರೆ. ವಿಷಯ ತಿಳಿದ ನಂತರ ತಾಯಿ ಕಾರ್ಪೋರೇಶನ್ ಸರ್ಕಲ್ ಗೆ ಬಂದು ಮಗಳನ್ನ ಹುಡುಕಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಹಾಡಹಗಲೇ ಬಿಎಂಟಿಸಿ ಬಸ್ಸಿನಲ್ಲಿ, ಬಾಲಕಿಯ ಮೇಲೆ ಈ ರೀತಿಯ ದೌರ್ಜನ್ಯ ಆಗುತ್ತೆ ಅಂದ್ರೆ ಬಿಎಂಟಿಸಿ ಪ್ರಯಾಣ, ಮಹಿಳೆಯರಿಗೆ ಎಷ್ಟು ಸೇಫ್ ಅನ್ನೋ ಪ್ರಶ್ನೆ ಮೂಡುತ್ತಿದೆ. ಇನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗದುಕೊಂಡು ಇಂತಹ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕಿದೆ.
Web Stories