ಚಿಕ್ಕಬಳ್ಳಾಪುರ: 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಅಂಗವಾಗಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ಹಾಗೂ ಪ್ರೇರೇಪಣೆ ಮೂಡಿಸುವ ಸಲುವಾಗಿ ಇಂದು ಚಿಕ್ಕಬಳ್ಳಾಪುರ ನಗರದಲ್ಲಿ 2,500 ಅಡಿ ಉದ್ದದ ತಿರಂಗಾ ಯಾತ್ರೆ ನಡೆಸಲಾಯಿತು.
Advertisement
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ 2,500 ಅಡಿ ಉದ್ದದ ತ್ರಿವರ್ಣ ಧ್ವಜದ ವಾಕಥಾನ್ ನಡೆಸಲಾಗಿಯಿತು. ನಗರದ ಎಂಜಿ ರಸ್ತೆಯ ಜೈ ಭೀಮ್ ವಿದ್ಯಾರ್ಥಿನಿಲಯದಿಂದ ಬಿಬಿರಸ್ತೆಯ ಮೂಲಕ ಸಾಗಿ ಒಕ್ಕಲಿಗರ ಕಲ್ಯಾಣಮಂಟಪದ ಬಳಿ ವಾಕಥಾನ್ ಅಂತ್ಯವಾಯಿತು. ಈ ವಾಕಥಾನ್‍ನಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಊಟ ನೀಡೋ ವಿಚಾರಕ್ಕೆ ಜಗಳ – ಬಾಮೈದನಿಂದಲೇ ಯೋಧನ ಕೊಲೆ
Advertisement
Advertisement
ಆಗಸ್ಟ್ 13 ರಿಂದ 15 ರವರೆಗೆ ದೇಶದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇಂದು ಆಯೋಜಿಸಿದ್ದ ವಾಕಥಾನ್ ಇಡೀ ನಗರದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಸುಮಾರು 2,500 ಅಡಿಗಳ ಉದ್ದದ ರಾಷ್ಟ್ರಧ್ವಜದೊಂದಿಗೆ ಹೆಜ್ಜೆ ಹಾಕಿದ ಸಾವಿರಾರು ಶಾಲಾ-ಕಾಲೇಜ್ ವಿದ್ಯಾರ್ಥಿಗಳೊಂದಿಗೆ ಬೆಳ್ಳಂ ಬೆಳಗ್ಗೆ ಆರೋಗ್ಯ ಸಚಿವರು ಹೆಜ್ಜೆ ಹಾಕಿ ಹುರುಪು ತುಂಬಿದರು. ಹೆಜ್ಜೆ ಹೆಜ್ಜೆಗೂ ಭಾರತ್ ಮಾತಾಕಿ ಜೈ ಉದ್ಘೋಷ ಅನುಕರಣಿಸುತ್ತಿದ್ದ ಮೆರವಣಿಗೆಯಲ್ಲಿ ಎಲ್ಲರ ಕೈಯಲ್ಲೂ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಬ್ಯಾಂಡ್ ಸೆಟ್‌ಗಳು, ಡಿಜೆ ಶಬ್ದದ ಅಬ್ಬರದ ನಡುವೆ ರಾಷ್ಟ್ರಪ್ರೇಮ ಉಕ್ಕೇರಿಸುವ ಘೋಷಣೆಗಳು ಮೊಳಗಿದವು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ
Advertisement
ರಸ್ತೆಯುದ್ದಕ್ಕೂ ತ್ರಿವರ್ಣ ಧ್ವಜಗಳ ಹಾರಾಟ ಯುವ ವಿದ್ಯಾರ್ಥಿಗಳ ಜೈಕಾರದ ಅರ್ಭಟ ಕೇಳಿಬಂತು. ನಾಗರಿಕರು, ಅಧಿಕಾರಿಗಳು, ಶಿಕ್ಷಕರು ವಾಕಥಾನ್‍ನಲ್ಲಿ ಭಾಗವಹಿಸಿ ತಿರಂಗಾ ಅಭಿಯಾನ ಜಾಗೃತಿ ನಡಿಗೆಗೆ ಮೆರುಗು ತುಂಬಿದರು.