ನವದೆಹಲಿ: 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಆಗಿರುವುದರಿಂದ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಸದ್ದು ಮಾಡುತ್ತಿದೆ. ವಿಶೇಷವಾಗಿ ಈ ಅಭಿಯಾನಕ್ಕೆ ಭಾರತೀಯ ಅಂಚೆ ಸೇವೆಯು ಕೈಜೋಡಿಸಿದ್ದು, ರಾಷ್ಟ್ರಧ್ವಜವನ್ನು ಮನೆಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ 10 ದಿನಗಳಲ್ಲಿ 1 ಕೋಟಿ ಧ್ವಜವನ್ನು ಆನ್‍ಲೈನ್ ಮೂಲಕ ಮನೆಗಳಿಗೆ ತಲುಪಿಸಿ ದಾಖಲೆ ಬರೆದಿದೆ.
Advertisement
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಮುನ್ನ, ಭಾರತೀಯ ಅಂಚೆ ಸೇವೆಯು ರಾಷ್ಟ್ರಧ್ವಜವನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿತ್ತು. ತ್ರಿವರ್ಣ ಧ್ವಜವನ್ನು 25 ರೂ. ದರದಲ್ಲಿ ಇಂಡಿಯಾ ಪೋಸ್ಟ್‌ನ ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಖರೀದಿಸಬಹುದಾಗಿದೆ. ಈಗಾಗಲೇ ದೇಶಾದ್ಯಂತ 1 ಕೋಟಿ ರಾಷ್ಟ್ರಧ್ವಜವನ್ನು ಮನೆಮನೆಗಳಿಗೆ 4.2 ಲಕ್ಷ ಅಂಚೆ ನೌಕರರು ತಲುಪಿಸುವ ಕಾರ್ಯ ಮಾಡಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಹರ್ ಘರ್ ತಿರಂಗ: ರಾಷ್ಟ್ರಧ್ವಜವನ್ನ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದೆ ಭಾರತೀಯ ಅಂಚೆ ಸೇವೆ
Advertisement
Advertisement
ಈಗಾಗಲೇ 4.2 ಲಕ್ಷ ಅಂಚೆ ನೌಕರರು ನಗರ, ಪೇಟೆ, ಪಟ್ಟಣ, ಗ್ರಾಮೀಣಭಾಗ, ಗಡಿ ಪ್ರದೇಶಗಳನ್ನು ಸೇರಿದಂತೆ ದೇಶದ ಮೂಲೆ ಮೂಲೆಗೂ ತಲುಪಿಸುವ ಕಾರ್ಯ ಮಾಡುತ್ತಿದ್ದು, ಆಗಸ್ಟ್ 15ರ ವರೆಗೆ ಈ ಸೇವೆಯನ್ನು ಅಂಚೆ ಇಲಾಖೆ ಮಾಡುತ್ತಿದೆ.
Advertisement
भारतीय डाक के साथ पूरा देश उत्साहपूर्वक #HarGharTiranga मनाने को है तैयार। आप भी इस अभियान में भाग लें।
तिरंगा खरीदने अपने नज़दीकी डाकघर में जाएं या https://t.co/hQ5fSUpJfM पर जाकर ऑनलाइन ऑर्डर करें।#IndiaPost4Tiranga #AmritMahotsav @MinOfCultureGoI @AmritMahotsav pic.twitter.com/GoVxtpra8A
— India Post (@IndiaPostOffice) August 11, 2022
ಅಂಚೆ ಇಲಾಖೆ ರಾಷ್ಟ್ರಧ್ವಜ ತಲುಪಿಸುತ್ತಿರುವುದರಿಂದ ಈ ಸೇವೆಗೆ ಯಾವುದೇ ಜಿಎಸ್‍ಟಿ ಅನ್ವಯಿಸುವುದಿಲ್ಲ. ಧ್ವಜವನ್ನು ಖರೀದಿಸಲು ಆಸಕ್ತಿಯುಳ್ಳವರು ePostoffice ಪೋರ್ಟಲ್‍ನಿಂದ ಆರ್ಡರ್ ಮಾಡಬಹುದು. ಪರ್ಯಾಯವಾಗಿ, ರಾಷ್ಟ್ರಧ್ವಜವನ್ನು ಖರೀದಿಸಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದಾಗಿದೆ. ಇಂಡಿಯಾ ಪೋಸ್ಟ್ ಈ ಕುರಿತು ಟ್ವಿಟ್ಟರ್‌ನಲ್ಲಿ, ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ತಿರಂಗಾ ಮಾರಾಟ ಮತ್ತು ವಿತರಣೆಯನ್ನು ಸುಲಭಗೊಳಿಸಲಾಗುವುದು. 2022ರ ಸ್ವಾತಂತ್ರ್ಯ ದಿನಾಚರಣೆಯ ಮೊದಲ ರಜಾದಿನಗಳಲ್ಲಿ ಎಲ್ಲ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತವೆ ಎಂದು ಬರೆದು ಪೋಸ್ಟ್ ಮಾಡಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ಮತ್ತಷ್ಟು ಎಲೆಕ್ಟ್ರಿಕ್ ಬಸ್‍ಗಳು – ಆಗಸ್ಟ್ 15ಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ
स्वतंत्रता के 75 वें वर्ष का जश्न मनाते हुए, डाक कर्मचारियों द्वारा आंध्र प्रदेश के विजयवाड़ा में 75 फीट लंबे तिरंगे को पकड़कर एक रैली निकाली गई।#IndiaPost4Tiranga #AmritMahotsav @MinOfCultureGoI @AmritMahotsav pic.twitter.com/d8WDZukC9e
— India Post (@IndiaPostOffice) August 11, 2022
ಕೇಂದ್ರ ಸರ್ಕಾರದ ಬಜೆಟ್ ಡಾಕ್ಯುಮೆಂಟ್ ಪ್ರಕಾರ, ಭಾರತವು 1,55,000 ಅಂಚೆ ಕಛೇರಿಗಳೊಂದಿಗೆ ವಿಶ್ವದ ಅತಿದೊಡ್ಡ ಅಂಚೆ ಜಾಲವನ್ನು ಹೊಂದಿದೆ. 89 ಪ್ರತಿಶತ ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಕಚೇರಿಗಳು ಸ್ಥಾಪನೆಯಾಗಿವೆ.