ನವದೆಹಲಿ: ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಮುನ್ನ, ಭಾರತೀಯ ಅಂಚೆ ಸೇವೆಯು ರಾಷ್ಟ್ರಧ್ವಜವನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುತ್ತಿದೆ.
Advertisement
ತ್ರಿವರ್ಣ ಧ್ವಜವನ್ನು 25 ರೂ. ದರದಲ್ಲಿ ಇಂಡಿಯಾ ಪೋಸ್ಟ್‌ನ ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಖರೀದಿಸಬಹುದು. ಇದರಲ್ಲಿ ಯಾವುದೇ ಜಿಎಸ್‍ಟಿ ಅನ್ವಯಿಸುವುದಿಲ್ಲ. ಧ್ವಜವನ್ನು ಖರೀದಿಸಲು ಆಸಕ್ತಿಯುಳ್ಳವರು ePostoffice ಪೋರ್ಟಲ್‍ನಿಂದ ಆರ್ಡರ್ ಮಾಡಬಹುದು. ಪರ್ಯಾಯವಾಗಿ, ರಾಷ್ಟ್ರಧ್ವಜವನ್ನು ಖರೀದಿಸಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು. ಇದನ್ನೂ ಓದಿ: ನಿರಂತರ ಜಿಟಿ ಜಿಟಿ ಮಳೆ – ಮನೆ ಗೋಡೆ ಕುಸಿದು ಬಿದ್ದು ಯುವಕ ಸಾವು
Advertisement
ಇಂಡಿಯಾ ಪೋಸ್ಟ್ ಈ ಕುರಿತು ಟ್ವಿಟ್ಟರ್‌ನಲ್ಲಿ, ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ತಿರಂಗಾ ಮಾರಾಟ ಮತ್ತು ವಿತರಣೆಯನ್ನು ಸುಲಭಗೊಳಿಸಲಾಗುವುದು. 2022ರ ಸ್ವಾತಂತ್ರ್ಯ ದಿನಾಚರಣೆಯ ಮೊದಲ ರಜಾದಿನಗಳಲ್ಲಿ ಎಲ್ಲ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತವೆ ಎಂದು ಬರೆದು ಪೋಸ್ಟ್ ಮಾಡಿದೆ.
Advertisement
#HarGharTiranga अभियान के तहत तिरंगे की बिक्री और वितरण की सुविधा के लिए, स्वतंत्रता दिवस 2022 से पहले अवकाश के दिन में भी सभी डाकघर कार्यरत रहेंगे। तिरंगा खरीदने अपने नज़दीकी डाकघर में जाएं या https://t.co/hQ5fSU7A1E पर जाकर ऑनलाइन ऑर्डर करें।#IndiaPost4Tiranga #AmritMahotsav pic.twitter.com/CetlFLPFYw
— India Post (@IndiaPostOffice) August 9, 2022
Advertisement
ಸಾರ್ವಜನಿಕ ರಜಾದಿನಗಳಲ್ಲಿ ರಾಷ್ಟ್ರಧ್ವಜಗಳನ್ನು ಅಂಚೆ ಕಚೇರಿಗಳಲ್ಲಿ ಕನಿಷ್ಠ ಒಂದು ಕೌಂಟರ್ ಮೂಲಕ ಮಾರಾಟ ಮಾಡಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ವೆಬ್‍ಸೈಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಹೆಂಗಳೆಯರ ಮನಗೆದ್ದ ʼಗೋಬಿ ಮಂಚೂರಿʼ ಮಾಡುವ ಸಿಂಪಲ್ ವಿಧಾನ
ಕೇಂದ್ರ ಸರ್ಕಾರದ ಬಜೆಟ್ ಡಾಕ್ಯುಮೆಂಟ್ ಪ್ರಕಾರ, ಭಾರತವು 1,55,000 ಅಂಚೆ ಕಛೇರಿಗಳೊಂದಿಗೆ ವಿಶ್ವದ ಅತಿದೊಡ್ಡ ಅಂಚೆ ಜಾಲವನ್ನು ಹೊಂದಿದೆ. 89 ಪ್ರತಿಶತ ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಕಚೇರಿಗಳು ಸ್ಥಾಪನೆಯಾಗಿವೆ.