– ಗೋಪಾಲಕೃಷ್ಣ
ಅವಳು ನನ್ನ ಕಣ್ಣಿಗೆ ಮೊದಲು ಬಿದ್ದ ಆ ನೆನೆಪಿದೆ ನೋಡಿ, ಅದನ್ನು ನೆನೆದರೆ ಅಲ್ಲೆ ಟೀ ಕುಡಿಯುತ್ತಿದ್ದ ಅದೇ ದೃಶ್ಯ ಕಣ್ಣಿಗೆ ಕಟ್ಟುತ್ತದೆ! ಕಾರ್ಮೋಡ ಕವಿದ ಸಂಜೆ, ಹನಿ ಹನಿ ಮಳೆ, ಗುಡುಗು…. ನವೀಲೇ ಆ ಸಂಭ್ರಮಕ್ಕೆ ಸಿಕ್ಕು ನಲಿವಂತೆ, ನೀಲಿ ಸೀರೆ ಉಟ್ಟು ಎದುರಿಗೆ ಮುಗುಳ್ನಗೆಯ ಮಿಂಚನ್ನು ಹಂಚಿ ಹೋಗಿದ್ದಳು! ನನ್ನನ್ನು ಕದ್ದು!
Advertisement
ಆ ಕೇವಲ ಸ್ಟೇಟಸ್‌ನಂತೆ 30 ಸೆಕೆಂಡ್ ಕಳೆದು ಹೋದ ಕ್ಷಣಗಳು… ಅವಳನ್ನು ಮತ್ತೆ ಮತ್ತೆ ಹುಡುಕಿ ಕಣ್ತುಂಬಿಕೊಳ್ಳುವಂತೆ ನನ್ನನ್ನು ಪ್ರೇರೇಪಿಸುತ್ತಿತ್ತು. ಆದರೆ ಅದಾದ ಮೇಲೆ ಮತ್ತೆ ಅವಳನ್ನು ನೋಡಿದ್ದು ಒಂದು ವರ್ಷವಾದ್ಮೇಲೆ! ಅವಳ್ಯಾರು, ಹೆಸರು ಏನು ಗೊತ್ತಿಲ್ಲ, ಪ್ರೇಮವೋ (Love) ಎನೋ ಅರಿವಿಲ್ಲ. ಅವಳನ್ನು ಮತ್ತೆ ನೋಡ್ಬೇಕು, ಮಾತಾಡ್ಸಬೇಕು ಅಂತಾನೇ ಕಾಯ್ತಿದ್ದೆ ಅಷ್ಟೇ! ಅದೇ ಜಾಗ ಒಂದು ವರ್ಷದ ಬಳಿಕ ಕಣ್ಣಿಗೆ ಬಿದ್ದ ಅವಳು, ಸೀದಾ ಬಂದು ಮಾತಾಡಿಸಿದ್ಲು!
Advertisement
ತುಂಬಾ ಪರಿಚಿತಳಂತೆ.. ಇಷ್ಟು ದಿನ ಎಲ್ಲೋ ಹೋಗಿದ್ದೆ..? ಅದೇ ಅವಳ ಮೊದಲ ಮಾತು.. ಆಮೇಲೆ ಜೀವದ ಭಾಗವೇ ಆಗಿ ಹೋದಳು. ಹೀಗೆ ಕೆಲವು ವರ್ಷಗಳು ಕಳೆದ ಮೇಲೆ ಅದ್ಯಾವ ದೃಷ್ಟಿ ಬಿತ್ತೋ ಗೊತ್ತಿಲ್ಲ, ಎದೆಯ ಬನಕ್ಕೆ ಬಂದಿದ್ದ ಪ್ರೇಮದ ನವಿಲು ಒಂದಷ್ಟು ಕಾಲ ನನ್ನ ಕಣ್ಣಿಗೆ ಸೌಂದರ್ಯದ ರಸದೌತಣ ನೀಡಿ ಮಿಂಚಿನಂತೆಯೇ ಮಾಯವಾಯಿತು!
Advertisement
Advertisement
ಈಗ ಅವಳ ನೆನಪು ನನ್ನ ಬಳಿ ಮಾತಾಡದ ದಿನವೇ ಇಲ್ಲ! ಪ್ರೇಮವೆಂದರೆ ಬರಿ ನೆನಪುಗಳೇ ಎನ್ನುವಷ್ಟು ರಾಶಿ ನೆನಪುಗಳನ್ನು ಅವಳು ಉಳಿಸಿ ಹೋಗಿದ್ದಾಳೆ. ಅದರಲ್ಲಿ ಅವಳ ಸೀರೆಯ ಮೇಲಿದ್ದ ಕಸೂತಿಯ ನವಿಲಿನಿಂದ ಜಾರಿದ ಗರಿಯೊಂದು ಹಾಗೇ ಕಾಡುವ ಮುದ್ದಾದ ನೆನಪುಗಳಲ್ಲಿ ಒಂದಾಗಿ ಉಳಿದು ಬಿಟ್ಟಿದೆ! ಅದರ ಕಚಗುಳಿಯೇ ನನ್ನನ್ನು ಆಗಾಗ ನಗಿಸುತ್ತದೆ. ಚುಚ್ಚಿ ಅಳಿಸುತ್ತದೆ. ಶಾಯಿಗೆ ಅದ್ದಿ ಕವಿಯಾಗಿ ಬರೆಸುತ್ತದೆ..!
ಹೀಗೆ ನನ್ನ ಪಾಲಿಗೆ ಪ್ರೇಮವೆಂದರೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!! ಅದು ಸದಾ ಮುಂಗಾರು ಮಿಂಚಿಗೆ ಸಿಕ್ಕು ನಲಿವ ಸಂಭ್ರಮವೇ!