ಬೆಂಗಳೂರು: ನಗರದಲ್ಲಿ ಆಟೋ ಚಾಲಕನೊಬ್ಬ ತನ್ನ ಆಟೋದ ಒಳಗಡೆ `ನನ್ನ ಹೆಂಡತಿ ತವರಿಗೆ ಹೋಗಿದ್ದಕ್ಕೆ ನನಗೆ ಖುಷಿಯಾಗಿದೆ ಎಂದು ಪೋಸ್ಟರ್ ಅಂಟಿಸಿದ್ದು’, ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.ಇದನ್ನೂ ಓದಿ: ನಕಾರಾತ್ಮಕ ತಂತ್ರಗಳಿಂದ ರಾಜಕೀಯ ಮಾಡ್ತಿದ್ದವರಿಗೆ ದೆಹಲಿ ಜನರಿಂದ ತಕ್ಕ ಪಾಠ: ಜೋಶಿ
Advertisement
ಆಟೋ ಚಾಲಕನೋರ್ವ ಆಟೋದೊಳಗಡೆ ಪೋಸ್ಟರ್ ಅಂಟಿಸಿ, ಅದರಲ್ಲಿ ನನ್ನ ಹೆಂಡತಿ ತವರಿಗೆ ಹೋಗಿದ್ದಾಳೆ. ನನಗೆ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾನೆ. ಪೋಸ್ಟರ್ ಪಕ್ಕದಲ್ಲಿ ಬಿಸ್ಕತ್ ಇಟ್ಟಿದ್ದು, ಈ ಮೂಲಕ ಪ್ರಯಾಣಿಕರಿಗೆ ಬಿಸ್ಕತ್ ಹಂಚಿ ಸಂಭ್ರಮಿಸಿದ್ದಾನೆ.
Advertisement
ಪ್ರಯಾಣಿಕರೊಬ್ಬರು ಈ ಪೋಸ್ಟರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸದ್ಯ ಇದು ಸಕತ್ ವೈರಲ್ ಆಗುತ್ತಿದೆ. ಪೋಸ್ಟರ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿದ್ದು, ಖುಷಿಯಲ್ಲಿರುವ ಚಾಲಕ ಪ್ರಯಾಣಿಕರೆಲ್ಲರಿಗೂ ಬಿಸ್ಕತ್ ನೀಡಿದ್ದಾನೆ. ಬಿಸ್ಕತ್ ತೆಗೆದುಕೊಂಡ ಪ್ರಯಾಣಿಕರು ಹೆಂಡತಿಯ ಕುರಿತು ಹಲವು ವಿಷಯಗಳನ್ನು ಕೆದಕುತ್ತಿದ್ದಾರೆ.ಇದನ್ನೂ ಓದಿ: ನಮ್ಮನ್ನು ಸೋಲಿಸಲು ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ಕೇಜ್ರಿವಾಲ್‌ಗೆ ಸೋಲು