ಬೆಂಗಳೂರು: ಹೊಸ ವರ್ಷ (New Year) ಆರಂಭಕ್ಕೆ ಕೆಲವೇ ನಿಮಿಷಗಳು ಇರುವ ಹಿನ್ನೆಲೆಯಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲಕ್ಕೆ ಭಾರೀ ಸಂಖ್ಯೆಯಲ್ಲಿ ಯುವ ಜನರು ಆಗಮಿಸುತ್ತಿದ್ದಾರೆ.
ರಾತ್ರಿ 9 ಗಂಟೆಯಿಂದಲೇ ಜನರು ರಸ್ತೆಗೆ ಬರಲು ಆರಂಭಿಸಿದರು. ರಾತ್ರಿ 10 ಗಂಟೆಯ ಹೊತ್ತಿಗೆ ಬಹುತೇಕ ಪಬ್, ಬಾರ್‌ಗಳು (Pub, Bar), ಕ್ಲಬ್ ತುಂಬಿತ್ತು.
ಪಾರ್ಟಿ ವೇರ್ ಧರಿಸಿ ತಂಡೋಪ ತಂಡವಾಗಿ ಆಗಮಿಸುತ್ತಿರುವ ಯುವ ಜನತೆ ಆಗಮಮಿಸಿ ನೃತ್ಯ (Dance) ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲು ಮುಂದಾಗುತ್ತಿದ್ದಾರೆ. ಪಾರ್ಟಿ ಮೂಡ್ ಆನ್ ಆಗಿದ್ದು ಡಿಜೆ ಹಾಡಿಗೆ ಪಬ್‌ಗಳಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ – ಬೆಂಗಳೂರಿನ ಎಲ್ಲಾ ಫ್ಲೈಓವರ್ ಬಂದ್
ಬ್ರಿಗೇಡ್ ರಸ್ತೆಗೆ ಎಂಟ್ರಿ ಆಗುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಪ್ರತಿಯೊಬ್ಬರನ್ನು ಮೆಟಲ್ ಡಿಟೆಕ್ಟರ್ ಮೂಲಕ ಚೆಕ್ ಮಾಡಿ ಒಳಗಡೆ ಕಳುಹಿಸುತ್ತಿದ್ದಾರೆ. ಮಹಿಳೆಯರಿಗೂ ಪ್ರತ್ಯೇಕವಾಗಿ ಮಹಿಳಾ ಪೊಲೀಸರು ಚೆಕ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಕುಡಿದು ಟೈಟಾಗೋ ಮಹಿಳೆಯರನ್ನ ಫ್ರೀ ಆಗಿ ಡ್ರಾಪ್ ಮಾಡ್ತಾರೆ ಆಟೋ ಡ್ರೈವರ್ಸ್!

