ಅಶ್ಲೀಲ ಸಿನಿಮಾ ನಿರ್ಮಾಣ ಮಾಡಿದ್ದ ಆರೋಪದ ಮೇಲೆ ರಾಜ್ ಕುಂದ್ರಾ (Raj Kundra) ಜೈಲು ಸೇರಿದ್ದರು. ಈಗ ರಿಲೀಸ್ ಆಗಿ, ತಮ್ಮ ಖಾಸಗಿ ಬದುಕಿನತ್ತ ಗಮನ ಹರಿಸುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಇವೆಲ್ಲವನ್ನೂ ಎದುರಿಸಿ ಮುಂದೆ ಬಂದಿದ್ದಾರೆ. ಇನ್ನು ಪತಿ ರಾಜ್ ಕುಂದ್ರಾ ಹುಟ್ಟುಹಬ್ಬಕ್ಕೆ ಶಿಲ್ಪಾ ಶೆಟ್ಟಿ (Shilpa Shetty) ಶುಭಹಾರೈಸಿದ್ದಕ್ಕೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Advertisement
ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಶ್ಲೀಲ ಸಿನಿಮಾ ನಿರ್ಮಾಣದ ಪ್ರಕರಣದಲ್ಲಿ ರಾಜ್ ಕುಂದ್ರಾ ಜೈಲು ಸೇರಿದ್ದರು. ಈಗ ಜೈಲಿನಿಂದ ಹೊರ ಬಂದು ವೈಯಕ್ತಿಕ ಜೀವನದತ್ತ ಗಮನ ನೀಡುತ್ತಿದ್ದಾರೆ. ಇದೀಗ ಪತಿಯ ಬರ್ತ್ಡೇಗೆ ವಿಶ್ ಮಾಡಿದ್ದಕ್ಕೆ ಟ್ರೋಲಿಗರ ಕೆಂಗಣ್ಣಿಗೆ ಶಿಲ್ಪಾ ಶೆಟ್ಟಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್
Advertisement
Advertisement
ಇನ್ನು ಶಿಲ್ಪಾ ಶೆಟ್ಟಿ ಎಲ್ಲಾ ಸಂಕಷ್ಟವನ್ನು ಎದುರಿಸಿ, ಮುಂದೆ ಬಂದಿದ್ದಾರೆ. ಪತಿಯ ತಪ್ಪನ್ನು ಮನ್ನಿಸಿ ಅವರ ಜತೆ ಜೀವನ ನಡೆಸುತ್ತಿದ್ದಾರೆ. ರಾಜ್ ಕುಂದ್ರಾ ಹುಟ್ಟುಹಬ್ಬಕ್ಕೆ ಅಂಗವಾಗಿ ಅವರು ಭಾವನಾತ್ಮಕ ನಟಿ ವಿಶ್ ಮಾಡಿದ್ದಾರೆ. ಪತಿ ಹಾಗೂ ಮಕ್ಕಳ ಜತೆ ಇರುವ ಫೋಟೋವನ್ನು ಶಿಲ್ಪಾ ಪೋಸ್ಟ್ ಮಾಡಿದ್ದಾರೆ. ನೀವು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಕ್ಕೆ, ನನ್ನ ಮಕ್ಕಳಿಗೆ ತಂದೆ ಆಗಿದ್ದಕ್ಕೆ, ನನ್ನ ಪ್ರೀತಿ ಆಗಿದ್ದಕ್ಕೆ, ನನ್ನ ಶಕ್ತಿ ಆಗಿರುವುದಕ್ಕೆ ಧನ್ಯವಾದಗಳು. ಹ್ಯಾಪಿ ಬರ್ತ್ಡೇ. ನಿಮಗೆ ದೇವರು ಮತ್ತಷ್ಟು ಶಕ್ತಿ, ಆರೋಗ್ಯ, ರಕ್ಷಣೆ ನೀಡಲಿ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.
Advertisement
View this post on Instagram
ʻಪತಿ ಪೋರ್ನೇಶ್ವರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುʼ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಟ್ರೋಲ್ ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]