ಇಂದು ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರ ಹುಟ್ಟು ಹಬ್ಬ (Birthday). ಈ ದಿನದಂದು ಚಿರು ಪತ್ನಿ ಮೇಘನಾ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ‘ಕೆಲವನ್ನಷ್ಟೇ ಆಚರಿಸಲು ಆಯ್ಕೆ ಮಾಡಿಕೊಳ್ಳುತ್ತೇವೆ. ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಹ್ಯಾಪಿ ಬರ್ತಡೇ ಹಸ್ಬೆಂಡ್’ ಎಂದು ಅವರು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ.
ಮೊನ್ನೆಯಷ್ಟೇ ಧ್ರುವ ಹುಟ್ಟು ಹಬ್ಬ
ನಟ ಧ್ರುವ ಸರ್ಜಾ (Dhruva Sarja) ಸಮಯ ಸಿಕ್ಕಾಗೆಲ್ಲ ಸಹೋದರ ಚಿರಂಜೀವಿ ಸರ್ಜಾ (Chiranjeevi Sarja) ಅವರ ಪುತ್ರ ರಾಯನ್ ಜೊತೆ ಕಾಲ ಕಳೆಯುತ್ತಾರೆ. ರಾಯನ್ (Rayan) ಕೂಡ ಚಿಕ್ಕಪ್ಪನ ಕಂಡರೆ ಎಲ್ಲಿಲ್ಲದ ಪ್ರೀತಿ. ಈ ಬಾರಿ ಚಿಕ್ಕಪ್ಪನ ಹುಟ್ಟು ಹಬಕ್ಕೆ ವಿಶೇಷ ವಿಡಿಯೋವೊಂದನ್ನು ತಾಯಿ ಮೇಘನಾ ಮೂಲಕ ಶೇರ್ ಮಾಡಿದ್ದ ಪುಟಾಣಿ. ಈ ವಿಡಿಯೋದಲ್ಲಿ ರಾಯನ್ ಗೆ ಧ್ರುವ ಸರ್ಜಾ ಡಾನ್ಸ್ ಕಲಿಸುತ್ತಿದ್ದಾರೆ. ಅಲ್ಲದೇ ಎತ್ತಿ ಮಗುವನ್ನು ಧ್ರುವ ಮುದ್ದಾಡುತ್ತಾರೆ. ಈ ವಿಡಿಯೋವನ್ನು ಮೇಘನಾ ರಾಜ್ (Meghana Raj) ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು.
ತಮ್ಮದೇ ಸಿನಿಮಾದ ಹಾಡಿನ ಹುಕ್ ಸ್ಟೇಪ್ ಅನ್ನು ಸಹೋದರನ ಮಗ ರಾಯನ್ ಗೆ ಮೊನ್ನೆಯಷ್ಟೇ ಹೇಳಿಕೊಟ್ಟಿದ್ದರು ಧ್ರುವ ಸರ್ಜಾ. ಥೇಟ್ ಮಗುವಿನಂತೆಯೇ ಅವರು ಕುಣಿದಿದ್ದರು. ಈ ವಿಡಿಯೋದಲ್ಲಿ ರಾಯನ್ ತಾತ, ನಟ ಸುಂದರ್ ರಾಜ್ ಕೂಡ ಇದ್ದರು. ಮೊಮ್ಮಗ ಡಾನ್ಸ್ ಕಂಡು ಅವರೂ ಸಂಭ್ರಮಿಸಿದ್ದರು. ಈ ವಿಡಿಯೋವನ್ನು ಧ್ರುವ ಅವರ ಹುಟ್ಟು ಹಬ್ಬಕ್ಕಾಗಿ ಹಂಚಿಕೊಂಡಿದ್ದರು ಮೇಘನಾ. ಈ ಮೂಲಕ ಚಿಕ್ಕಪ್ಪನಿಗೆ ಶುಭಾಶಯ ಹೇಳಿದ್ದ ರಾಯನ್.
ಇತ್ತೀಚೆಗಷ್ಟೇ ಅಗಲಿದ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ತಾಂಡ ಬಿಡುಗಡೆ ಆಗಿದೆ. ಇದು ಚಿರು ಅವರ ಕೊನೆಯ ಸಿನಿಮಾವಾಗಿದ್ದರಿಂದ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಾಯಿತು. ಚಿರು ಅವರ ಕೊನೆಯ ಸಿನಿಮಾದಲ್ಲಿ ಚಿರು ಪುತ್ರ ರಾಯನ್ ರಾಜ್ ಕೂಡ ಕಾಣಿಸಿಕೊಂಡಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]