‘ಬಿಗ್ ಬಾಸ್’ ಮನೆಗೆ (Bigg Boss Kannada 11) ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಟಾಪ್ 6 ಸ್ಪರ್ಧಿಗಳಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ಈಗ ಅವರು ತಾಯಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಫಿನಾಲೆ ವಾರ ತಲುಪಿದ ಖುಷಿಯನ್ನು ಕೂಗಿ ಹೇಳಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ. ವಿಶೇಷ ಎಂದರೆ ಅವರು ಈ ಸಲ ಕಪ್ ನಮ್ಮದೇ ಎಂದು ಕೂಗಿ ಹೇಳಿದ್ದಾರೆ. ಈ ಸಲ ಕಪ್ ನಮ್ಮದೇ ಎಂದು ತಾಯಿಗೆ ಭಾವುಕವಾಗಿ ಹನುಮಂತ ಸಂದೇಶ ನೀಡಿದ್ದಾರೆ.ಇದನ್ನೂ ಓದಿ:BBK 11: ಫಿನಾಲೆ ವಾರಕ್ಕೆ ಘಟಾನುಘಟಿ ಸ್ಪರ್ಧಿಗಳು ಎಂಟ್ರಿ
ಇದು ಫಿನಾಲೆ ವಾರ. ಈ ವಾರ ಯಾವುದೇ ಟಾಸ್ಕ್‌ಗಳನ್ನು ನೀಡುವುದಿಲ್ಲ. ಬಿಗ್ ಬಾಸ್ ನೀಡುವುದಿಲ್ಲ. ಹಾಗಾಗಿ ಫಿನಾಲೆ ವಾರದ ಮೊದಲ ದಿನವೇ ಬಿಗ್ ಬಾಸ್ ಚಟುವಟಿಕೆ ಒಂದನ್ನು ನೀಡಿದ್ದರು. ಈ ಚಟುವಟಿಕೆ ಪ್ರಕಾರ ಫಿನಾಲೆಗೆ ಬಂದಿದ್ದೀನಿ ಎಂಬುದನ್ನು ಕೂಗಿ ಹೇಳಬೇಕಿತ್ತು. ಈ ಬಗ್ಗೆ ಬಿಗ್ ಬಾಸ್ ಘೋಷಣೆ ಅಣತಿಯಂತೆ ಸ್ಪರ್ಧಿಗಳು ಕೂಗುತ್ತಾ ಮನದಾಸೆಯನ್ನು ಹಂಚಿಕೊಂಡಿದ್ದರು.
ಬಿಗ್ ಬಾಸ್‌ಗೆ ಬರೋದು ನಮ್ಮ ಕನಸಾಗಿತ್ತು ಎಂದು ಇತರೆ ಸ್ಪರ್ಧಿಗಳು ಹೇಳಿಕೊಂಡರು. ಹನುಮಂತ (Hanumantha) ಮಾತ್ರ ಇದನ್ನು ಡಿಫರೆಂಟ್ ಆಗಿ ವ್ಯಕ್ತಪಡಿಸಿದರು. ಯವ್ವೋ ನಾನು ಫಿನಾಲೆ ತಲುಪಿದೀನಿ ಬೇ, ಈ ಸಲ ಕಪ್ ನಮ್ದೇ ಎಂದು ಕೂಗಿ ಹೇಳಿದ್ದಾರೆ. ಅವರ ಮಾತನ್ನು ಕೇಳಿ ಸ್ಪರ್ಧಿಗಳು ನಕ್ಕಿದ್ದಾರೆ. ಹನುಮಂತ ಅವರು ಕೂಡ ಕಪ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಕಪ್ ಗೆದ್ದರೆ ಅವರಿಗೆ ಆರ್ಥಿಕವಾಗಿ ಕೂಡ ಸಹಾಯ ಆಗಲಿದೆ.