ಬಿಗ್ ಬಾಸ್ ಮನೆಯಲ್ಲಿ ಹನುಮಂತ (Hanumantha) ಉತ್ತಮವಾಗಿ ಆಟ ಆಡುತ್ತಾ ಜನರ ಮನಗೆದ್ದಿದ್ದಾರೆ. ಫಿನಾಲೆ ವಾರಕ್ಕೆ ಮೊದಲ ಸ್ಪರ್ಧಿಯಾಗಿ ಈಗಾಗಲೇ ಎಂಟ್ರಿ ಕೊಟ್ಟಿರುವ ಹನುಮಂತ ಮೇಲೆ ಫ್ಯಾನ್ಸ್ ಅವರೇ ಗೆಲ್ಲಬಹುದು ಎಂದು ಭರವಸೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ಗೆಳೆಯ ಧನರಾಜ್ (Dhanraj Achar) ಬಳಿ ಬಿಗ್ ಬಾಸ್ ಶೋ ಮುಗಿದ ಮೇಲೆ ಮದುವೆ (Wedding) ಪ್ಲ್ಯಾನ್ ಬಗ್ಗೆ ಹನುಮಂತ ಮೌನ ಮುರಿದಿದ್ದಾರೆ. ‘ಬಿಗ್ ಬಾಸ್’ ಟ್ರೋಫಿ ಗೆದ್ದರೆ ಅತ್ತೆ ಮನೆಗೆ ಹೋಗಿ ಮದುವೆಗೆ ಹೆಣ್ಣು ಕೇಳ್ತೀನಿ ಎಂದು ಮಾತನಾಡಿದ್ದಾರೆ.
Advertisement
ಧನರಾಜ್ ಬಳಿ ಆಟದ ಬಗ್ಗೆ ಹನುಮಂತ ಚರ್ಚಿಸುತ್ತಾ, ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ತಾವು ಆಟ ಆಡಿರುವುದರ ಬಗ್ಗೆ ತಮಗೆ ನೆಮ್ಮದಿ ಇದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಮುಂದಿನ ಪ್ಲ್ಯಾನ್ ಬಗ್ಗೆಯೂ ಮಾತನಾಡಿದ್ದಾರೆ. ಇಷ್ಟು ದಿನ ಚೆನ್ನಾಗಿ ಆಟ ಆಡಿದ್ದೇನೆ. ಒಂದು ವೇಳೆ ಔಟ್ ಆದರೆ ಖುಷಿಯಿಂದ ಹೊರಗೆ ಹೋಗುತ್ತೇನೆ. ಗೆದ್ದರೆ ನಮ್ಮ ಅತ್ತೆ ಮನೆಯ ಮುಂದೆ ಹೋಗಿ ನಿಲ್ಲುತ್ತೇನೆ. ಹುಡುಗಿ ಯಾಕೆ ಕೊಡಲ್ಲ ಅಂತ ಕೇಳುತ್ತೇನೆ ಎಂದು ಹನುಮಂತ (Hanumantha) ಮದುವೆ ಪ್ಲ್ಯಾನ್ ತಿಳಿಸಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಮೇಲಿನ ಹಲ್ಲೆಯಿಂದ ಶಾಕ್ ಆಗಿದೆ – ರಾಯಚೂರಿನಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿಕೆ
Advertisement
Advertisement
ಇನ್ನೂ ಅವರ ಆಸೆ ಈಡೇರುತ್ತೋ ಇಲ್ಲವೋ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಇದೆ. ಕೆಲವು ವಾರಗಳ ಹಿಂದೆ ಬಿಗ್ ಬಾಸ್ ಮನೆಗೆ ಹನುಮಂತ ಅವರ ತಂದೆ ತಾಯಿ ಬಂದಿದ್ದರು. ಆಗ ತಮ್ಮ ಸೊಸೆ ಹೇಗೆ ಇರಬೇಕು? ಎಂದು ಹನುಮಂತ ಅವರ ತಾಯಿ ಹೇಳಿದ್ದರು. ನಮ್ಮ ಮನೆಯ ಪದ್ಧತಿಯಂತೆಯೇ ಇರಬೇಕು ಎಂದು ದೊಡ್ಮನೆಯಲ್ಲಿ ಹನುಮಂತನ ಮುಂದೆ ಮಾತನಾಡಿದ್ದರು.
Advertisement
ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್‌ಗೆ ಹನುಮಂತ ಬಂದಿದ್ದರೂ ಕೂಡ ಇತರೆ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟು ಫಿನಾಲೆ ವಾರಕ್ಕೆ ಹೋಗಿದ್ದಾರೆ. ಇನ್ನೂ ಅಭಿಮಾನಿಗಳ ಆಸೆಯಂತೆ ಬಿಗ್ ಬಾಸ್ (Bigg Boss) ಟ್ರೋಫಿ ಅವರ ಪಾಲಾಗುತ್ತಾ? ಎಂದು ಕಾಯಬೇಕಿದೆ.