‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಕಾರ್ಯಕ್ರಮ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಈ ಹಿನ್ನೆಲೆ ಮನೆಯಲ್ಲಿ ಇದೀಗ ಫ್ಯಾಮಿಲಿ ರೌಂಡ್ ಶುರುವಾಗಿದೆ. ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ದೊಡ್ಮನೆಗೆ ಹನುಮಂತನ ಪೋಷಕರು ಬಂದಿದ್ದಾರೆ. ಅವರು ನಮ್ಮನೆ ಸೊಸೆ ಹೇಗಿರಬೇಕು ಎಂದು ಹನುಮಂತನ (Hanumantha) ತಾಯಿ ಬಣ್ಣಿಸಿದ್ದಾರೆ. ಇದನ್ನೂ ಓದಿ:ಕನ್ನಡದ ಹೊಸ ಸಿನಿಮಾದಲ್ಲಿ ‘ಜೇಮ್ಸ್’ ನಟಿ ಪ್ರಿಯಾ ಆನಂದ್
ಸ್ಪರ್ಧಿಗಳು ಈ ವಾರ ಜಾಲಿ ಮೂಡ್‌ನಲ್ಲಿದ್ದಾರೆ. ಸ್ಪರ್ಧಿಗಳು ಕುಟುಂಬದವರು ಒಬ್ಬೊಬ್ಬರೇ ಮನೆಗೆ ಬರುತ್ತಿರುವ ಹಿನ್ನೆಲೆ ಎಲ್ಲರ ಪಾಲಿಗೆ ವಿಶೇಷವಾಗಿದೆ. ಹನುಮಂತನ ನೋಡಲು ಅವರ ಪೋಷಕರು ಮನೆಗೆ ಕಾಲಿಟ್ಟಿದ್ದಾರೆ. ಈ ವೇಳೆ, ರಜತ್ ಅವರು ಹನುಮಂತನ ತಾಯಿಗೆ ನಿಮ್ಮನೆ ಸೊಸೆ ನಿಮ್ಮ ಹಾಗೇ ಧಿರಿಸನ್ನು ಧರಿಸಬೇಕಾ ಎಂದು ಕೇಳಿದ್ದಾರೆ.
ರಜತ್ (Rajath) ಮಾತಿಗೆ ಹನುಮಂತನ ತಾಯಿ, ಹೌದು ನಮ್ಮಂತೆಯೇ ಬಟ್ಟೆ (ಲಂಬಾಣಿ ಡ್ರೆಸ್) ಧರಿಸಬೇಕು. ಅದಕ್ಕೆ ಈಗಲೇ ಬಟ್ಟೆ ಹೊಲಿದು ಇಟ್ಟಿದ್ದೇನೆ ಎಂದಿದ್ದಾರೆ. ಅವರು ಹಾಕಲ್ಲ ಅಂದರೆ ಏನು ಮಾಡ್ತೀರಾ ಎಂದು ರಜತ್ ಮರುಪ್ರಶ್ನೆ ಹಾಕಿದ್ದಾರೆ. ಯಾಕೆ ಹಾಕಲ್ಲ, ಹಾಕೋಬೇಕು. ಆ ನಂತರ ಅಭ್ಯಾಸವಾಗುತ್ತದೆ ಎಂದಿದ್ದಾರೆ. ಬೇರೇ ತರಹ ಬಟ್ಟೆ ಹಾಕುವಂತಿಲ್ಲ. ನನಗೆ ಹಾಗೇ ಆಕೆ ರೆಡಿಯಾಗಬೇಕು ಎಂದಿದ್ದಾರೆ.
View this post on Instagram
ಅಮ್ಮನ ಮಾತಿಗೆ ಹೇ ನಡೆಯುತ್ತದೆ ಎಂದ ಹನುಮಂತಗೆ ನಡೆಯುತ್ತೆ ಅನ್ನೋ ಮಾತು ನಡೆಯೋದಿಲ್ಲ ನಮ್ಮ ಮನೆಯಲ್ಲಿ ಎಂದಿದ್ದಾರೆ. ನಮ್ಮ ಮನೆ ಹೆಣ್ಣು ದೇವತೆ ಮನೆ ಆಗಿದೆ. ಬೇರೇ ಬಟ್ಟೆ ನಡೆಯೋದಿಲ್ಲ ನಾನು ಈಗಲೇ ಹೇಳಿದ್ದೀನಿ ಅಂತ ಮಗನಿಗೆ ಪರೋಕ್ಷವಾಗಿ ಹನುಮಂತನ ತಾಯಿ ಮಾತನಾಡಿದ್ದಾರೆ. ಹನುಮಂತನ ತಾಯಿಯ ಮಾತಿಗೆ ಮನೆ ಮಂದಿ ನಕ್ಕಿದ್ದಾರೆ.