ಬೆಂಗಳೂರು: ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಎಂತಲೇ ಖ್ಯಾತಿ ಪಡೆದಿರುವ ಹನುಮಂತ ಅವರು ಸರಿಗಮಪ ಸೀಸನ್ 15ರ ಫೈನಲ್ ಹಂತ ತಲುಪಿದ್ದಾರೆ. ಫೈನಲ್ ಹಂತ ತಲುಪಿದ ಹನುಮಂತ ಅವರಿಗೆ ವಿಶೇಷ ಉಡುಗೊರೆ ಸಿಕ್ಕಿದೆ.
ಸರಿಗಮಪ ಕಾರ್ಯಕ್ರಮದಲ್ಲಿ ಫೈನಲ್ ಗೆ ಹೋದ ಹನುಮಂತ ಅವರಿಗೆ ಹಾರ್ಮೋನಿಯಂ ಉಡುಗೊರೆ ಸಿಕ್ಕಿದೆ. ಹನುಮಂತ ಅವರು ಸೆಮಿ ಫೈನಲ್ ನಲ್ಲಿ ‘ಜೋಗಿ’ ಸಿನಿಮಾದ ‘ಬೇಡುವೇನು ವರವನ್ನು..’ ಹಾಡನ್ನು ಹಾಡಿದ್ದರು. ತಮ್ಮ ಗಾಯನ ಪ್ರತಿಭೆ ಮೂಲಕ ಹನುಮಂತ ಅವರು ಸೆಮಿ ಫೈನಲ್ ನಲ್ಲಿಯೇ ಪ್ಲಾಟಿನಮ್ ಟಿಕೆಟ್ ಪಡೆದು ಫೈನಲ್ ಗೆ ಹೋಗಿದ್ದರು.
ಹನುಮಂತ ಅವರಿಗೆ ನಾದಬ್ರಹ್ಮ ಹಂಸಲೇಖ ಅವರ ಪತ್ನಿ ಲತಾ ಅವರ ಕಡೆಯಿಂದ ಉಡುಗೊರೆಯಾಗಿ ಹಾರ್ಮೋನಿಯಂ ಸಿಕ್ಕಿದೆ. ಕಳೆದ ವಾರದ ಸಂಚಿಕೆಗೆ ಬಂದಿದ್ದ ಲತಾ ಹಂಸಲೇಖ ಅವರು ತಮ್ಮ ಕೈಯಾರೇ ಹನುಮಂತ ಅವರಿಗೆ ಹಾರ್ಮೋನಿಯಂ ನೀಡಿ ಶುಭಾಶಯ ತಿಳಿಸಿದ್ದರು.
ಲತಾ ಹಂಸಲೇಖ ಅವರು ಈ ಹಿಂದೆ ಅಂದರೆ ಸರಿಗಮಪ ಸೀಸನ್ 14ರ ಅತಿ ಕಿರಿಯ ಸ್ಪರ್ಧಿಯಾಗಿದ್ದ ನೇಹಾಗೆ ಚಿನ್ನದ ಉಂಗುರ ನೀಡಿದ್ದರು. ಈ ಹಿಂದೆ ಹನುಮಂತ ಅವರಿಗೆ ಕಾರ್ಯಕ್ರಮದ ತೀರ್ಪುಗಾರರಾದ ವಿಜಯ್ ಪ್ರಕಾಶ್ ಅವರು ಇಯರ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಸರಿಗಮಪ ಕಾರ್ಯಕ್ರಮದ ಅಂತಿಮದಲ್ಲಿ ಕೀರ್ತನ್, ವಿಜೇತ್, ಸಾಸ್ವಿನಿ, ನಿಹಾಲ್, ಋತ್ವಿಕ್ ಹಾಗೂ ಹನುಮಂತ ಒಟ್ಟು ಆರು ಸ್ಪರ್ಧಿಗಳು ಫೈನಲ್ ಹಂತ ತಲುಪಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv