ಹಾಸನ: ವಿಶ್ವ ಹಿಂದೂ ಪರಿಷತ್ (Vishva Hindu Parishad) ಹಾಗೂ ಬಜರಂಗದಳ (Bajrang Dal) ವತಿಯಿಂದ ಮಂಗಳವಾರ ಹಾಸನ (Hassan) ನಗರದಲ್ಲಿ ಹಮ್ಮಿಕೊಂಡಿರುವ ಹನುಮಜಯಂತಿ (Hanumajayanti) ಹಾಗೂ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಸನ ನಗರ ವ್ಯಾಪ್ತಿಯಲ್ಲಿ ಮದ್ಯ (Alcohol) ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂಎಸ್ ಅರ್ಚನಾ ಆದೇಶ ಹೊರಡಿಸಿದ್ದಾರೆ.
Advertisement
ಹಾಸನ ನಗರ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ನೀರುಬಾಗಿಲು ಶ್ರೀ ಆಂಜನೇಯ ದೇವಸ್ಥಾನದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸಂತೇಪೇಟೆ ವೃತ್ತದಿಂದ ಬೃಹತ್ ಶೋಭಾಯಾತ್ರೆ ಆರಂಭಗೊಳ್ಳಲಿದ್ದು ಎನ್‌ಆರ್ ವೃತ್ತ, ಮಹಾವೀರ ವೃತ್ತ, ಸಹ್ಯಾದ್ರಿ ವೃತ್ತ, ಸೀತಾರಾಮಾಂಜನೇಯ ದೇವಸ್ಥಾನದ ರಸ್ತೆ ಮೂಲಕ ಯಾತ್ರೆ ಸಾಗಲಿದೆ. ಬಸಟ್ಟಿ ಕೊಪ್ಪಲು, ಎಂಜಿ ರಸ್ತೆ, ಶಂಕರಮಠ ರಸ್ತೆ, ಶಕ್ತಿಗಣಪತಿ ದೇವಸ್ಥಾನ ವೃತ್ತ, ಕುವೆಂಪುನಗರ, ಬಿಎಂ ರಸ್ತೆ ಮೂಲಕ ರೈಲ್ವೆ ನಿಲ್ದಾಣದವರೆಗೆ ಶೋಭಾಯಾತ್ರೆ ನಡೆಯಲಿದೆ. ಇದನ್ನೂ ಓದಿ: ಮಾಜಿ ಶಿಷ್ಯನ ವಿರುದ್ಧ ತೊಡೆ ತಟ್ಟಲಿದ್ದಾರೆ ಸಿದ್ದರಾಮಯ್ಯ – ಕೋಲಾರದಲ್ಲೇ ಸ್ಪರ್ಧೆ ಯಾಕೆ?
Advertisement
Advertisement
ಶೋಭಾಯಾತ್ರೆಯಲ್ಲಿ 15-20 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಂಜೆ 5:30 ಕ್ಕೆ ರೈಲ್ವೇ ನಿಲ್ದಾಣ ಮುಂಭಾಗ ಸಾರ್ವಜನಿಕ ಸಮಾರಂಭ ಕಾರ್ಯಕ್ರಮ ಆಯೋಜಿಸಿದ್ದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಬೆಲಗೂರು ಮಾರುತಿ ಪೀಠದ ವಿಜಯಮಾರುತಿ ಶರ್ಮ ಗುರುಗಳು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹಾಸನ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಅತ್ತೆ ಹೆಬ್ಬಾಳ್ಕರ್ ಮಾದರಿಯಲ್ಲಿ ರಾಜಕೀಯ ಶುರು ಮಾಡಿದ ಅಳಿಯ ರಜತ್ ಉಳ್ಳಾಗಡ್ಡಿಮಠ್
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k