ರಣವೀರ್ ಸಿಂಗ್ ಚಿತ್ರಕ್ಕೆ ಹನುಮಾನ್ ಚಿತ್ರ ಖ್ಯಾತಿಯ ಡೈರೆಕ್ಟರ್ ಎಂಟ್ರಿ

Public TV
1 Min Read
prasanth varma

ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ (Ranveer Singh) ನಟನೆಯ ಹೊಸ ಚಿತ್ರಕ್ಕೆ ಹನುಮಾನ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಆ ಚಿತ್ರಕ್ಕೆ ರಾಕ್ಷಸ  (Rakshasa)ಎನ್ನುವ ಹೆಸರನ್ನೂ ಇಡಲಾಗಿದೆಯಂತೆ. ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ, ಮುಂದಿನ ದಿನಗಳಲ್ಲಿ ಇದು ಬಹಿರಂಗವಾಗಬಹುದು ಎನ್ನುತ್ತಿದೆ ಬಿಟೌನ್.

Hanuman 1

ಈ ನಡುವೆ  ಹನುಮಾನ್ 2 ಚಿತ್ರದ ಕುರಿತಂತೆ ಮತ್ತೊಂದು ಹೊಸ ಅಪ್ ಡೇಟ್ ನೀಡಿದ್ದಾರೆ ನಿರ್ದೇಶಕ ಪ್ರಶಾಂತ್. ಅಂಜನಾದ್ರಿ 2.0 ಹೆಸರಿನ ವಿಡಿಯೋವೊಂದನ್ನು ಶೇರ್ ಮಾಡಿರುವ ನಿರ್ದೇಶಕರು ಅಂಜನಾದ್ರಿ ಗ್ರಾಮದ ಹಿನ್ನೆಲೆಯನ್ನು ತೋರಿಸುವಂತಹ ವಿವರಗಳನ್ನು ಈ ವಿಡಿಯೋದಲ್ಲಿ ನೀಡಿದ್ದಾರೆ.

Shri Ram Jai Hanuman 2

ಈ ಹಿಂದೆ ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿತ್ತು. ಈ ಶುಭ ದಿನದಂದು, ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ (Prashant Verma) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ತಮ್ಮ ಮುಂಬರುವ ಚಿತ್ರ ‘ಜೈ ಹನುಮಾನ್’ (Hanuman 2) ಸಿನಿಮಾಗಾಗಿ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿ ಇಂದು ಜೈ ಹನುಮಾನ್ ಸಿನಿಮಾದ ಸ್ಟ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ.

Hanuman 1

ಪ್ರಶಾಂತ್ ವರ್ಮಾ ಅವರ ಸೂಪರ್ ಹೀರೋ ಚಿತ್ರ ಹನುಮಾನ್ ಜನವರಿ 12 ರಂದು ಬಿಡುಗಡೆಯಾಯಿತು. ತೇಜ ಸಜ್ಜ (Teja Sajja), ವರಲಕ್ಷ್ಮಿ ಶರತ್‌ಕುಮಾರ್, ಅಮೃತ ಅಯ್ಯರ್ ಮತ್ತು ವಿನಯ್ ರೈ ನಟಿಸಿರುವ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಕ್ಸಸ್ ಬೆನ್ನಲ್ಲೇ ಜೈ ಹನುಮಾನ್ ಸಿನಿಮಾದ ಕೆಲಸ ಶುರುವಾಗಿವೆ.

 

ಹನುಮಾನ ಸಿನಿಮಾ ಮೂಲಕ ಪ್ರಶಾಂತ್ ವರ್ಮಾ ರಾಷ್ಟ್ರವ್ಯಾಪಿ ಜನಪ್ರಿಯರಾಗಿದ್ದಾರೆ. ಸೃಜನಶೀಲ ನಿರ್ದೇಶಕರು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU) ನಿಂದ ಮತ್ತೊಂದು ಮಹಾಕಾವ್ಯ ಸಾಹಸವನ್ನು ಪ್ರೇಕ್ಷಕರ ಎದುರು ತರುತ್ತಿದ್ದಾರೆ. ಅದರ ಭಾಗವಾಗಿ ಜೈ ಹನುಮಾನ್ ಸಿನಿಮಾ ಘೋಷಿಸಿದ್ದು, ದೊಡ್ಡ ಮಟ್ಟದಲ್ಲಿ ಮೂಡಿಬರಲಿರುವ ಸೀಕ್ವೆಲ್‌ಗಾಗಿ ನಿರ್ದೇಶಕರು ಈಗಾಗಲೇ ಸ್ಕ್ರಿಪ್ಟ್ ನ್ನು ಸಿದ್ಧಪಡಿಸಿದ್ದಾರೆ.

Share This Article