ಹನುಮಾನ್ ಖ್ಯಾತಿಯ ತೇಜ್ ಸಜ್ಜಾ (Teja Sajja) ನಟನೆಯ ‘ಮಿರಾಯ್’ (Mirai) ಚಿತ್ರದ ಟೀಸರ್ ರಿಲೀಸ್ ಆಗಿದೆ. ಆ್ಯಕ್ಷನ್ ಪ್ಯಾಕ್ಡ್ ಥ್ರಿಲ್ಲಿಂಗ್ ಟೀಸರ್ ಸಿನಿರಸಿಕರಿಗೆ ಕಿಕ್ ಕೊಟ್ಟಿದೆ. ಸೂಪರ್ ಯೋಧನಾಗಿ ತೇಜ್ ಅಭಿನಯಿಸಿದ್ದು, ಖಳನಾಯಕನಾಗಿ ಮನೋಚ್ ಮಂಚು ತೊಡೆ ತಟ್ಟಿದ್ದಾರೆ. ಭಾರತದ ಶ್ರೀಮಂತ ಐತಿಹಾಸಿಕ ಪರಂಪರೆಗೆ ಆಧುನಿಕ ಸಾಹಸದ ಟಚ್ ಕೊಟ್ಟು ‘ಮಿರಾಯ್’ ಟೀಸರ್ ಕಟ್ ಮಾಡಲಾಗಿದೆ. ಇದನ್ನೂ ಓದಿ:ತಮಿಳಿನಿಂದ ಕನ್ನಡ ಎಂದ ಕಮಲ್ ಹಾಸನ್‌ಗೆ ಸಂಕಷ್ಟ- ಕ್ಷಮೆಯಾಚಿಸುವಂತೆ ಆಗ್ರಹ


ಮನೋಜ್ ಮಂಚು (Manoj Manchu) ಖಳನಾಯಕನಾಗಿ ಮತ್ತು ರಿತಿಕಾ ನಾಯಕ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸೂಪರ್ ಯೋಧಾ ಪಾತ್ರದಲ್ಲಿ ತೇಜ್ ಸಜ್ಜಾ ಅಭಿನಯಿಸುತ್ತಿದ್ದಾರೆ. ಕಾರ್ತಿಕ್ ಗಟ್ಟಮ್ನೇನಿ ಮಿರಾಯ್‌ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

