ಬೆಂಗಳೂರು: ರಾಜ್ಯದಲ್ಲಿ ಮತ್ತೆ ಆಜಾನ್ ದಂಗಲ್ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣ ಕಾಣ್ತಿದೆ. ಮಸೀದಿಗಳಲ್ಲಿ ಮೈಕ್ ತೆರವಿಗೆ ಶ್ರೀರಾಮಸೇನೆ ನೀಡಿದ್ದ ಗಡುವು ನಿನ್ನೆಗೆ ಮುಕ್ತಾಯವಾಗಿದೆ.
Advertisement
ಮೇ 9ರಂದು ಸಾವಿರ ದೇಗುಲಗಳಲ್ಲಿ ಬೆಳಗ್ಗೆ ಐದಕ್ಕೆ ಹನುಮಾನ್ ಚಾಲೀಸಾ ಹಾಕ್ತೀವಿ. ತಾಕತ್ ಇದ್ರೆ ತಡೆಯಿರಿ ಎಂದು ಸರ್ಕಾರಕ್ಕೆ ಶ್ರೀರಾಮಸೇನೆ ಸವಾಲು ಹಾಕಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸುನೀಲ್ ಕುಮಾರ್, ಒಂದು ಧ್ವನಿವರ್ಧಕದಿಂದ ನೂರಾರು ಜನಕ್ಕೆ ತೊಂದರೆ ಆಗಬಾರದು. ಮುಸಲ್ಮಾನ ಸಮುದಾಯ ಈ ಬಗ್ಗೆ ಮರು ಆಲೋಚನೆ ಮಾಡಬೇಕು. ಪರಿಸ್ಥಿತಿ ನೋಡಿಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ ಎಂದಿದ್ದಾರೆ. ಇದನ್ನೂ ಓದಿ: ಈದ್ ಹಬ್ಬದಂದು ಆರತಿ ಮಾಡಬೇಡಿ: ರಾಜ್ ಠಾಕ್ರೆ ಮನವಿ
Advertisement
Advertisement
ಮಾಜಿ ಮಂತ್ರಿ ಹೆಚ್ ವಿಶ್ವನಾಥ್ ಮಾತನಾಡಿ, ಮುಖ್ಯಮಂತ್ರಿಗಳೇ ನಿಮ್ಮ ಹಾರ್ಡ್‍ವೆಪನ್ ಶಾಂತಿ ಕದಡ್ತಿರೋ ಆರ್‍ಎಸ್‍ಎಸ್, ಭಜರಂಗದಳದವರ ಮೇಲೆ ಬಳಸಿ.. ಸರ್ಕಾರಕ್ಕೆ ನಿತ್ಯವೂ ಕೆಟ್ಟ ಹೆಸರು ತರ್ತಾ ಇದ್ದಾರೆ ಎಂದು ಗರಂ ಆಗಿದ್ದಾರೆ. ಅತ್ತ ರಂಜಾನ್ ಹಬ್ಬಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಅಕ್ಷಯ ತೃತೀಯವಾದ ನಾಳೆ ಮಹಾರಾಷ್ಟ್ರದಲ್ಲಿ ಮಹಾ ಆರತಿ ನಡೆಸಬಾರದು ಎಂದು ಎಂಎನ್‍ಎಸ್‍ನ ರಾಜ್ ಠಾಕ್ರೆ ಸೂಚಿಸಿದ್ದಾರೆ. ಇದ್ರ ಬದಲು ಜೂನ್ 5ರಂದು ರಂದು ಚಲೋ ಅಯೋಧ್ಯೆಗೆ ರಾಜ್ ಠಾಕ್ರೇ ಕರೆ ನೀಡಿದ್ದಾರೆ.