ಹನುಮಾನ್ ಚಾಲೀಸಾ ಪಠಿಸಿ ಕಾಂಗ್ರೆಸ್‍ಗೆ ಕೇಸರಿ ಪಡೆ ಸೆಡ್ಡು

Public TV
1 Min Read
HANUMAN CHALISA 3

ಬೆಂಗಳೂರು: ಕಾಂಗ್ರೆಸ್ ಪಕ್ಷ (Congress) ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ (Bajarangdal)ನಿಷೇಧದ ಪ್ರಸ್ತಾಪ ಮಾಡಿರೋದಕ್ಕೆ ಬಿಜೆಪಿ (BJP) ಯವರ ಜೊತೆ ಹಿಂದೂ ಸಂಘಟನೆಗಳು ಕೂಡ ಸಿಡಿದೆದ್ದಿವೆ. ಕಾಂಗ್ರೆಸ್ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸತೊಡಗಿದೆ.

HANUMAN CHALISA 2

ಮಲ್ಲೇಶ್ವರಂನ ರಾಮ ದೇಗುಲದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ನೇತೃತ್ವದಲ್ಲಿ ಹನುಮಾನ್ ಚಾಲಿಸಾ (Hanuman Chalisa) ಪಾರಾಯಣ ಮಾಡಿ ಕಾಂಗ್ರೆಸ್‍ಗೆ ಸೆಡ್ಡು ಹೊಡೆದರು. ಬಿಜೆಪಿಯವರಿಗೆ ಹನುಮಾನ್ ಚಾಲೀಸಾ ಹೇಳಲು ಬರುತ್ತಾ ಎಂದು ಸುರ್ಜೆವಾಲಾ ಹಾಕಿದ್ದ ಸವಾಲ್‍ಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂ. ವಶ

HANUMAN CHALISA 1

ಬೆಂಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ರಾಮನಗರ, ಮಂಡ್ಯ, ಉಡುಪಿ, ತುಮಕೂರು, ಚಿಕ್ಕಮಗಳೂರು, ಉಡುಪಿ, ಯಾದಗಿರಿ ಸೇರಿ ರಾಜ್ಯದ ವಿವಿಧೆಡೆ ಬಜರಂಗದಳದ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಾರಾಯಣ ಮಾಡಿ, ಪ್ರತಿಭಟನೆ ಮಾಡಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರಲು ಬಿಡಲ್ಲ ಎಂದು ಶಪಥ ಮಾಡಿದ್ದಾರೆ. ಮನೆ ಮನೆಗೆ ತೆರಳಿ ಕಾಂಗ್ರೆಸ್‍ಗೆ ಮತ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

HANUMAN CHALISA

ಈ ಮಧ್ಯೆ, ಗಾಳಿ ಆಂಜನೇಯ ದೇಗುಲದಲ್ಲಿ ಹನುಮಾನ್ ಚಾಲೀಸ್ ಪಠಣಕ್ಕೆ ಮುಂದಾದ ಕಾರ್ಯಕರ್ತರಿಗೆ, ನೀವು ಪಠಣ ಮಾಡುವುದಾದರೆ ಮಾಡಿ. ಆದರೆ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ದೇವಾಲಯದ ಒಳಗೆ ರಾಜಕೀಯ ತರಬೇಡಿ ಎಂದು ಆಡಳಿತ ಮಂಡಳಿ ಖಡಕ್ಕಾಗಿ ಹೇಳಿತು. ಹೀಗಾಗಿ ದೇಗುಲದ ಮುಂಭಾಗವೇ ಹಿಂದೂ ಕಾರ್ಯಕರ್ತರು ಹನುಮಾನ್ ಚಾಲಿಸಾ ಪಠಿಸಿದ್ರು. ಮಧ್ಯಪ್ರದೇಶದ ಜಬಲ್ಪುರದಲ್ಲಿ ಕಾಂಗ್ರೆಸ್ ಕಚೇರಿಗೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ದಾಂಧಲೆ ನಡೆಸುವ ದೃಶ್ಯಗಳು ವೈರಲ್ ಆಗಿವೆ.

 

Share This Article