ಮಂಡ್ಯ: ಶ್ರೀರಂಗಪಟ್ಟಣದ (Srirangapatna) ಕಾವೇರಿ ತೀರದಲ್ಲಿ ಅದ್ಧೂರಿಯಾಗಿ ಹನುಮ ಸಂಕೀರ್ತನಾ ಯಾತ್ರೆ (Hanuma Sankeerthana Yatra) ನೆರವೇರಿತು. ರಾಜ್ಯದ ಮೂಲೆಮೂಲೆಯಿಂದ ಸಹಸ್ರಾರು ಹನುಮ ಭಕ್ತರು ಭಾಗಿ ಆಗಿದ್ದರು.
ನಿಮಿಷಾಂಬ ದೇವಾಲಯದ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು. ಉತ್ತರದಲ್ಲಿ ರಾಮನಿಗೆ ಮಂದಿರ ಆಗುತ್ತಿದೆ. ದಕ್ಷಿಣದಲ್ಲಿ ಹನುಮನಿಗೆ ಅನ್ಯಾಯ ಆಗುತ್ತಿದೆ. ಶ್ರೀರಂಗಪಟ್ಟಣದ ಮೂಡಲಬಾಗಿಲು ಆಂಜನೇಯನಿಗೆ ಶೀಘ್ರದಲ್ಲೇ ಮಂದಿರ ಕಟ್ಟುವ ಸಂಕಲ್ಪ ಮಾಡೋಣ ಎಂದು ಹಿಂದೂ ಜಾಗರಣ ವೇದಿಕೆ ಕರೆ ನೀಡಿತು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ 1 ಲಕ್ಷ ಜನರಿಂದ ಭಗವದ್ಗೀತೆ ಶ್ಲೋಕ ಪಠಣ
Advertisement
Advertisement
ಹನುಮನ ಮೇಲಾಣೆ, ಮಂದಿರವಲ್ಲೇ ಕಟ್ಟುವೆವು ಎಂದು ಘೋಷಣೆ ಮೊಳಗಿತು. ಕಲ್ಕಡ್ಕ ಪ್ರಭಾಕರ್ ದಿಕ್ಸೂಚಿ ಭಾಷಣ ಮಾಡಿದರು. ಬಳಿಕ ನಿಮಿಷಾಂಬ ದೇವಸ್ಥಾನದಿಂದ ಆರಂಭಗೊಂಡ ಯಾತ್ರೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇಗುಲದವರೆಗೆ ಸಾಗಿತು. ಕೇಸರಿ ಬಾವುಟ ಹಿಡಿದ ಹನುಮ ಭಕ್ತರು ಕುಣಿದು ಕುಪ್ಪಳಿಸಿದರು.
Advertisement
ಟಿಪ್ಪು ಬೇಸಿಗೆ ಅರಮನೆ, ಜಾಮಿಯ ಮಸೀದಿ ಮಾರ್ಗದಲ್ಲಿ ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಮುಗಿಲು ಮುಟ್ಟಿತು. ಹನುಮ ಮಾಲಾಧಾರಿಗಳು ಕರ್ಪೂರ ಹಚ್ಚಿ ಜೈಕಾರ ಕೂಗಿದರು. ಆದರೆ, ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದಂತೆ ಜಾಮಿಯ ಮಸೀದಿ ಬಳಿ ಪೊಲೀಸ್ ಪಡೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಇದನ್ನೂ ಓದಿ: Ayodhya Ram Mandir: ರಾಮಮಂದಿರ ಉದ್ಘಾಟನೆಗೆ ನೇಪಾಳದಿಂದ ಬರ್ತಿದೆ ಚಿನ್ನಾಭರಣ, ವಸ್ತ್ರ, ಸಿಹಿತಿನಿಸು
Advertisement
ಮತ್ತೊಂದೆಡೆ ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲೂ ಹನುಮ ಮಾಲಾಧಾರಿಗಳ ಮಾಲಾ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಮಾಲಾಧಾರಿಯೊಬ್ಬನ ಕೈಯಲ್ಲಿ ಸಾವರ್ಕರ್, ಪ್ರಧಾನಿ ಮೋದಿ ಫೋಟೋ ಕಂಡುಬಂತು. ಚಿಕ್ಕಮಗಳೂರಿನಲ್ಲೂ ದತ್ತ ಜಯಂತಿ ಅಂಗವಾಗಿ ಅನಸೂಯ ಜಯಂತಿ ಆಚರಿಸಲಾಯಿತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿ.ಟಿ.ರವಿ ಕೂಡ ಭಾಗಿಯಾಗಿದ್ದರು.