ಮೈಸೂರು: ಇಲ್ಲಿನ ಹುಣಸೂರಿನಲ್ಲಿ ಡಿಸೆಂಬರ್ 3ರ ಹನುಮ ಜಯಂತಿ ವೇಳೆ ಭಾರೀ ಹೈಡ್ರಾಮಾ ನಡೆದಿತ್ತು. ಈಗ ಹುಣಸೂರಿನಲ್ಲಿ ಇಂದು ಬಿಜೆಪಿ ಹನುಮ ಜಯಂತಿಗೆ ಮುಂದಾಗಿದೆ.
ಆದ್ರೆ, ಇದಕ್ಕೆ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಹಲವು ನಿಬಂಧನೆಗಳನ್ನ ವಿಧಿಸಿದೆ. ಹನುಮ ಜಯಂತಿಯನ್ನು ಜಿಲ್ಲಾಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದಲೇ ಮಾಡಲು ಮುಂದಾಗಿದೆ. ಯಾವುದೇ ಟ್ಯಾಬ್ಲೋ, ಫ್ಲೇಕ್ಸ್ ಬಳಸುವಂತಿಲ್ಲ ಎಂಬ ನಿಬಂಧನೆಗಳನ್ನು ಹಾಕಿದೆ. ಹೀಗೆ ಷರತ್ತುಗಳನ್ನು ಹಾಕುವ ಮೂಲಕ ಬಿಜೆಪಿ ನಾಯಕರಿಗೆ ಕಡಿವಾಣ ಹಾಕಲು ಸರ್ಕಾರ ಯತ್ನಿಸಿದೆ. ಇದನ್ನೂ ಓದಿ: ಹನುಮಮಾಲೆ ವಿಸರ್ಜಿಸಿದ ಸಂಸದ ಪ್ರತಾಪ್ ಸಿಂಹ- ಹನುಮ ಜಯಂತಿ ಮಾಡೇ ಮಾಡ್ತೀವೆಂದು ಸವಾಲು
Advertisement
ಹನುಮ ಜಯಂತಿಗೆ ಷರತ್ತುಗಳೇನು?
* ಹನುಮ ಜಯಂತಿಯಲ್ಲಿ ರಾಜಕೀಯ ವ್ಯಕ್ತಿಗಳ ವಿಶೇಷ ವಾಹನ ಇರುವಂತಿಲ್ಲ
* ರಾಜಕೀಯ ವ್ಯಕ್ತಿಗಳು ಕೇವಲ ಹನುಮ ಭಕ್ತರಾಗಿಯೇ ಜಯಂತಿಗೆ ಬರಬೇಕು
* ಹನುಮ ಜಯಂತಿಯಲ್ಲಿ ಎಂಪಿ/ಎಂಎಲ್‍ಎ ಯಾರು ಸಹ ಭಾಷಣ ಮಾಡುವಂತಿಲ್ಲ
* ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಎಂಪಿ/ಎಂಎಲ್‍ಎ ಹೆಸರು ಹಾಕುವಂತಿಲ್ಲ
* ಹನುಮ ಜಯಂತಿಗೆ ಶುಭಾಷಯ ಕೋರಿ ರಾಜಕಾರಣಿಗಳ ಫ್ಲೆಕ್ಸ್ ಹಾಕುವಂತಿಲ್ಲ
* ಜಿಲ್ಲಾಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದಲೇ ಹನುಮಜಯಂತಿ ಆಚರಣೆ.. ಹೀಗೆ ಹಲವು ಷರತ್ತು ವಿಧಿಸಿ ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
Advertisement
Advertisement
Advertisement