71,000 ರೂ. ಸೀರೆಯುಟ್ಟು ಬಂದ ಹನ್ಸಿಕಾ ಮೋಟ್ವಾನಿ

Public TV
1 Min Read
hansika

ಸೌತ್ ಚಿತ್ರರಂಗದ ಮುದ್ದು ಚೆಲುವೆ ಹನ್ಸಿಕಾ ಮೋಟ್ವಾನಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಮಿಳಿನ `ಮಹಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಹನ್ಸಿಕಾಗೆ ಈ ಸಿನಿಮಾ ತುಂಬಾನೇ ಸ್ಪೆಷಲ್ ಏಕೆಂದರೆ ಹನ್ಸಿಕಾ ನಟನೆಯ 50ನೇ ಸಿನಿಮಾ ಇದಾಗಿದ್ದು, ಪ್ರಚಾರದಲ್ಲಿ ಕಾರ್ಯದಲ್ಲಿ ಸ್ಪೆಷಲ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ದುಬಾರಿ ಸೀರೆಯುಟ್ಟು ನಟಿ ಮಿಂಚಿದ್ದಾರೆ.

 

View this post on Instagram

 

A post shared by Hansika Motwani (@ihansika)

ಬಾಲನಟಿಯಾಗಿ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಪ್ರಸ್ತುತ ನಾಯಕಿಯಾಗಿ ಫಿಲ್ಮಿಂ ದುನಿಯಾದಲ್ಲಿ ಮಿಂಚ್ತಿದ್ದಾರೆ. ಕನ್ನಡದ `ಬಿಂದಾಸ್’ ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ರಿಲೀಸ್ ಆಗಿರುವ ತಮಿಳಿನ `ಮಹಾ’ ಚಿತ್ರ ಹನ್ಸಿಕಾ ನಟನೆಯ 50ನೇ ಚಿತ್ರವಾಗಿದೆ. ಹಾಗಾಗಿ ದುಬಾರಿ ಸೀರೆಯಲ್ಲಿ ಧರಿಸಿ ಬಂದಿದ್ದಾರೆ. 71000 ಸಾವಿರದ ಈ ದುಬಾರಿ ಸೀರೆಯಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ. ನಟಿಯ ಸ್ಯಾರಿಯ ಫೋಟೋ ಜತೆ ಸೀರೆ ಬೆಲೆ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸೀರೆಯಲ್ಲಿ ಸಿಂಪಲ್‌ ಡಿಸೈನ್‌ಯಿದ್ದು, ಕಮ್ಮಿ ತೂಕವಿರುವ ಸೀರೆಯಾಗಿದೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

 

View this post on Instagram

 

A post shared by Hansika Motwani (@ihansika)

ಕಾಫಿ ಮತ್ತು ಕಪ್ಪು ಬಣ್ಣದ ಸ್ಲೀವ್‌ಲೆಸ್ ಸೀರೆಯಲ್ಲಿ ಹನ್ಸಿಕಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ `ಮಹಾ’ ಚಿತ್ರದ ಆಡಿಯೋ ಲಾಂಚ್‌ನಲ್ಲಿ 71000 ಸಾವಿರದ ದುಬಾರಿ ಸೀರೆಯಲ್ಲಿ ಬಹುಭಾಷಾ ನಟಿ ಹನ್ಸಿಕಾ ಕಾಣಿಸಿಕೊಂಡಿದ್ದಾರೆ. ನಟಿಯ ಲುಕ್ ಜತೆ ಸೀರೆ ಬೆಲೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *