ಚಿತ್ರದುರ್ಗ: ಹಾನಗಲ್ ವಿಧಾನಸಭಾ ಉಪಚುನಾವಣೆಯ ಸೋಲಿಗೆ ಕಾರಣ ಹುಡುಕುವ ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದಬಳಿಕ ಮಾತನಾಡಿದ ಅವರು, ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಆ ಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಲ್ಲಿ ನಾವು 30ಸಾವಿರ ಅಂತರದಲ್ಲಿ ಗೆಲುವುಸಾಧಿಸಿದ್ದೇವೆ. ಆದರೆ ಬಹು ನಿರೀಕ್ಷೆಯ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಹೀಗಾಗಿ ಈ ಚುನಾವಣಾ ಸೋಲಿನ ಬಗ್ಗೆ ಕ್ಷೇತ್ರದ ಕಾರ್ಯಕರ್ತರು ಹಾಗು ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತೇವೆ ಎಂದಿದ್ದಾರೆ.
Advertisement
Advertisement
ಹಾನಗಲ್‍ನಲ್ಲಿ ಬಿಜೆಪಿ ಹಿನ್ನೆಡೆಗೆ ಕಾರಣ ಹುಡುಕುವ ಪ್ರಯತ್ನ ಮಾಡುತ್ತೇವೆ. ಇನ್ನು ಕೋವಿಡ್‍ನಿಂದಾಗಿ ಸತತ ಎರಡು ವರ್ಷಗಳಕಾಲ ಸ್ಥಗಿತವಾಗಿದ್ದ ರಾಷ್ಟ್ರೀಯನಾಟಕೋತ್ಸವ ಈ ಬಾರಿವಿಜೃಂಭಣೆಯಿಂದ ನಡೆಸಲಾಗಿದೆ. ಇದರಲ್ಲಿ ಭಾಗಿಯಾದನನಗೂ ಸಂತಸವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು
Advertisement
Advertisement
ಹಾಗೆಯೇ ಇದಕ್ಕು ಮುನ್ನ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಣೇಹಳ್ಳಿಯಲ್ಲಿ ಸಾಂಸ್ಕøತಿಕ ವಿಶ್ವವಿದ್ಯಾಲಯ ಆರಂಭಿಸುವಂತೆ ಸಾಹಿತಿ ದೊಡ್ಡರಂಗೇಗೌಡ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಈ ವೇಳೆ ನಾನು ಸಿಎಂ ಆಗಿದ್ದಿದ್ದರೆ ಈಗಲೇ ಅದನ್ನು ಘೋಷಣೆ ಮಾಡುತ್ತಿದ್ದೆನು. ಆದರೂ ಆತಂಕ ಏನು ಬೇಡ. ಸಿಎಂ ಬೊಮ್ಮಾಯಿ ರಾಷ್ಟ್ರೀಯ ನಾಟಕೋತ್ಸವ ಸಮಾರೋಪಕ್ಕೆ ಬರ್ತಿದ್ದಾರೆ. ಆಗ ಸಿಎಂ ಬೊಮ್ಮಾಯಿಗೆ ಸಾಂಸ್ಕೃತಿಕ ವಿಶ್ವ ವಿದ್ಯಾಲಯ ಬಗ್ಗೆ ಅವರಿಗೆ ಹೇಳುತ್ತೇನೆ. ಅಲ್ಲದೇ ಸಾಣೇಹಳ್ಳಿ ಎಂಬ ಕುಗ್ರಾಮ ಈಗ ಸಾಂಸ್ಕೃತಿಕ ಕೇಂದ್ರವಾಗಿದೆ. ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶ್ರೀಗಳು ನಾಟಕ ಚಳುವಳಿಯನ್ನೇ ಆರಂಭಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ
ಈ ಶಿವಕುಮಾರ ಕಲಾ ಸಂಘ ದೇಶಾದ್ಯಂತ ಖ್ಯಾತಿ ಪಡೆದಿದ್ದೂ, ನಶಿಸಿಹೋಗುತ್ತಿದ್ದ ನಾಟಕ ಕಲೆ ಉಳಿವಿಗೆ ಶ್ರೀಗಳ ಶ್ರಮ ಅಪಾರವಾಗಿದೆ ಜೊತೆಗೆ ಶರಣ ಸಂಸ್ಕೃತಿ ಕಟ್ಟಿಕೊಡುವಲ್ಲಿ ನಾಟಕೋತ್ಸವ ಯಶಸ್ವಿಎಂದರು. ಈ ವೇಳೆ ಪಂಡೊತಾರಾಧ್ಯ ಶ್ರೀಗಳು, ಖನಿಜ ನಿಗಮ ಅಧ್ಯಕ್ಷ ಲಿಂಗ ಮೂರ್ತಿಸಾಹಿತಿ ದೊಡ್ಡರಂಗೇಗೌಡ ಮತ್ತು ಚನ್ನಗಿರಿ ಶಾಸಕಮಾಡಾಳ್ ವಿರುಪಾಕ್ಷಪ್ಪಇದ್ದರು.