-ಬೊಮ್ಮಾಯಿ ರಾಜ್ಯವನ್ನು ನರಕ ಮಾಡಿದ್ದಾರೆ
ಬೆಂಗಳೂರು: ರಾಜ್ಯದಲ್ಲಿ ಹಾನಗಲ್, ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಕಾವು ಹೆಚ್ಚಾಗಿದೆ. ಮೂರೂ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಪ್ರಚಾರ ಕಣದಲ್ಲಿ ಮತಯಾಚಿಸುತ್ತಿದ್ದಾರೆ ಜೊತೆಗೆ ಪಕ್ಷಗಳ ಮಧ್ಯೆ ಪ್ರತಿಷ್ಠೆ, ಪ್ರಭಾವ, ಹಣಬಲ, ವೈಯಕ್ತಿಕ ಟೀಕೆ-ನಿಂದನೆಗಳು ನಡೆಯುತ್ತಿದ್ದು, ಇದು ಕೌರವರ, ಪಾಂಡವರ ಕದನ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
Advertisement
ಹಾನಗಲ್, ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಕಾವು ಹೆಚ್ಚಾಗಿದೆ. ಮೂರೂ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾ ಪ್ರಚಾರ ಕಣದಲ್ಲಿ ಮತಯಾಚಿಸುತ್ತಿದ್ದಾರೆ. ಈ ಉಪಚುನಾವಣೆಯಲ್ಲಿ ಯಾರೇ ಗೆದ್ರೂ ಅವರ ಅಧಿಕಾರಾವಧಿ ಒಂದೂವರೇ ವರ್ಷ ಮಾತ್ರ. ಆದರೆ ಹಾನಗಲ್, ಸಿಂದಗಿ ಆಡಳಿತ ಮತ್ತು ವಿಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಸಿಎಂ ಬೊಮ್ಮಾಯಿಗೆ ಇದು ಮೊದಲ ಬೈ ಎಲೆಕ್ಷನ್ ಟೆಸ್ಟ್ ಆದರೆ, ವಿಪಕ್ಷಗಳ ಪಾಲಿಗೆ ಆಡಳಿತ ವಿರೋಧಿ ಅಲೆ ಎಷ್ಟಿದೆ ಎನ್ನುವುದನ್ನು ಪರೀಕ್ಷಿಸಿಕೊಳ್ಳಲು ಒದಗಿ ಬಂದಿರುವ ವೇದಿಕೆಯಾಗಿದೆ. ಹೀಗಾಗಿ ಗೆಲ್ಲಲೇಬೇಕು ಎಂಬ ಭರದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಮಾತಿನ ಜಟಾಪಟಿ ನಡಿಯುತ್ತಿದೆ. ರಾಜಕೀಯ ನಾಯಕರು ನಿತ್ಯ ಭಾಷಣಗಳ ಮೂಲಕ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಇದ್ದಾಗ ಕೆಲ ಡೈಲಾಗ್ ಫಿಕ್ಸ್: ಬೊಮ್ಮಾಯಿ
Advertisement
Advertisement
ಹಾನಗಲ್ ಕ್ಷೇತ್ರದ ವಿಚಾರವಾಗಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಮಧ್ಯೆ ಅಭಿವೃದ್ಧಿ ವಿಚಾರವಾಗಿ ಸವಾಲ್-ಪ್ರತಿಸವಾಲ್ ನಡೆದಿದೆ. ಹಾನಗಲ್‍ಗೆ ಏನ್ ಕೊಟ್ಟಿದ್ದಾರೆ ಅಂತ ಲೆಕ್ಕ ಕೇಳಿದ್ರೆ ಸಿದ್ದರಾಮಯ್ಯ ಓಡಿ ಹೋಗುತ್ತಾರೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ನಾನು ಸಿಎಂ ಆದಾಗ ಹಾವೇರಿ ಜಿಲ್ಲೆಗೆ 2,400 ಕೋಟಿ ಕೊಟ್ಟಿದ್ದೇನೆ. ಮಿಸ್ಟರ್ ಬೊಮ್ಮಾಯಿ ಎರಡೂವರೆ ವರ್ಷದಲ್ಲಿ ನೀವೇನು ಏನು ಮಾಡಿದ್ದೀರಿ ಅಂತ ಲೆಕ್ಕ ಹೇಳ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ಬೊಮ್ಮಾಯಿ
Advertisement
ನಾವು 15 ಲಕ್ಷ ಮನೆ ಕಟ್ಟಿಕೊಟ್ಟಿದ್ದೇವೆ. ನೀವು ಒಂದೇ ಒಂದು ಮನೆ ಕಟ್ಟಿಸಿಕೊಡೋಕೆ ಆಗಿಲ್ಲ. ಈ ವಿಚಾರದಲ್ಲಿ ಬೊಮ್ಮಾಯಿ ಜೊತೆ ಬಹಿರಂಗ ಚರ್ಚೆಗೆ ರೆಡಿ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ಇದಕ್ಕೆ ಕಾಗದದಲ್ಲಿ ಹೇಳಿದ್ರೇ ಸಾಕೇ? ಅದಕ್ಕೆ ದುಡ್ಡು ಇಡಬೇಕಲ್ಲಾ? ಎಂದು ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಇದಕ್ಕೆ ಮತ್ತೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಬಸವರಾಜ ಬೊಮ್ಮಾಯಿ ಖಾಲಿ ಡಬ್ಬಾ. ರಾಜ್ಯವನ್ನು ನರಕ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.