447 ವರ್ಷಗಳ ಹಳೆಯ ಗೋಸ್ವಾಮಿ, ತುಳಸಿದಾಸರ ಕೈಬರಹದ ರಾಮಚರಿತಮಾನಸವನ್ನು ಇನ್ನೂ ಸಂರಕ್ಷಿಸಿರುವ ವಿಶೇಷ ಸುದ್ದಿಯೊಂದು ರಾಜಪುರದಲ್ಲಿ ಹೊರಬಂದಿದೆ. ಅಲ್ಲದೆ ಈ ಕೃತಿಯನ್ನು ನೋಡಿದರೆ ಮಾನವನ ಎಲ್ಲ ಸಂಕಷ್ಟ ದೂರವಾಗುತ್ತೆ ಎಂದು ಎಷ್ಟೋ ಜನರು ನಂಬುತ್ತಾರೆ.
447 ವರ್ಷಗಳ ಹಿಂದೆ ಗೋಸ್ವಾಮಿ ಅವರು ತಾಳೆಗರಿ ಮೇಲೆ ಬರೆದ ‘ರಾಮಚರಿತಮಾನಸ’ ಇನ್ನೂ ಅವರ ಹುಟ್ಟೂರಿನಲ್ಲಿ ಸಂರಕ್ಷಿಸಲಾಗಿದೆ. ಗೋಸ್ವಾಮಿ ಅವರ ಹಳ್ಳಿ ರಾಜಪುರದಲ್ಲಿ ಇವರ ಕೈಬರಹವಿದೆ. ಈ ಕೈಬರಹದ ರಾಮಚರಿತಮಾನಸವನ್ನು ನೋಡಿದಾಗ, 500 ವರ್ಷಗಳಲ್ಲಿ ಹಿಂದಿ ವರ್ಣಮಾಲೆಯ 15 ಅಕ್ಷರಗಳು ಬದಲಾಗಿವೆ ಎಂದು ತಿಳಿದಿದೆ. ಇದನ್ನೂ ಓದಿ: ತುಂಗಾಭದ್ರಾ ಆರತಿಯಿಂದ ಹರಿಹರದ ಗತವೈಭವ ಮರಳಿ ಪಡೆಯುವ ಗುರಿ: ವಚನಾನಂದ ಸ್ವಾಮೀಜಿ
Advertisement
Advertisement
ಶ್ರೀರಾಮನನ್ನು ಸಾಮಾನ್ಯ ಜನರ ಬಳಿಗೆ ತರುವಲ್ಲಿ ‘ರಾಮಚರಿತಮಾನಸ’ ಮಹಾಕಾವ್ಯದ ಪಾತ್ರ ದೊಡ್ಡದು. ಗೋಸ್ವಾಮಿ ತುಳಸಿದಾಸರು ರಚಿಸಿದ ರಾಮಚರಿತಮಾನಸಗಳ ರಚನೆಯು 966 ದಿನಗಳಲ್ಲಿ ಪೂರ್ಣಗೊಂಡಿತು. ಇದಕ್ಕಾಗಿ ತುಳಸಿದಾಸರು ಅಯೋಧ್ಯೆ, ಕಾಶಿ, ಹಾಗೂ ಶ್ರೀರಾಮನ ಕುರಿತಾದ ಪುರಾವೆಗಳು ಇರುವ ಎಲ್ಲ ಸ್ಥಳಗಳಿಗೆ ಭೇಟಿ ನೀಡಿದ್ದರು.
Advertisement
ತುಳಸಿದಾಸರ ರಾಮಚರಿತಮಾನಸ ಅವರ ಹುಟ್ಟೂರು ರಾಜಾಪುರದಲ್ಲಿ ಈಗಲೂ ಇದೆ. ಗೋಸ್ವಾಮಿ ತುಳಸಿದಾಸರು ಬರೆದ ನೂರಾರು ವರ್ಷಗಳ ಹಳೆಯ ಕೃತಿ ಇಂದಿಗೂ ಸುರಕ್ಷಿತವಾಗಿವೆ. ಶ್ರಾವಣ ಮಾಸದಲ್ಲಿ ಈ ಕೃತಿಯ ಅಪರೂಪದ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.
Advertisement
ರಾಮಚರಿತಮಾನಸನ ಸೇವಕ ರಾಮಾಶ್ರಯ, ಮಹಾಕಾವ್ಯವನ್ನು 76ನೇ ವಯಸ್ಸಿನಲ್ಲಿ ತುಳಸಿದಾಸರು ರಚಿಸಿದರು ಎಂದು ತಿಳಿಸಿದ್ದರು. ಈಗ ಅಯೋಧ್ಯೆ ವಿಷಯ ಕುರಿತು ಬರೆದ ಭಾಗ ಮಾತ್ರ ಉಳಿದಿದ್ದು, ಉಳಿದೆಲ್ಲವೂ ಕಣ್ಮರೆಯಾಗಿದೆ.
ರಾಮಾಶ್ರಯ ಅವರ ತುಳಸಿದಾಸರ ಕೈಬರಹದ ರಾಮಕಥೆಯನ್ನು ಓದುವ ತಿಳುವಳಿಕೆ ಇವರಿಗಿದೆ. ರಾಮಾಶ್ರಯರು ತುಳಸೀದಾಸರ ಶಿಷ್ಯರ 11ನೇ ತಲೆಮಾರಿನವರಾಗಿದ್ದು, ಅವರ ಕುಟುಂಬವು ಕಳೆದ 500 ವರ್ಷಗಳಿಂದ ಈ ಮಹಾನ್ ಗ್ರಂಥವನ್ನು ಸಂರಕ್ಷಿಸುತ್ತಿದ್ದಾರೆ. ಇವರ ಬರಹದಲ್ಲಿರುವ ಎಷ್ಟೋ ಪದ, ಅಕ್ಷರಗಳು ಪ್ರಸ್ತುತ ಹಿಂದಿಯಲ್ಲಿ ಇಲ್ಲ. ಕಳೆದ 50 ವರ್ಷಗಳಲ್ಲಿ ಹಿಂದಿಯಲ್ಲಿ ತುಂಬಾ ಬದಲಾವಣೆ ಆಗಿದೆ ಎಂಬುದು ಈ ಮೂಲಕ ತಿಳಿದುಬರುತ್ತೆ. ಇದನ್ನೂ ಓದಿ: ರಾಜಕೀಯಕ್ಕೆ ಬರ್ತಾರಾ ನಿರ್ದೇಶಕ ಪ್ರೇಮ್..?
ಜಪಾನೀಸ್ ತಂತ್ರಜ್ಞಾನದ ಬಳಕೆ!
ಈ ಪುಸ್ತಕವನ್ನು ಸಂರಕ್ಷಿಸಲು ಭಾರತದ ಪುರಾತತ್ವ ಇಲಾಖೆಯು ಜಪಾನಿನ ತಂತ್ರಗಳನ್ನು ಬಳಸಿದೆ. ಅದರಲ್ಲಿ ಕಾಗದವನ್ನು ಎಲ್ಲೆಲ್ಲಿ ತೆಗೆದರೂ ಅದನ್ನು ಜಪಾನೀಸ್ ಲೇಪನದ ಮೂಲಕ ಸೇರಿಸಲಾಗುತ್ತದೆ.